Get Updates
Get notified of breaking news, exclusive insights, and must-see stories!

ಪೇಸ್‌- ಭೂಪತಿ ಜೋಡಿ ಜಪಾನ್‌ ಓಪನ್‌ ಫೈನಲ್ಸ್‌ಗೆ

ಟೋಕಿಯೋ : ಭಾರತದ ಟೆನಿಸ್‌ ಜೋಡಿ ಪೇಸ್‌- ಭೂಪತಿ ಜಪಾನ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್ಸ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್ಸ್‌ನಲ್ಲಿ ಬ್ರೆಜಿಲ್‌ನ ಆ್ಯಂಡ್ರೆ ಸಾ ಮತ್ತು ಚಿಲಿಯ ನಿಕೋಲಾಸ್‌ ಮಾಸು ಜೋಡಿಯನ್ನು 6-3, 4-6, 6-2ರಲ್ಲಿ ಸೋಲಿಸಿದ ಭಾರತದ ಜೋಡಿ ಬಹುದಿನಗಳ ನಂತರ ಕಪ್‌ ಗೆಲ್ಲುವ ಭರವಸೆ ಹುಟ್ಟಿಸಿದೆ. ಹೋದ ವರ್ಷ ಟಾಪ್‌ ಟೀಮ್‌ ಖ್ಯಾತಿಗೆ ಪಾತ್ರವಾಗಿದ್ದ ಈ ಜೋಡಿ, ಕೆಲ ಕಾಲ ಒಟ್ಟಾಡಲಿಲ್ಲ. ಲಾಂಗ್‌ ಲೆಂಡ್‌ ಎಟಿಪಿ ಟೂರ್ನಿಯಲ್ಲಿ ಮತ್ತೆ ಒಂದಾಗಿ ಆಡಿದ ಜೋಡಿ ಸೆಮಿಫೈನಲ್ಸ್‌ನಲ್ಲಿ ಸೋಲುಂಡಿತ್ತು.

ಆಸ್ಟ್ರೇಲಿಯಾದ ವೆಯ್ನೆ ಆರ್ಥಸ್‌-ಸ್ಲೊವೇಕಿಯಾದ ಡಾಮಿನಿಕ್‌ ಹ್ರಬ್ಯಾಟಿ ಹಾಗೂ ಆಸ್ಟ್ರೇಲಿಯಾದ ಮೈಕೆಲ್‌ ಹಿಲ್‌- ಅಮೆರಿಕದ ಜೆಫ್‌ ಟೆರಾಂಗೊ ನಡುವಣ 2ನೇ ಸೆಮಿಫೈನಲ್ಸ್‌ ನಡೆಯಬೇಕಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಜೋಡಿಯನ್ನು ಭಾನುವಾರ ನಡೆಯುವ ಫೈನಲ್ಸ್‌ನಲ್ಲಿ ಪೇಸ್‌-ಭೂಪತಿ ಎದುರಿಸಲಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+