ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ ಜಿಲ್ಲೆ ಅಭಿವೃದ್ಧಿಗೆ 686 ಕೋಟಿ ರು. ವಿಶೇಷ ಯೋಜನೆ

By Staff
|
Google Oneindia Kannada News

ಗದಗ : ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 686 ಕೋಟಿ ರುಪಾಯಿಗಳ ವಿಶೇಷ ಯೋಜನೆಯನ್ನು ಮುಖ್ಯಂಮತ್ರಿ ಎಸ್‌. ಎಂ. ಕೃಷ್ಣ ಸೋಮವಾರ ಘೋಷಿಸಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರಗಳ ಸುಧಾರಣೆಗೆ 253 ಕೋಟಿ ರುಪಾಯಿ, ಜಿಲ್ಲೆಯ ಇತರ ಪ್ರದೇಶಗಳ ಅಭಿವೃದ್ಧಿಗೆ 233 ಕೋಟಿ ರುಪಾಯಿ ಹಾಗೂ 200 ಕೋಟಿ ರುಪಾಯಿಗಳ ವೆಚ್ಚದಲ್ಲಿ ರಾಜ್ಯ ರೇಷ್ಮೆ ಅಭಿವೃದ್ಧಿ ನಿಗಮದ ಮುಖಾಂತರ ಗದಗ- ವಿಜಾಪುರ ಮಧ್ಯದ ರೈಲ್ವೇ ಹಳಿಗಳ ಗೇಜ್‌ ಪರಿವರ್ತನೆಯ ಕಾರ್ಯವನ್ನು ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಇಲ್ಲಿ ನಡೆದ ಗದಗ-2000 ಶೃಂಗ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷ್ಣ ಅವರು ಯೋಜನೆ ಘೋಷಿಸಿದ್ದಾರೆ.

ಗದಗ-ಬೆಟಗೇರಿಗಳ ಅವೃದ್ಧಿಗೆ ತೆಗೆದಿರಿಸಿರುವ 253 ಕೋಟಿ ರುಪಾಯಿಗಳಲ್ಲಿ ಅವಳಿ ನಗರಗಳ ಒಳಚರಂಡಿ ಯೋಜನೆಗೆ 1114.60 ಲಕ್ಷ , 12ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರು ವಿತರಣಾ ವ್ಯವಸ್ಥೆಯ ಸುಧಾರಣೆ, ಹುಡ್ಕೋ ನೆರವಿನಿಂದ 2500 ಮನೆಗಳ ನಿರ್ಮಾಣಕ್ಕೆ 1550 ಲಕ್ಷ ಹಾಗೂ ಮುಂಡರಗಿ ಕೋರ್ಲಹಳ್ಳಿ ರಸ್ತೆಯನ್ನು ಸುಧಾರಣೆ ಮಾಡಿ ರಾಷ್ಟ್ರೀಯ ಹೆದ್ದಾರಿಗೆ ಜೋಡಿಸಲು 6ಕೋಟಿ ರುಪಾಯಿ ತೆಗೆದಿರಿಸಲಾಗಿದ್ದು, ಪಾಲಾ-ಬಾದಾಮಿ ರಸ್ತೆಗೆ 4 ಕೋಟಿ ರುಪಾಯಿ, ಜಿಲ್ಲಾ ಮಟ್ಟದ ಕಛೇರಿಗಳ ನಿರ್ಮಾಣಕ್ಕೆ 300 ಕೋಟಿ, ಬಸ್‌ ನಿಲ್ಧಾಣ ನಿರ್ಮಾಣಕ್ಕೆ 2 ಕೋಟಿ ತೆಗೆದಿರಿಸಲಾಗಿದೆ.

ಕೆ. ಎಚ್‌. ಪಾಟೀಲ್‌ ಕ್ರೀಡಾಂ-ಗ-ಣ ಅಭಿ-ವೃ-ದ್ಧಿ : ಹಮಾಲರ ಕಾಲೋನಿ ನಿರ್ಮಾಣಕ್ಕೆ 40 ಲಕ್ಷ, ಭೀಷ್ಮನ ಕೆರೆ ಅಭಿವೃದ್ಧಿಗೆ 40 ಕೋಟಿ ರುಪಾಯಿ ವೆಚ್ಚ , ಗದುಗಿನಲ್ಲಿ ನೇಕಾರರ ಕಾಲೋನಿ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಸುಲಭ ಶೌಚಾಲಯ, ಕೆ. ಎಚ್‌. ಪಾಟೀಲ್‌ ಕ್ರೀಡಾಂ-ಗ-ಣದ ಕ್ರಿಕೆಟ್‌ ಪೆವಿಲಿಯನ್‌ ನಿರ್ಮಾಣ, ಬಿಂಕದಕಟ್ಟೆಯ ಪ್ರಾಣಿಸಂಗ್ರಹಾಲಯದ ಸುಧಾರಣೆ, ಗದಗದಲ್ಲಿ ನೂತನ ಬಸ್‌ ಡಿಪೋ ಮುಂತಾದ ಅನೇಕ ಅಭಿವೃದ್ಧಿ ಕಾರ್ಯಗಳು ಯೋಜನೆಯಲ್ಲಿ ಸೇರಿವೆ. ಮೊದಲೇ ರೂಪಿಸಿದ ಯೋಜನೆಗಳಲ್ಲದೆ, ತುಂಗಭದ್ರಾ ನದಿಯಿಂದ ಗದಗ-ಬೆಟಗೇರಿಗೆ ಕುಡಿಯುವ ನೀರಿನ ಯೋಜನೆಗೆ 8 ಕೋಟಿ ರುಪಾಯಿ ಮಂಜೂರು, ಸ್ನಾತಕೋತ್ತರ ಕಟ್ಟಡ ನಿರ್ಮಾಣಕ್ಕೆ 50 ಎಕರೆ ಜಮೀನು ಸೇರಿದಂತೆ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಸ್ಥಳದಲ್ಲಿಯೇ ಮಂಜಾರಾತಿ ನೀಡಿದ್ದಾರೆ. ವೈದ್ಯಕೀಯ ಮಹಾವಿದ್ಯಾಲಯದ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ಜಿಲ್ಲೆ-ಯ- ಸಮ-ಗ್ರ ಅಭಿ-ವೃ-ದ್ಧಿ-ಗೆ ವಿಶೇ-ಷ ಯೋಜ-ನೆ ಘೋಷಿ-ಸಿ-ದ ಮುಖ್ಯ-ಮಂ-ತ್ರಿ-ಗ-ಳ-ನ್ನು ಜಿಲ್ಲೆ-ಯ ಅನೇ-ಕ ಮುಖಂ-ಡ-ರು ಅಭಿ-ನಂ-ದಿ-ಸಿ-ದ್ದಾ-ರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X