Get Updates
Get notified of breaking news, exclusive insights, and must-see stories!

ಸಂ-ಸ-ತ್ತಿ-ನ ಚಳಿ-ಗಾ-ಲ-ದ ಅಧಿ-ವೇ-ಶ-ನ-ದ-ಲ್ಲಿ ಸಿಬಿಐನ ಮ್ಯಾಚ್‌ಫಿಕ್ಸಿಂಗ್‌ ವರದಿ

ನವದೆಹಲಿ : ಮ್ಯಾಚ್‌ಫಿಕ್ಸಿಂಗ್‌ ಕುರಿತು ಸಿಬಿಐ ಸಿದ್ಧಪಡಿಸಿರುವ ವರದಿಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಸುಖದೇವ್‌ ಸಿಂಗ್‌ ಧಿಂಡ್ಸಾ ಸೋಮವಾರ ತಿಳಿಸಿದ್ದಾರೆ.

ಸಿಬಿಐ ತನ್ನ ವರದಿಯಲ್ಲಿ ನಾಲ್ವರು ಆಟಗಾರರನ್ನು ಭ್ರಷ್ಟಾಚಾರಿಗಳೆಂದು ಗುರ್ತಿಸಿರುವುದಾಗಿ ಹೇಳಿದ್ದು, ಅವರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಕ್ರಿಕೆಟಿಗರು ಸರ್ಕಾರಿ ನೌಕರರಲ್ಲದ ಕಾರಣ ಅವರ ವಿರುದ್ಧ ಭ್ರಷ್ಟಾಚಾರದ ಕಾರಣವೊಡ್ಡಿ ಮೊಕದ್ದಮೆ ಹೂಡಲು ಸಾಧ್ಯವಿಲ್ಲ. ಕಳೆದ ವಾರವೇ ಸಿಬಿಐ ತನ್ನ ವರದಿ ಸಿದ್ಧಪಡಿಸಿತ್ತು. ಅಮೆರಿಕಕ್ಕೆ ತೆರಳಿದ್ದ ಕ್ರೀಡಾ ಸಚಿವರು ಈಗ ವಾಪಸ್ಸಾಗಿದ್ದು, ಈ ವಾರದೊಳಗೆ ಸಿಬಿಐ ಅವರಿಗೆ ವರದಿ ಸಲ್ಲಿಸಲಿದೆ.

ವರದಿ ಆಧರಿಸಿ ಆರೋಪಿಗಳ ವಿರುದ್ಧ ಸರ್ಕಾರ ಶಿಸ್ತಿನ ಕ್ರಮ ಜರುಗಿಸಲಿದೆಯೇ ಎಂಬ ಪ್ರಶ್ನೆಗೆ, ಮೊದಲು ನಾನು ವರದಿ ಓದಬೇಕು. ಅನಂತರ ಮುಂದೇನು ಎಂದು ಯೋಚಿಸಲಾಗುವುದು ಎಂದು ಧಿಂಡ್ಸಾ ಉತ್ತರ ಕೊಟ್ಟರು.

ಮ್ಯಾಚ್‌ಫಿಕ್ಸಿಂಗ್‌ ಅಲ್ಲದೆ ಪ್ರಸಾರ ಹಕ್ಕಿನ ವಿಷಯದಲ್ಲಿಯೂ ಸಾಕಷ್ಟು ಅವ್ಯವಹಾರ ನಡೆದಿರುವುದರ ಬಗೆಗೆ ಅನುಮಾನಗಳಿದ್ದು, ಸಿಬಿಐ ಈ ಸಂಬಂಧ ಸದ್ಯದಲ್ಲೇ ಮೊಕದ್ದಮೆಯನ್ನು ಹೂಡಲಿದೆ. ಸಿಬಿಐನ ಭ್ರಷ್ಟಾಚಾರಿ ವಿರೋಧಿ ದಳ ಕ್ರಿಕೆಟ್‌ನ ಪ್ರಸಾರದ ಹಕ್ಕಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಪ್ರಸಾರದ ಹಕ್ಕಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯನ್ನು ಇನ್ನು ಕೆಲವೇ ದಿನಗಳಲ್ಲಿ ಸಿದ್ಧಪಡಿಸಲಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+