ಎನ್‌ಆರ್‌ಐಗಳಿಗಾಗಿ ಎಸ್‌ಬಿಐನ ಹೊಸ ಯೋಜನೆ- ಇಂಡಿ-ಯಾ ಮಿಲೆ-ನಿ-ಯಂ --ಡೆ-ಪಾಸಿ-ಟ್
*ಶಿವಕುಮಾರ್
ಮುಂಬಯಿ : ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ 5 ಬಿಲಿಯನ್ ಡಾಲರ್‌ಗಳ ದೀರ್ಘಾವಧಿ ಠೇವಣಿ ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಮ್ಮಿಕೊಂಡಿದೆ.
ದೇಶದ ಅತೀ ದೊಡ್ಡ ವಾಣಿಜ್ಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ, ಇಂಡಿಯಾ ಮಿಲೇನಿಯಂ ಡೆಪಾಸಿಟ್(ಐಎಂಡಿ) ಸ್ಕೀಂ ಅಕ್ಟೋಬರ್ 21ರಂದು ಆರಂಭವಾಗುತ್ತಿದ್ದು, ಹತ್ತು ದಿನಗಳ ಕಾಲ ಹಣ ಸ್ವೀಕರಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಜಿ. ಜಿ. ವಾಡಿಯಾ ಪತ್ರಕರ್ತರಿಗೆ ತಿಳಿಸಿದ್ದಾರೆ.
ಅನಿವಾಸಿ ಭಾರತೀಯರಿಗೆ ಮೀಸಲಾಗಿರುವ ಈ ಸ್ಕೀಮ್‌ನಲ್ಲಿ ಅಮೆರಿಕಾದವರ ಹೊರತಾಗಿ ಉಳಿದ ದೇಶಗಳಲ್ಲಿ ವಾಸಿಸುವವರು ಹಣ ತೊಡಗಿಸಬಹುದು. ವಿದೇಶೀ ವಿನಿಮಯದ ನಿಯಮಾವಳಿಗಳ ಕ್ಲಿಷ್ಟತೆಯಿಂದಾಗಿ ಅಮೆರಿಕಾವಾಸಿ ಭಾರತೀಯರು ಈ ಸ್ಕೀಂನಲ್ಲಿ ಭಾಗವಹಿಸುವಂತಿಲ್ಲ . ಆದರೆ ಓವರ್ ಸೀಸ್ ಕಾರ್ಪರೇಟ್ ಸಂಸ್ಥೆಗಳು ಈ ಯೋಜನೆಯ ವ್ಯಾಪ್ತಿಯಲ್ಲಿ ಬರಲಿದ್ದು ವಿದೇಶೀ ಹಣವನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ವಾಡಿಯಾ ಹೇಳಿದರು.
ರಿಸರ್ಜೆಂಟ್ ಇಂಡಿಯಾ ಬಾಂಡ್‌ಗಳ ಮೂಲಕ 1998ರ ಜುಲೈಯಲ್ಲಿ ಎಸ್‌ಬಿಐ 4.2 ಬಿಲಿಯನ್ ಡಾಲರ್ ಹಣ ಸಂಗ್ರಹಿಸಿತ್ತು.
ಸ್ಕೀಂನ ಬಡ್ಡಿದರಗಳು : ಈ ಸ್ಕೀಂನ ಪ್ರಕಾರ ಅಮೆರಿಕಾದ ಡಾಲರ್‌ಗಳಿಗೆ ವಾರ್ಷಿಕ ಶೇ 8.5, ಇಂಗ್ಲೆಂಡ್ ಪೌಂಡ್ ಸ್ಟರ್ಲಿಂಗ್‌ಗೆ ಶೇ 7.85, ಮತ್ತು ಯೂರೋಗೆ ಶೇ 6. 85ರಷ್ಟು ಬಡ್ಡಿ ದೊರೆಯಲಿದೆ. ಐದು ವರ್ಷಗಳ ಅವಧಿಯ ಈ ಠೇವಣಿ ಯೋಜನೆಯಲ್ಲಿ ಬೇಕಿದ್ದಲ್ಲಿ ಗ್ರಾಹಕರಿಗೆ ಅರ್ಧ ವರ್ಷಕ್ಕೊಮ್ಮೆ ಬಡ್ಡಿ ಯ ಹಣ ನೀಡಲಾಗುವುದು.
ಅನಿವಾಸಿ ಭಾರತೀಯರಿಬ್ಬರು ಜಂಟಿಯಾಗಿಯೂ ಈ ಖಾತೆ ತೆರೆಯಬಹುದು. ಅಥವ ಅನಿವಾಸಿ ಭಾರತೀಯನೊಬ್ಬ ತನ್ನ ಭಾರತವಾಸಿ ಸ್ನೇಹಿತನೊಂದಿಗೂ ಈ ಬಾಂಡ್‌ನ ಪ್ರಯೋಜನ ಪಡೆಯಬಹುದು. ಇಲ್ಲಿ ಗ್ರಾಹಕರಿಗೆ ಭಾರತೀಯ ಆದಾಯ ತೆರಿಗೆಗಳಂತಹ ಇತರ ತೆರಿಗೆಳ ಕಿರಿಕಿರಿಯೂ ಇರುವುದಿಲ್ಲ. ಬ್ಯಾಂಕಿನಲ್ಲಿ ಗ್ರಾಹಕರು ಹಣ ಪಡೆಯುವಾಗ ಅಥವಾ ಈ ಬಾಂಡ್ ಮೇಲೆ ಲೋನ್ ಪಡೆಯುವಾಗ ರೂಪಾಯಿಗಳಲ್ಲಿ ಅಥವ ಇತರ ಯಾವುದೇ ಕರೆನ್ಸಿಯಲ್ಲಿ ಹಣ ಕೈ ಸೇರುತ್ತದೆ. ಆರು ತಿಂಗಳ ನಂತರ ಅವಧಿ ಪೂರ್ಣವಾಗುವ ಮುನ್ನ ಹಣ ಬೇಕಿದ್ದಲ್ಲಿ ಯಾವುದೇ ದಂಡ ಶುಲ್ಕವಿಲ್ಲದೇ ಹಣ ವಾಪಾಸಾಗುತ್ತದೆ.
ಈ ಸ್ಕೀಂನ ಮೂಲಕ ಸಂಗ್ರಹಿಸಲಾಗುವ ಹಣವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿ-ಗೆ ಆರ್ಥಿಕ ಸಂಪನ್ಮೂಲವನ್ನಾಗಿ ಬಳಸಿಕೊಳ್ಳಲಾಗುವುದು ಎಂದು ಎಸ್‌ಬಿ ಐ ಪ್ರಕಟಣೆ ಹೇಳುತ್ತದೆ. ಈಗಾಗಲೇ ಮೂಲಭೂತ ಸೌಲಭ್ಯಗಳಿಗೆ ಆರ್ಥಿಕ ನೆರವು ನೀಡಲು ಬ್ಯಾಂಕ್ ಒಪ್ಪಿಕೊಂಡಿರುವ ನಿಟ್ಟಿನಲ್ಲಿ ಹೊಸ ಸ್ಕೀಂ ಸಹಾಯಕವಾಗುತ್ತದೆ. ಅಂತರರಾಷ್ಟ್ರೀಯ ಸಂಪನ್ಮೂಲವನ್ನು ಹಿಡಿದಿಡುವುದು ಪ್ರಸ್ತುತ ದೇಶಕ್ಕೆ ಅಗತ್ಯವಾಗಿರುವುದರಿಂದ ಈ ಸ್ಕೀಂಗೆ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಸಾಕಷ್ಟು ಪ್ರಚಾರ ನೀಡಲಾಗಿದೆ ಎಂದು ಎಸ್‌ಬಿಐ ಅಧಿಕಾರಿಗಳು ಹೇಳುತ್ತಾರೆ.
(ಐಎಎನ್‌ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications