Get Updates
Get notified of breaking news, exclusive insights, and must-see stories!

ಪ್ರತ್ಯೇಕತಾವಾದಕ್ಕೆ ಭಾಷೆ ಏಕೈಕ ಮಾನದಂಡ: ಮಾರನ್‌ ವಾದ

ಟೀಕೆ ಏನೇ ಇದ್ದರೂ ಕಳೆದ ಒಂದು ವರ್ಷದಿಂದ ನೆಡುಮಾರನ್‌, ತನ್ನ ರಾಷ್ಟ್ರೀಯವಾದವನ್ನು ಎಲ್ಟಿಟಿಈ ಜೊತೆಗೆ ಥಳುಕು ಹಾಕುತ್ತಿದ್ದಾರೆ. ಹಾಗಾಗಿ ಅವರಿಗೆ ಭಾಷೆಯ ಏಕೈಕ ಮಾನದಂಡದ ಮೇಲೆ ಪ್ರತ್ಯೇಕ ತಮಿಳು ರಾಷ್ಟ್ರದ ಉದಯ ಆಗಲೇಬೇಕಿದೆ.

ನೆಡುಮಾರನ್‌ ಪ್ರಕಾರ ಎಲ್ಟಿಟಿಈ ಭಯೋತ್ಪಾದಕ ಸಂಘಟನೆಯಲ್ಲ. ಲಂಕಾದಲ್ಲಿ ಎರಡನೇ ಪ್ರಜೆಗಳಂತೆ ತಮಿಳರನ್ನು ಕಾಣುತ್ತಿದ್ದು, ಅದರ ವಿರುದ್ದ ತಮಿಳರು ಹೋರಾಡುತ್ತಿದ್ದಾರೆ. ಇಂಥ ಹೇಳಿಕೆಗಳನ್ನು ತಮಿಳುನಾಡಿನಾದ್ಯಂತ ಇವತ್ತು ಬಿತ್ತರಿಸುತ್ತಿರುವವರು ಮಾರನ್‌. ಇವತ್ತು ತಮಿಳು ಈಳಂ ಬೆಂಬಲಿಗರ ಸಹಕಾರ ಸಮಿತಿಯ ಖಜಾಂಚಿಯಾಗಿ ಮಾರನ್‌ ಕೆಲಸ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ರ್ಯಾಲಿಗಳನ್ನು ನೆಡೆಸಲು ಯತ್ನಿಸುತ್ತಾರೆ ಆದರೆ ಸರಕಾರ ಅವುಗಳಿಗೆ ನಿರ್ಬಂಧ ಹೇರುತ್ತಲೇ ಬಂದಿದೆ.

ಎಲ್ಟಿಟಿಈ ಪರ ಕರಪತ್ರ : ಎಲ್ಟಿಟಿಈ ವಿರುದ್ಧ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಮಾರನ್‌ ಅವರನ್ನು ಸಿಟ್ಟಿಗೇಳಿಸುತ್ತದೆ. ಈ ವರ್ಷ ಕೇಂದ್ರ ಸರಕಾರ ಎಲ್ಟಿಟಿಈ ಮೇಲಿನ ನಿಷೇಧವನ್ನು ಇನ್ನೂ ಮೂರು ವರ್ಷ ಮುಂದುರಿಸಲು ನಿರ್ಧರಿಸಿದಾಗ, ಇದು ಕಾನೂನುಬಾಹಿರ ಎಂದು ಕರಪತ್ರ ಹಂಚಿದವರು ಈ ಮಾರನ್‌. ತಮ್ಮ ತಾಯ್ನಾಡಿನ ಬಿಡುಗಡೆಗಾಗಿ ಹೋರಾಡುತ್ತಿರುವ ಲಂಕಾದ ಅಣ್ಣ-ತಮ್ಮಂದಿರ ರಕ್ಷಣೆಗೆ ಧಾವಿಸಬೇಕಾದುದು ಎಲ್ಲ ತಮಿಳರ ಕರ್ತವ್ಯ ಎನ್ನುವ ವಾದ ಅವರದು. ಮಾರನ್‌ ಅವರಿಗೆ ಕ್ರಮವಾಗಿ ಪಟ್ಟಾಳಿ ಮಕ್ಕಳ ಕಚ್ಚಿ ಮತ್ತು ಎಂಡಿಎಂಕೆ ನಾಯಕರಾದ ಡಾ. ಎಸ್‌. ರಾಮದಾಸ್‌ ಹಾಗೂ ವಿ. ಗೋಪಾಲಸ್ವಾಮಿ ಅವರ ಬೆಂಬಲವೂ ಇದೆ.

ರಾಮದಾಸ್‌ ಮತ್ತು ವೈಕೋ ಅವರಂತೆಯೇ ನೆಡುಮಾರನ್‌ ಅವರು ರಾಜಕೀಯವಾಗಿ ನಡೆದು ಬಂದ ದಾರಿ ಸರಿಯಾಗೇನೂ ಇಲ್ಲ. ಕಾಮರಾಜ್‌ ಅವರ ಜೊತೆ ಕಾಂಗ್ರೆಸ್ಸಿಗರಾಗಿ ರಾಜಕೀಯ ಪ್ರಾರಂಭಿಸಿದ ಮಾರನ್‌, ಇಂಧಿರಾಗಾಂಧಿಯವರನ್ನೂ ಕಾಮರಾಜ್‌ ಜೊತೆ ಹೋಗಿ ಎರಡು ಬಾರಿ ಭೇಟಿ ಮಾಡಿದ್ದಾರೆ. ಹಾಗೆಯೇ ಹಿಂದೆ ಒಮ್ಮೆ ಇಂದಿರಾಹಗಾಂಧಿ ಮದ್ರಾಸ್‌ಗೆ ಭೇಟಿ ನೀಡಿದ್ದ ಸಮಯದಲ್ಲಿ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದಾಗ ಉಂಟಾದ ಘರ್ಷಣೆ ಸಂದರ್ಭದಲ್ಲಿ ಇಂದಿರಾ ಅವರನ್ನು ರಕ್ಷಿಸಿದ ಖ್ಯಾತಿಯೂ ಇವರ ಹೆಗಲಿಗಿದೆ. ಮುಂದೆ ಕಾಮರಾಜ್‌ ಮರಣಾನಂತರ ಕಾಂಗ್ರೆಸ್‌ ಅನ್ನು ಟೀಕಿಸಿ 1979ರಲ್ಲಿ ಹೊರಹಾಕಲ್ಪಟ್ಟರು. ತಮಿಳುನಾಡು ಕಾಮರಾಜ ಕಾಂಗ್ರೆಸ್‌ ಎಂಬ ಪ್ರಾದೇಶಿಕ ಸಂಘಟನೆಯನ್ನೂ ಕಟ್ಟಿದರು. ಈ ಸಂಘಟನೆಯ ನಿಯಮದಂತೆ ಚುನಾವಣೆಗೆ ನಿಲ್ಲದಂತೆ ತಮಿಳರ ಪರವಾದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಮಧುರೈ ಮಾರನ್‌ : 1987ರಲ್ಲಿ ಭಾರತೀಯ ಶಾಂತಿ ಪಾಲನಾ ಪಡೆ ಲಂಕಾ ನೆಲದಲ್ಲಿ ಕಾಲಿಟ್ಟಾಗ ಮಾರನ್‌ ಉರಿದು ಬಿದ್ದರು. ಕಾಂಗ್ರೆಸ್‌ನ ಕಟ್ಟಾ ವಿರೋಧಿಯಾದರು. ರಾಜೀವ್‌ಗಾಂಧಿ ಲಂಕಾದೊಂದಿಗೆ ಒಪ್ಪಂದ ಮಾಡಿಕೊಂಡಾಗ ಮಧುರೈಯಿಂದ ಕನ್ಯಾಕುಮಾರಿಯವರೆಗೆ ಏರ್ಪಡಿಸಲಾದ ರ್ಯಾಲಿಯ ನೇತೃತ್ವವನ್ನು ಮಾರನ್‌ ವಹಿಸಿಕೊಂಡು ಮಧುರೈ ನೆಡುಮಾರನ್‌ ಆದರು.

ತಮಿಳುನಾಡಿನಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಟಿಡಿಐನ ನಾಯಕ ಮಾರನ್‌, ರಾಜೀವ್‌ ಹತ್ಯೆ ಪ್ರಕರಣದಲ್ಲಿ ಭಾಗಿಗಳಾದ 26 ಆರೋಪಿಗಳಿಗೆ ಆಶ್ರಯ ನೀಡಿದ ಮತ್ತು ಎಲ್ಟಿಟಿಈ ಪರವಾದ ದೇಣಿಗೆದಾರರಿಂದ 4 ಕೋಟಿ ರುಪಾಯಿಗಳನ್ನು ಸಂಗ್ರಹಿಸಿದ ಆರೋಪ ಎದುರಿಸುತ್ತಿದ್ದಾರೆ.

ಎಲ್ಲ ಆರೋಪಗಳನ್ನೂ ನಿರಾಕರಿಸುವ ನೆಡುಮಾರನ್‌, ತಮ್ಮ ತಮಿಳುರಾಷ್ಟ್ರೀಯ ವಾದಕ್ಕೆ ಪ್ರಪಂಚಾದ್ಯಂತ ಇರುವ ಎಲ್ಲ ತಮಿಳಿಗರ ಬೆಂಬಲಕ್ಕೆ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಅವರ ಹೋರಾಟದ ಕಾರ್ಯತಂತ್ರ ‘ತಮಿಳು’ ಎಂಬ ಒಂದೇ ಪದದ ಮೇಲೆ ನಿಂತಿದೆ ಎಂಬ ಬಗ್ಗೆ ಯಾರಿಗೂ ಅನುಮಾನವಿಲ್ಲ. ಅವರ ಪ್ರಕಾರ ತಮಿಳುನಾಡಿನ ಅಧಿಕೃತ ಭಾಷೆ ತಮಿಳು ಆಗಬೇಕು. ತಮಿಳು ಬೋಧನಾ ಮಾಧ್ಯಮವಾಗಬೇಕು ದೇವಸ್ಥಾನಗಳಲ್ಲೂ ತಮಿಳು ಇರಬೇಕು. ಇದು ಮಾರನ್‌ ಹೆಸರು ಚಾಲನೆಯಲ್ಲಿರಲು ಕಾರಣವಾದ ಹಿನ್ನಲೆ.

(ಇನ್ಫೋ ವರದಿ)

ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+