Get Updates
Get notified of breaking news, exclusive insights, and must-see stories!

ವೀರಪ್ಪನ್‌ ಸಹಚರರ ಬಿಡುಗಡೆಗೆ ರಾಜ್ಯ ಸರಕಾರದ ಇಬ್ಬಂದಿ ನಿಲುವು

ಬೆಂಗಳೂರು : ರಾಜ್‌ ಬಿಡು-ಗ-ಡೆ ಸಂಬಂ-ಧ, ವೀರ-ಪ್ಪನ್‌ ಸಹ-ಚ-ರ-ರ-ನ್ನು ಬಿಡು-ಗ-ಡೆ-ಗೊ-ಳಿಸಲು ರಾಜ್ಯ ಸರ-ಕಾ-ರ ತಾ-ಳಿರು-ವ ಇಬ್ಬಂ-ದಿ ನಿಲು-ವಿ-ಗೆ ನಿಚ್ಚ-ಳ ಉದಾ-ಹ-ರ-ಣೆ ಇಲ್ಲಿ-ದೆ.

ಮೈಸೂರು ಜೈಲಿನಲ್ಲಿರುವ 51 ವೀರಪ್ಪನ್‌ ಸಹಚರರನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಸರಕಾರ ಮೈಸೂರಿನ ವಿಶೇಷ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿರುವುದು, ಅದಕ್ಕೆ ವಿಶೇಷ ಕೋರ್ಟ್‌ ಅನುಮತಿ ನೀಡಿರುವುದನ್ನು ಸುಪ್ರೀಂಕೋರ್ಟ್‌ ತಡೆಹಿಡಿದಿರುವುದು ಸರಿಯಷ್ಟೆ.

ಇನ್ನೊಂದು ಪ್ರಕರಣ ನೋಡಿ, ಗಂಧದ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿದ್ದ 21 ವೀರಪ್ಪನ್‌ ಸಹಚರರ ಮೇಲಿನ ಮೊಕದ್ದಮೆಯನ್ನು ಮೈಸೂರಿನ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌, ವಜಾ ಮಾಡಿ ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿದೆ.

21 ಸಹಚರರು ಯಾರು ?: ವೀರಪ್ಪನ್‌ ವಿರುದ್ದದ ವಿಶೇಷ ಕಾರ್ಯಾಚರಣೆಪಡೆಯ ಆಗಿನ ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಕೆ.ಯು. ಶೆಟ್ಟಿ ಮತ್ತು ಮತ್ತು ಡೆಪ್ಯುಟಿ ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಎಂ. ಡಿ. ಸಿಂಗ್‌ ಅವರ ನೇತೃತ್ವದ ತಂಡ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಸೊರಕೆ ಮಡುವಿನ ಹತ್ತಿರ ನಡೆದ ಗುಂಡಿನ ತೀವ್ರ ಚಕಮುಖಿಯ ನಂತರ 1991 ಏಪ್ರಿಲ್‌ 4ರಂದು ಬಂದಿಸಿ, ಅವರಿಂದ 740 ಕೆಜಿ ಶ್ರೀಗಂಧ ಮತ್ತು ಕೆಲವು ಆಯುಧಗಳನ್ನು ವಶಪಡಿಸಿಕೊಂಡಿತ್ತು.

ಮೈಸೂರಿನ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ನಲ್ಲಿ ಸುಮಾರು 9 ವರ್ಷ ನಡೆದ ವಿಚಾರಣೆ ನಂತರ ಏಪ್ರಿಲ್‌ 4. 2000ರಂದು ನ್ಯಾಯಾದೀಶರಾದ ರಾಧಾಕೃಷ್ಣ ಹೊಳ್ಳ ಅವರು ಬೇರೆ ಯಾವುದೇ ಕೊರ್ಟ್‌ನಲ್ಲಿ , ಯಾವುದೇ ವಿಚಾರವಾಗಿ ಮೊಕದ್ದಮೆ ಎದುರಿಸುತ್ತಿರಬಾರದು ಎಂಬ ಶರತ್ತಿನ ಮೇಲೆ 20 ಜನ ಆರೋಪಿಗಳನ್ನು ಖುಲಾಶೆಗೊಳಿಸಿದ್ದರು. ಆರೋಪಿಗಳಲ್ಲಿ ಒಬ್ಬ ನ್ಯಾಯಾಂಗ ವಶದಲ್ಲಿದ್ದಾಗ ಮೃತಪಟ್ಟಿದ್ದನು. ಈಗ ಈ ತೀರ್ಪಿನ ವಿರುದ್ದ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿದೆ. ಪದ್ಮರಾಜ್‌ ಮತ್ತು ಎಸ್‌. ಆರ್‌. ಬನ್ನೂರುಮಠ ಅವರನ್ನೊಳಗೊಂಡ ನ್ಯಾಯಪೀಠ, ಗುರುವಾರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದು ಪ್ರತಿವಾದಿಗಳಿಗೆ ನೊಟೀಸ್‌ ಜಾರಿ ಮಾಡಿದೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+