Get Updates
Get notified of breaking news, exclusive insights, and must-see stories!

ನೆಡುಮಾರನ್‌ ಯಾರು? ಅವರ ಹಿನ್ನೆಲೆ ಏನು?

Nedumaranಚೆನ್ನೈ: ಅಪಹರಣ ಪ್ರಕರಣದಲ್ಲಿ ಅನಿವಾರ್ಯ ಎಂಬಂತೆ ಬಂದ ಈ ನೆಡುಮಾರನ್‌ ಯಾರು? ಹಿನ್ನಲೆ ಏನು ಎಂಬ ಅನೇಕ ಪ್ರಶ್ನೆಗಳು ರಾಜ್‌ ಅಪಹರಣ ಪ್ರಕರಣದಲ್ಲಿ ನೆಡುಮಾರನ್‌ ಪ್ರವೇಶವಾದಂದಿನಿಂದ ಹುಟ್ಟಿಕೊಂಡಿವೆ.

ಕಟ್ಟಾ ಪ್ರತ್ಯೇಕತಾವಾದಿ, ಎಲ್ಟಿಟಿಈ ಮುಖಂಡ ಪ್ರಭಾಕರ್‌ ಬೆಂಬಲಿಗ, ಕಟ್ಟಾ ತಮಿಳು ರಾಷ್ಟ್ರೀಯವಾದಿ ಎಂಬ ವಾಕ್ಯಗಳಿಗೆ ಅನ್ವರ್ಥದಂತಿರುವ ನೆಡುಮಾರನ್‌, ಅವರ ಮದ್ಯಪ್ರವೇಶದಿಂದಲೇ ಸುಮಾರು ಮೂರು ತಿಂಗಳ ಅಪಹರಣ ಪ್ರಕರಣಕ್ಕೆ ಅಂತ್ಯ ಸಿಗಲಿದೆ ಎಂಬ ಮಾತು ಹುಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕಾಲದ ವಿಪರ್ಯಾಸ ಮಾತ್ರ ಎಂದು ಹೇಳಲೇಬೇಕಾಗಿದೆ. ಅಪಹರಣ ಪ್ರಕರಣಕ್ಕೆ ಅಂತ್ಯ ಕಂಡ ತಕ್ಷಣ, ನೆಡುಮಾರನ್‌ ಅವರನ್ನು ಬಳಸಿಕೊಂಡದ್ದಕ್ಕೆ ಕರುಣಾನಿಧಿ ಸರಕಾರ ಭಾರೀ ಬೆಲೆ ತೆರಲೇಬೇಕಾಗುತ್ತದೆ ಎಂಬ ಮಾತುಗಳು ತಮಿಳುನಾಡಿನಲ್ಲಿ ಕೇಳಿಬರುತ್ತಿವೆ.

ನೆಡುಮಾರನ್‌ ಹಿನ್ನಲೆ ಏನು ?: ತಮಿಳು ದೇಶೀಯ ಇಯಕ್ಕಂ (ಟಿಡಿಐ) ನ ನಾಯಕ ನೆಡುಮಾರನ್‌, ತಮ್ಮ ಮತ್ತು ಎಲ್ಟಿಟಿಈ ನಡುವಿನ ಅವಿನಾಭಾವ ಸಂಬಂಧದಿಂದ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ. ಕಳೆದ ವರ್ಷ ಜಾಫ್ನಾದಲ್ಲಿ ಶ್ರೀಲಂಕಾ ಸೇನೆ ಎಲ್ಟಿಟಿಈ ಉಗ್ರಗಾಮಿಗಳನ್ನು ಸುತ್ತುವರಿದಾಗ ಚೆನ್ನೈನಲ್ಲಿ ತಮಿಳು ಉಗ್ರರ ಪರ ಸಭೆ ನಡೆಸಲು ಯತ್ನಿಸಿ ಕರುಣಾನಿಧಿ ಸರಕಾರದಿಂದ ನಿರ್ಭಂದ ಎದುರಿಸಿ ಸುದ್ದಿ ಮಾಡಿದ್ದರು. ರಾಜೀವ್‌ಗಾಂಧಿ ಹತ್ಯೆಯಲ್ಲಿ ಭಾಗಿಗಳಾದ ಆರೋಪದ ಮೇಲೆ ಸುಪ್ರೀಂಕೋರ್ಟ್‌ ನಾಲ್ವರಿಗೆ ಮರಣದಂಡನೆ ವಿಧಿಸಿದಾಗ ಈ ನೆಡುಮಾರನ್‌ ತೀರ್ಪನ್ನು ಪುನಾಪರಿಶೀಲಿಸುವಂತೆ ಮನವಿ ಸಲ್ಲಿಸಿದ್ದರು.

ಕೋರ್ಟ್‌ ಮನವಿ ತಿರಸ್ಕರಿಸಿದಾಗ ಸಹಿ ಸಂಗ್ರಹಕ್ಕಿಳಿದ ಮಾರನ್‌, ಅದನ್ನು ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರಿಗೆ ಸಲ್ಲಿಸಿದ್ದರು.

ಉಗ್ರ ಟೀಕೆ : ಇಂಥ ಹಿನ್ನಲೆಯಿರುವ ಮಾರನ್‌ ಅವರನ್ನು ಸಂಧಾನಕ್ಕೆ ಕಳಿಸಲು ಕರುಣಾನಿಧಿ ಅವರಿಗೆ ಇದ್ದ ಒತ್ತಡವಾದರೂ ಏನು ಎಂದು ಎಲ್ಲರೂ ಕೇಳುತ್ತಿದ್ದಾರೆ. ಇಂಥ ಪ್ರಶ್ನೆಯ ಮೊನೆಯಿಡಿದು ಜಯಲಲಿತಾ ಈಗಾಗಲೇ ಗುಡುಗಿದ್ದಾರೆ. ರಾಜ್‌ ಅಪಹರಣ ಪ್ರಕರಣದಲ್ಲಿ ಕೇವಲ ವೀರಪ್ಪನ್‌ ಪಾತ್ರವಿದ್ದಿದ್ದರೆ ಬಹುಶಃ ಮಾರನ್‌ ಸಹಾಯ ಬೇಕಾಗಿರಲಿಲ್ಲ. ಪ್ರಕರಣದಲ್ಲಿ ಎಲ್ಟಿಟಿಈ ಅಲ್ಲದೆ ತಮಿಳು ಉಗ್ರಗಾಮಿ ಸಂಘಟನೆಗಳಾದ ತಮಿಳುನಾಡು ಲಿಬರೇಷನ್‌ ಆರ್ಮಿ (ಟಿಎನ್‌ಎಲ್‌ಎ), ತಮಿಳುನಾಡು ರಿಟ್ರೆೃವಲ್‌ ಫೋರ್ಸ್‌ (ಟಿಎನ್‌ಆರ್‌ಎಫ್‌) ಕೈವಾಡವಿದೆ ಎಂಬ ಊಪಾಪೋಹಗಳಿಗೆ ಈಗಾಗಲೇ ಅನೇಕ ಪುರಾವೆಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಅವುಗಳೆಲ್ಲವುಗಳ ಜೊತೆ ನಿಕಟ ಸಂಬಂಧ ಹೊಂದಿರುವ ನೆಡುಮಾರನ್‌ ಅವರ ಮಧ್ಯಸ್ಥಿಕೆ ಅನಿಮಾರ್ಯವಾಗಿ ಬೇಕಾದಂತಹ ಸ್ಥಿತಿ ನಿರ್ಮಾಣವಾಯಿತು ಎನ್ನಲಾಗುತ್ತಿದೆ.

ತಮಿಳು ರಾಷ್ಟ್ರೀಯವಾದಿ ಚಿಂತನೆಯನ್ನು ಬಹಳ ಕಾಲ ಜೀವಂತವಿಟ್ಟುಕೊಂಡು ಬಂದ ಖ್ಯಾತಿ ನೆಡುಮಾರನ್‌ಗೆ ಸಲ್ಲುತ್ತದೆ. ಹೀಗಾಗಿ ತಮಿಳು ರಾಷ್ಟ್ರೀಯವಾದಿಗಳ ಸಂಧಾನ ನೈಪುಣ್ಯತೆಯನ್ನು ಬೆಳಕಿಗೆ ತಂದ ಮೊದಲ ಪ್ರಕರಣವೂ ರಾಜ್‌ ಅಪಹರಣ ಪ್ರಕರಣವಾಗಿ ಇತಿಹಾಸದಲ್ಲಿ ದಾಖಲಾಗಬಹುದು.

ಎಲ್ಟಿಟಿಈ ಪ್ರತಿನಿಧಿ : ವಿರೋಧಿಗಳ ಪ್ರಕಾರ ನೆಡುಮಾರನ್‌ ಅವರ ಎಲ್ಟಿಟಿಈ ಪರವಾದ ನಿಲುವು ಅಕ್ಷಮ್ಯ. ಹಾಗಾಗಿ ಮಾರನ್‌ ಚೆನ್ನೈನ ಎಲ್ಟಿಟಿಈ ಪ್ರತಿನಿಧಿಯಂತಿದ್ದಾರೆ. ಇದಕ್ಕೆ ಇಂಬುಕೊಡುವಂತೆ ಇವತ್ತಿಗೂ ಎಲ್ಟಿಟಿಈ ಮುಖ್ಯಸ್ಥ ಪ್ರಭಾಕರನ್‌ ಅವರ ಫೋಟೋ ಮಾರನ್‌ ಕಛೇರಿಯಲ್ಲಿ ನೇತಾಡುತ್ತಿದೆ. ಈ ಎಲ್ಲ ಪ್ರಭಾವಗಳ ಮೇಲೆ ಸಂಧಾನಕಾರರಾಗಿರುವ ಮಾರನ್‌ ಅವರನ್ನು ಇಡೀ ರಾಜ್ಯದ ಅಧಿಕಾರಿಶಾಹಿ ಮತ್ತು ಪೋಲೀಸರು ಹ್ಯಾಪು ಮೋರೆ ಹಾಕಿಕೊಂಡು ನೋಡುವಂತಾಗಿದೆ.

ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+