ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರ-ಡು ವರ್ಷಗ-ಳ ಕೋರ್ಸಿಗೆ ಅರ್ಹತೆ

By Staff
|
Google Oneindia Kannada News

ವಿಜ್ಞಾನ ಮತ್ತು ಗಣಿತ ಅಥವ ಕಂಪ್ಯೂಟರ್‌ ವಿಜ್ಞಾನ ವಿಷ-ಯ-ಗ-ಳ-ಲ್ಲಿ ಶೇ 55 ಅಂಕ ಪಡೆದ ಪದ-ವೀ-ಧ-ರ-ರು ಈ ಕೋರ್ಸಿಗೆ ಪ್ರವೇಶ ಪರೀಕ್ಷೆ ಬರೆಯಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರಾದರೆ ಶೇ 50 ಅಂಕಗಳಿದ್ದರೆ ಸಾಕು. ಎರಡು ವರ್ಷಗಳಲ್ಲಿ ನಾಲ್ಕು ಸೆಮಿಸ್ಟರ್‌ಗಳಿರುತ್ತವೆ. ಕಂಪ್ಯೂಟರ್‌ ನೆಟ್‌ವರ್ಕ್‌, ಡೇಟಾ ಕಮ್ಯೂನಿಕೇಷನ್ಸ್‌ , ಕಂಪ್ಯೂಟರ್‌ ಗ್ರಾಫಿಕ್ಸ್‌ ಮತ್ತು ಬಹು ಮಾಧ್ಯಮ(ಮಲ್ಟಿ ಮೀಡಿಯಾ), ಸಿಸ್ಟಂ ಅಡ್ಮಿನಿಸ್ಟ್ರೇಷನ್‌ ಮತ್ತು ಇಂಟರ್‌ನೆಟ್‌ ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ನಾಲ್ಕನೇ ಸೆಮಿಸ್ಟರ್‌ನಲ್ಲಿ ಯಾವುದಾದರೂ ಉತ್ತಮ ಐಟಿ ಕಂಪೆನಿಯಲ್ಲಿ ವಿದ್ಯಾರ್ಥಿಗಳು ಯೋಜನಾ ವರದಿ (ಪ್ರೊಜೆಕ್ಟ್‌) ತಯಾರಿಸಬೇಕು.

ಇನ್ಫ್‌ರ್ಮೇಷನ್‌ ಸಿಸ್ಟಮ್ಸ್‌ಗೆ ಸಂಬಂಧಿಸಿದ ಪ್ರಯೋಗಾಲಯವನ್ನು 20 ಲಕ್ಷ ರೂಪಾಯಿ ವೆಚ್ಚದಲ್ಲಿ ರೂಪಿಸಲಾಗಿದೆ. ಕೋರ್ಸಿಗೆ ಒಟ್ಟು 40 ಮಂದಿ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗುವುದು.

ಎಂ.ಎಸ್‌. ಜಿಯೋ ಇನ್ಫೋರ್ಮಾಟಿಕ್ಸ್‌ ಕೋರ್ಸನ್ನು ಮೂರು ಸೆಮಿಸ್ಟರ್‌ಗಳಲ್ಲಿ ವಿದ್ಯಾರ್ಥಿಗಳು ಪೂರೈಸುತ್ತಾರೆ. ಸಾಗರ ಭೂಗರ್ಭ ವಿಜ್ಞಾನ ವಿಭಾಗದಿಂದ ಆರಂಭಿಸಲ್ಪಟ್ಟ ಈ ಕೋರ್ಸ್‌ಗಾಗಿ ಪ್ರಯೋಗಾಲಯ ಸ್ಥಾಪಿಸಲು ಇಸ್ರೋ (ISRO) 22 ಲಕ್ಷ ರೂಪಾಯಿ ಅನುದಾನ ನೀಡಿದೆ. ಉಪನ್ಯಾಸ ಮತ್ತು ಅಧ್ಯಯನಕ್ಕಾಗಿ ಯುಜಿಸಿ ಆರ್ಥಿಕ ನೆರವು ನೀಡಿದೆ. ಈ ಕೋರ್ಸ್‌ ವಿವಿಯ ಉಪಕುಲಪತಿ ಎಸ್‌. ಗೋಪಾಲ್‌ ಮತ್ತು ಇಸ್ರೋದ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್‌ ಪ್ರಯತ್ನವಾಗಿ ಆರಂಭವಾಗುತ್ತಿದೆ.

ಕೋರ್ಸ್‌ ಹೀಗಿರುತ್ತದೆ : ಮೊದಲೆರಡು ಸೆಮಿಸ್ಟರ್‌ಗಳಲ್ಲಿ ದೂರ ಸಂವೇದಿ ಕುರಿತ ಪಠ್ಯ, ಭೂ ವಿಜ್ಞಾನಮಾಹಿತಿ ಪದ್ಧತಿ, ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್ಸ್‌, ಇನ್‌ಫರ್‌ಮೇಷನ್‌ ಸುಪರ್‌ ಹೈವೇ, ಡಿಜಿಟಲ್‌ ಕ್ಯಾಟಗರಿ, ಮತ್ತು ಫೋಟೋಗ್ರಾಮೆಟ್ರಿ, ಸ್ಯಾಟಲೈಟ್‌ ಓಷನೋಗ್ರಫಿ, ವೆಬ್‌ ಟೆಕ್ನಾಲಜಿ ಯಂತಹ ವಿಷಯಗಳಿರುತ್ತವೆ. ಉಳಿದಂತೆ ಭೂವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಕಲಿಕೆಯಿರುತ್ತದೆ. ಮೂರನೇ ಸೆಮಿಸ್ಟರ್‌ನಲ್ಲಿ ಯಾವುದಾದರೂ ಆರ್‌ ಆ್ಯಂಡ್‌ಟಿ ಪ್ರಯೋಗಾಲಯದಲ್ಲಿ ಅಥವಾ ಇದಕ್ಕೆ ಸಂಬಂಧಿಸಿದ ಉತ್ತಮ ಸಂಸ್ಥೆಯಲ್ಲಿ 32 ವಾರಗಳ ಅವಧಿಯಾಳಗೆ ವಿದ್ಯಾರ್ಥಿಯು, ಯೋಜನಾ ವರದಿಯನ್ನು ತಯಾರಿಸಬೇಕು. ಇಂಜಿನಿಯರಿಂಗ್‌ ಪದವೀಧರರು, ಅಥವಾ ಭೌತಶಾಸ್ತ್ರ, ಪ್ರಾಕೃತಿಕ ವಿಜ್ಞಾನ, ಕೃಷಿ ಮತ್ತು ಅರಣ್ಯ ವಿಜ್ಞಾನ ವಿಷಯಗಳಲ್ಲಿ ಕನಿಷ್ಟ 50 ಶೇ ಕಡಾ ಅಂಕ ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ಕೋರ್ಸಿ ಗೆ ಅರ್ಹರು. ಪರಿಶಿಷ್ಟ ಜಾತಿ ಮತ್ತು ಪಂಗಡದವರಾದರೆ, ಶೇ. 40 ಅಂಕಗಳು ಸಾಕು. ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯ. ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ 50ರಷ್ಟು ಮೀಸಲಾತಿ ಇದೆ. ಒಟ್ಟು 8 ವಿದ್ಯಾರ್ಥಿಗಳನ್ನು ಕೋರ್ಸಿಗೆ ತೆಗೆದುಕೊಳ್ಳಲಾಗುವುದು.

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X