Get Updates
Get notified of breaking news, exclusive insights, and must-see stories!

ಹಲೋ..ದೂರವಾಣಿ ನೋಂದಣಿ ಶುಲ್ಕ ಇಳಿದಿದೆ

ನವದೆಹಲಿ : ದೂರವಾಣಿ ಸಂಪರ್ಕಗಳ ನೋಂದಣಿ ಶುಲ್ಕವನ್ನು ಇಳಿಸುವುದಾಗಿ ಕೇಂದ್ರ ಸಂಪರ್ಕ ಖಾತೆ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಬುಧವಾರ ಪ್ರಕಟಿಸಿದ್ದಾರೆ. ವಾಣಿಜ್ಯ ಪತ್ರಿಕೆಗಳ ಸಂಪಾದಕರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ನಗರ ಪ್ರದೇಶಗಳಲ್ಲಿ ಈಗಿರುವ ನೋಂದಣಿ ಶುಲ್ಕವನ್ನು ಮೂರು ಸಾವಿರದಿಂದ 2 ಸಾವಿರಕ್ಕೂ ಹಾಗೂ ಗ್ರಾಮಾಂತರ ಪ್ರದೇಶಗಳ ನೋಂದಣಿ ಶುಲ್ಕವನ್ನು 1000 ದಿಂದ 500ಕ್ಕೂ ಇಳಿಸಲಾಗುವುದು ಎಂದು ತಿಳಿಸಿದರು.

ನಗರ ಪ್ರದೇಶಗಳಲ್ಲಿ ಶೇಕಡಾ 33ರಷ್ಟು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಶೇಕಡಾ 50ರಷ್ಟು ಇಳಿಸಲಾಗಿರುವ ಈ ಪರಿಷ್ಕೃತ ಶುಲ್ಕ ಬರುವ ನವೆಂಬರ್‌ 1ರಿಂದ ಅನುಷ್ಠಾನಕ್ಕೆ ಬರಲಿದೆ . ಕೇಂದ್ರ ಸರಕಾರ ಪೆಟ್ರೋಲ್‌ ಬೆಲೆ ಏರಿಸಿದ್ದರೂ ದೂರವಾಣಿ ದರವನ್ನು ನಿಯಮಿತವಾಗಿ ಇಳಿಸಿದೆ ಎಂಬುದು ಸಮಾಧಾನದ ಅಂಶವಾಗಿದೆ.

ದೂರವಾಣಿ ದರವನ್ನು ನಿಯಮಿತವಾಗಿ ಇಳಿಸಿದ್ದರಿಂದ ದೊರೆತ ಉತ್ತಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಹಾಗೂ ದೂರವಾಣಿ ಬಳಕೆಯ ಸಂಖ್ಯೆ ಹೆಚ್ಚಲೆಂಬ ಕಾರಣದಿಂದ ನೋಂದಣಿ ಶುಲ್ಕ ಇಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+