Get Updates
Get notified of breaking news, exclusive insights, and must-see stories!

ಸಂಧಾನ ಮಾರ್ಗಕ್ಕೇ ಜೋತು ಬಿದ್ದ ಸರ್ವಪಕ್ಷ ನಾಯಕರ ಸಭೆ

ಬೆಂಗಳೂರು : ಕಾಡುಗಳ್ಳ ವೀರಪ್ಪನ್‌ ತಾನು ಅಪಹರಿಸಿದ್ದ ರಾಜ್‌ ಅವರ ಅಳಿಯ ಎಸ್‌. ಎ. ಗೋವಿಂದರಾಜ್‌ ಅವರನ್ನು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ಕುರಿತು ಅವಲೋಕಿಸಲು ಮಂಗಳವಾರ ಕರೆದಿದ್ದ ಸರ್ವಪಕ್ಷ ಸಭೆ ಹಿಂದಿನ ಸಂಧಾನ ಮಾರ್ಗವನ್ನೇ ಮುಂದುವರಿಸಲು ನಿರ್ಧರಿಸಿದೆ.

ರಾಜ್‌ ಅವರ ಸುರಕ್ಷಿತ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ತೆಗೆದುಕೊಂಡಿರುವ ನಿರ್ಧಾರಗಳಿಗೆ ತಮ್ಮ ಪಕ್ಷದ ಬೆಂಬಲ ಇದೆ. ಹಾಗೆಂದ ಮಾತ್ರಕ್ಕೆ ಎಲ್ಲಕ್ಕೂ ತಮ್ಮ ಬೆಂಬಲ ಇದೆ ಎಂದಲ್ಲ ಎಂದು ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಸಭೆಯ ನಂತರ ತಿಳಿಸಿದ್ದಾರೆ.

ತಾಳ್ಮೆಯಿಂದ ಸಂಧಾನ ಮುಂದುವರಿಸುವಂತೆ ಜಾತ್ಯತೀತ ಜನತಾದಳದ ನಾಯಕ ಕೆ. ಎಚ್‌. ಶ್ರೀನಿವಾಸ್‌ ಸಲಹೆ ಮಾಡಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಿಂದ, ರಾಜ್‌ ಬಿಡುಗಡೆ ಸಂಬಂಧ ಸರಕಾರ ಸಕಾರಾತ್ಮಕ ನಿರ್ದೇಶನ ಪಡೆಯುವಲ್ಲಿ ವಿಫಲವಾದರೆ ಮುಂದೆ ಕೈಗೊಳ್ಳಬೇಕಾದ ಪರ್ಯಾಯ ಕಾನೂನು ಕ್ರಮಗಳ ಬಗ್ಗೆ ಯೋಚಿಸಬೇಕೆಂದೂ ಪ್ರತಿಪಕ್ಷಗಳ ನಾಯಕರು ಸಲಹೆ ನೀಡಿದ್ದಾರೆ. ಈ ನಡುವೆ ಸಂಪುಟ ಸಭೆ ನಡೆಸಿ ಮುಖ್ಯಮಂತ್ರಿ ಕೃಷ್ಣ ಮುಂದಿನ ಕ್ರಮಗಳ ಬಗ್ಗೆ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿದ್ದಾರೆ.

ಕಮಾಂಡೋ ಕಾರ್ಯಾಚರಣೆ ಬೇಡ : ಮುಖ್ಯಮಂತ್ರಿಗಳಿಗೆ ತಮ್ಮ ಬಿಡುಗಡೆ ಕುರಿತು ಗೋವಿಂದರಾಜ್‌ ವಿವರಣೆ ನೀಡಿದ ನಂತರ ವರದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ , ಕೇಳಲಾದ ಪ್ರಶ್ನೆಯಾಂದಕ್ಕೆ ಉತ್ತರಿಸಿದ ರಾಜ್‌ಕುಮಾರ್‌ ಅವರ ಶಿವರಾಜ್‌ ಕುಮಾರ್‌, ತಮ್ಮ ತಂದೆಯ ಪ್ರಾಣ ಅಪಾಯದಲ್ಲಿರುವ ಈ ಸಂದರ್ಭದಲ್ಲಿ ವೀರಪ್ಪನ್‌ ವಿರುದ್ಧ ಕಮಾಂಡೋ ಕಾರ್ಯಚರಣೆ ನಡೆಯುವುದಕ್ಕೆ ತಮ್ಮ ಕುಟುಂಬದ ಸಹಮತ ಇಲ್ಲ ಎಂದು ಹೇಳಿದ್ದಾರೆ.

ಗೋವಿಂದರಾಜ್‌ ಬಿಡುಗಡೆ ತಮ್ಮ ಸಾಧನೆ : ಈ ಮಧ್ಯೆ ಚೆನ್ನೈ ತಲುಪಿರುವ ಸಂಧಾನಕಾರರ ತಂಡ , ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಭೇಟಿ ಮಾಡಿದ ನಂತರ ಜಂಟಿ ಹೇಳಿಕೆ ನೀಡಿ, ತಮ್ಮ ಸಂಧಾನದ ಫಲಶ್ರುತಿಯಿಂದ ಗೋವಿಂದರಾಜ್‌ ಬಿಡುಗಡೆಯಾಗಿದೆ. ಗೋವಿಂದ್‌ರಾಜ್‌ ಬಿಡುಗಡೆಯೇ ತಮ್ಮ ಸಾಧನೆ ಎಂದು ಹೇಳಿದ್ದಾರೆ.

ಅಭಿನಂದನೆ : ಐದನೇ ಬಾರಿಗೆ ಸಂಧಾನಕ್ಕೆ ತೆರಳಿ, ತಮ್ಮ ಸೋದರ ಗೋವಿಂದ್‌ರಾಜ್‌ ಅವರನ್ನು ಬಿಡಿಸಿಕೊಂಡು ಬಂದ ಸಂಧಾನಕಾರರನ್ನು ಪಾರ್ವತಮ್ಮ ರಾಜ್‌ಕುಮಾರ್‌ ಅಭಿನಂದಿಸಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+