Get Updates
Get notified of breaking news, exclusive insights, and must-see stories!

ಬೆಳಗಾವಿಯಲ್ಲಿ ಅ.20ರಿಂದ ಪತ್ರಕರ್ತರ ಸಮ್ಮೇಳನ

ಬೆಂಗಳೂರು : ರಾಜ್‌ ಅಪಹರಣ ಹಾಗೂ ಕಾಗವಾಡ ಉಪಚುನಾವಣೆ ಹಿನ್ನೆಲೆಯಲ್ಲಿ ಎರಡು ಬಾರಿ ಮುಂದಕ್ಕೆ ಹೋದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 23ನೇ ರಾಜ್ಯ ಸಮ್ಮೇಳನ ಅಕ್ಟೋಬರ್‌ 20ರಿಂದ ಮೂರು ದಿನಗಳ ಕಾಲ ಇಲ್ಲಿನ ಶಿವಬಸವ ನಗರದ ಪ್ರಭುದೇವ ಕಲ್ಯಾಣ ಮಂಟಪದ ದಿ. ಬಿ.ಎನ್‌. ಧಾರವಾಡಕರ ಮಂಟಪದಲ್ಲಿ ನಡೆಯಲಿದೆ.

ಸಮ್ಮೇಳನಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ದಿ. ಎಂ.ಎಸ್‌. ಟೋಪಣ್ಣನವರ ವೇದಿಕೆಯಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಸ್ವಾತಂತ್ರ್ಯ ಯೋಧರೂ ಹಾಗೂ ಹಿರಿಯ ಪತ್ರಕರ್ತರೂ ಆದ ಎಚ್‌.ಎಸ್‌. ದೊರೆಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಸಾನ್ನಿಧ್ಯವನ್ನು ಸಾವಳಗಿ ಸಿದ್ಧ ಸಂಸ್ಥಾನ ಪೀಠದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮಿಗಳು ವಹಿಸಲಿದ್ದಾರೆ.

ಕೇಂದ್ರ ಪ್ರವಾಸೋದ್ಯಮ ಸಚಿವರಾದ ಅನಂತಕುಮಾರ್‌, ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಹಾಗೂ ಕರ್ನಾಟಕ ರಾಜ್ಯದ ಸಚಿವರುಗಳಾದ ಡಿ.ಬಿ. ಇನಾಂದಾರ್‌, ವೀರಕುಮಾರ್‌ ಪಾಟೀಲ್‌, ಧರ್ಮಸಿಂಗ್‌, ಎಚ್‌.ಕೆ. ಪಾಟೀಲ್‌, ಸಂಸತ್‌ ಸದಸ್ಯರುಗಳಾದ ವಿಜಯ ಸಂಕೇಶ್ವರ, ಅಮರಸಿಂಹ ಪಾಟೀಲ್‌, ರಮೇಶ್‌ ಜಿಗಜಿಣಗಿ, ಮಾಜಿ ಸಚಿವರುಗಳಾದ ಸಿದ್ಧರಾಮಯ್ಯ, ಎ.ಬಿ. ಪಾಟೀಲ್‌, ಪತ್ರಿಕಾ ಅಕಾಡಮಿಯ ಗರುಡನಗಿರಿ ನಾಗರಾಜ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ವಿಚಾರ ಸಂಕಿರಣ : ಸಮ್ಮೇಳನ ನಿಮಿತ್ತ ಏರ್ಪಡಿಸಲಾಗಿರುವ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಪ್ರಜಾವಾಣಿ ಪತ್ರಿಕೆಯ ಸುದ್ದಿ ಸಂಪಾದಕ ಆರ್‌.ಪಿ. ಜಗದೀಶ್‌ ಅವರು ವಹಿಸುತ್ತಿದ್ದು, ಮುದ್ರಣ ಮಾಧ್ಯಮದ ಮುಂದಿನ ಸವಾಲುಗಳ ಬಗ್ಗೆ ಪ್ರಜಾವಾಣಿ ವರದಿಗಾರರಾದ ಡಾ. ಓಂಕಾರ ಕಾಕಡೆ, ಮಾಹಿತಿ ಹಕ್ಕು -2000 ವಿಧೇಯಕದ ಬಗ್ಗೆ ಕನ್ನಡ ಪ್ರಭ ದಿನಪತ್ರಿಕೆಯ ಮುಖ್ಯ ಉಪಸಂಪಾದಕ ತಿಮ್ಮಪ್ಪ ಭಟ್‌, ಡಾಟ್‌ಕಾಂ ಪತ್ರಿಕೋದ್ಯಮದ ಬಗ್ಗೆ ಕನ್ನಡ. ಇಂಡಿಯಾ ಇನ್‌ಫೋ ಡಾಟ್‌ಕಾಂನ ಹಿರಿಯ ಉಪಸಂಪಾದಕ ಟಿ.ಎಂ. ಸತೀಶ್‌, ಮಾಹಿತಿ ತಂತ್ರಜ್ಞಾನ ಹಾಗೂ ಕನ್ನಡ ಮಾಧ್ಯಮದ ಬಗ್ಗೆ ಇ.ದಕ್ಷಿಣ್‌ ಡಾಟ್‌ಕಾಂನ ಬೇಳೂರು ಸುದರ್ಶನ ಅವರು ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ನಾಗನೂರು ರುದ್ರಾಕ್ಷಿ ಮಠದ ಮ.ನಿಪ್ರ. ಸಿದ್ದರಾಮ ಸ್ವಾಮಿಗಳು, ವಾಟಾಳ್‌ ನಾಗರಾಜ್‌ ಹಾಗೂ ಮತ್ತಿತರರು ಭಾಗವಹಿಸುತ್ತಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+