ಇವತ್ತು ತಮಿಳುನಾಡಿನಲ್ಲಿ ಜನ ಏನು ಮಾತಾಡುತ್ತಿದ್ದಾರೆ ಎಂದರೆ ...
ಟಿಎನ್‌ಎಲ್‌ಎ ಸ್ಥಾಪನೆ : ಕಲ್ಯಾಪೆರುಮಾಳ್ ಮತ್ತು ತಮಿಳರಸನ್ ಅವರು ತಮಿಳುನಾಡು ಮಾರ್ಕಿಸ್ಟ್ ಲೆನಿನಿಸ್ಟ್ ಪಕ್ಷ ಸ್ಥಾಪಿಸಿದರು. ಮುಂದೆ ಅದು ಟಿಎನ್‌ಎಲ್‌ಎ ಹೆಸರಿನಿಂದ ಪ್ರಸಿದ್ದವಾಯಿತು . 1987ರಲ್ಲಿ ತಿರುಚ್ಚಿ ಹತ್ತಿರದ ಮರುದಯಾರ್ ರೈಲು ಸೇತುವೆ ಆಕ್ರಮಣ ಮಾಡಿದ ಕಾರ್ಯಕರ್ತರು ರಾಕ್‌ಫೋರ್ಟ್ ಎಕ್ಸಪ್ರೆಸ್ ರೈಲಿನ ಹಳಿತಪ್ಪಿಸಿ 25 ಪ್ರಯಾಣಿಕರ ಸಾವಿಗೆ ಕಾರಣರಾದರು.
ಬ್ಯಾಂಕ್ ಒಂದನ್ನು ದೋಚುವ ಯತ್ನದಲ್ಲಿ ತಮಿಳರಸನ್ ಮತ್ತು ಆತನ ನಾಲ್ವರು ಸಹಚರರು ಹತರಾದರು. ನಂತರ ಟಿಎನ್‌ಎಲ್‌ಎ ವಿಭಜನೆಗೊಂಡಿತು. ಎರಡನೇ ಗುಂಪು ಟಿಎನ್‌ಆರ್‌ಎಫ್ ಎಂದು ನಾಮಕರಣ ಮಾಡಿಕೊಂಡಿತು. ಇದರ ಮೊದಲ ನಾಯಕನಾಗಿದ್ದವನು ಈಗ ಸೇಲಂನ ಜೈಲಿನಲ್ಲಿರುವ ಎಳವರಸನ್.
ಟಿಎನ್‌ಆರ್‌ಎಫ್‌ನಲ್ಲಿ ಹುಟ್ಟಿದ ಭಿನ್ನಾಭಿಪ್ರಾಯದಿಂದ ಬೇರೆಯಾದ ನಾಯಕನೇ ನೆಡುಮಾರನ್. ಎಲ್ಟಿಟಿಈನ ಕಟ್ಟಾ ಬೆಂಬಲಿಗನಾಗಿ ರೂಪುಗೊಂಡ ನೆಡುಮಾರನ್, 1990ರ ಸುಮಾರಿನಲ್ಲಿ ಸತ್ಯಮಂಗಲ ಅರಣ್ಯದಲ್ಲಿ ಎಲ್ಟಿಟಿಈ ನಿರಾಶ್ರಿತರಿಗೆ ಆಶ್ರಯ ಕೊಟ್ಟ ಖ್ಯಾತಿ ಹೊಂದಿದ್ದಾರೆ. ಆಗ ಪೋಲೀಸರು ಎಲ್ಟಿಟಿಈನ ಇಬ್ಬರು ಕಟ್ಟಾ ಉಗ್ರರಾದ ಕಿರುಬನ್ ಮತ್ತು ಶಾಂತನ್‌ಗಾಗಿ ಹುಡುಕುತ್ತಿದ್ದರು.
ತೆಕ್ಕೆಗೆ ಮುಸ್ಲಿಂ ಪ್ರತ್ಯೇಕತಾವಾದಿಗಳು : 1993ರಿಂದ ವೀರಪ್ಪನ್ ಪ್ರದೇಶವಾಗಿದ್ದ ಧರ್ಮಪುರಿ ಮತ್ತು ಈರೋಡ್‌ಗಳನ್ನು ತಮ್ಮ ವ್ಯಾಪ್ತಿಗೆ ಸೇರಿಸಿಕೊಂಡ ಟಿಎನ್‌ಎಲ್‌ಎ ಇವತ್ತು ಉಸುಲಾಂಪಟ್ಟಿ ಮತ್ತು ಥೇನಿ ಜಿಲ್ಲೆಗಳಲ್ಲಿ ಚಟುವಟಿಕೆಯಿಂದಿರುವ ಮುಸ್ಲಿಂ ಪ್ರತ್ಯೇಕತಾವಾದಿಗಳೊಂದಿಗೆ ಒಪ್ಪಂಧ ಮಾಡಿಕೊಂಡಿದ್ದಾರೆ. ಈ ಎಲ್ಲ ಹಿನ್ನಲೆಗಳಲ್ಲಿ ರಾಜ್ ಅಪಹರಣವನ್ನು, ವೀರಪ್ಪನ್ ತನ್ನ ಸಹಚರರೊಂದಿಗೆ ಲಂಕಾದ ಉತ್ತರ ಭಾಗಕ್ಕೆ ಪಲಾಯನ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದಾನೆ ಎಂಬ ಅನುಮಾನವನ್ನು ವ್ಯಕ್ತಪಡಿಸಲಾಗುತ್ತಿದೆ. ಇದು ತಮಿಳುನಾಡಿನಲ್ಲಿ ಹರಡಿರುವ ಲೇಟೆಸ್ಟ್ ವದಂತಿ.
ಎಲ್ಟಿಟಿಈ ಪರವಾಗಿ ಲಂಕಾದ ಹೊರಗೆ 1997ರಲ್ಲಿ ಸಮಾವೇಶ ನಡೆಸಿದ ಇತಿಹಾಸ ಹೊಂದಿರುವ ಇವತ್ತಿನ ಟಿಎನ್‌ಪಿಯ ನಾಯಕ ನೆಡುಮಾರನ್, ಸಂಧಾನಕಾರರಾಗಿ ಹೋಗುತ್ತಾರೆಂಬ ಸುದ್ದಿ ಬಂದಂದಿನಿಂದ ರಾಜ್ ಬಿಡುಗಡೆ ಖಚಿತ ಎಂಬ ಸುದ್ದಿಗಳೂ ಒಡಾಡಿದ್ದವು. ಇದನ್ನು ಬಳಸಿಕೊಂಡ ಜಯಲಲಿತಾ, ರಾಜ್‌ವ್‌ಗಾಂಧಿ ಹತ್ಯೆಯ ನಂತರ ಕರುಣಾನಿಧಿ ಅವರು ಎಲ್ಟಿಟಿಈ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರಲ್ಲದೆ, ಭಾರತ ಮತ್ತು ಲಂಕಾದ ಕೆಲವು ಪ್ರದೇಶಗಳನ್ನೊಳಗೊಂಡ ಪ್ರತ್ಯೇಕ ತಮಿಳು ರಾಷ್ಟ್ರದ ಅಧ್ಯಕ್ಷರಾಗುವ ಕನಸನ್ನೂ ಕಾಣುತ್ತಿದ್ದಾರೆ ಎಂದು ಗೇಲಿ ಮಾಡಿದ್ದಾರೆ.
ಎಲ್ಟಿಟಿಈಗೆ ಚಾಲನೆ : ತಮಿಳು ಮಾನಿಲ ಕಾಂಗ್ರೆಸ್‌ನ ಎಸ್. ಆರ್. ಬಾಲಸುಬ್ರಮಣ್ಯಂ ಅವರಂತೂ ಎಲ್ಟಿಟಿಈ ಚಟುವಟಿಕೆಗಳು ಮತ್ತೊಮ್ಮೆ ರಾಜ್ಯದಲ್ಲಿ ತಲೆ ಎತ್ತಲಿವೆ ಎಂದು ಹೇಳಿದ್ದಾರೆ. ತಮಿಳುರಾಷ್ಟ್ರೀಯವಾದಿಗಳೇ ಅಧಿಕವಾಗಿರು ವ ರಾಜ್ಯದ ಅನೇಕ ಭಾಗಗಳಲ್ಲಿ ಮುಂಬರುವ ಚುನಾವಣೆಯಲ್ಲಿ ಡಿಎಂಕೆಗೆ ಲಾಭವಾಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ರಾಜ್ ಅಪಹರಣ ಪ್ರಕರಣದಿಂದ ವೀರಪ್ಪನ್‌ನ ಈ ಹಿಂದಿನ ಇಮೇಜು ಬದಲಾಗುತ್ತಿದೆ. ಇನ್ನೊಂದು ಕಡೆ ಎಲ್ಲ ಬೆಳವಣಿಗೆಗೆಳು ಭಾರತ ಮತ್ತು ಲಂಕಾಗಳ ಭದ್ರತೆಗೆ ತಲೆನೋವಾದರೂ ಆಶ್ಚರ್ಯವಿಲ್ಲ. ಆದರೆ ಒಟ್ಟಿನಲ್ಲಿ ಕುರಿ ಕಾಯಲು ತೋಳನ ನೇಮಕವಾದಂತೆ ಆಗದಿದ್ದರೆ ಸಾಕೆಂದು ಎಲ್ಲರೂ ಆಶಿಸುತ್ತಿದ್ದಾರೆ.
ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications