Get Updates
Get notified of breaking news, exclusive insights, and must-see stories!

ಕ್ರಿಯಾಶೀಲವಾದ 16 ದಿನದಲ್ಲೇ ವಿಶ್ವದಾಖಲೆಮೆರೆದ ಕೈಗಾ ಸ್ಥಾವರ

ಕಾರವಾರ ಪ್ರತಿನಿಧಿಯಿಂದ

Kaiga thermal plantಕಾರವಾರ : ಸೆಪ್ಟೆಂಬರ್‌ 26ರ ಮಂಗಳವಾರ ಕ್ರಿಯಾಶೀಲವಾಗಿದ್ದ ಕೈಗಾ ಅಣುಸ್ಥಾವರದ ಪ್ರಥಮ ಘಟಕದಲ್ಲಿ ಉತ್ಪಾದಿಸಲಾದ ವಿದ್ಯುತ್‌ ಅಕ್ಟೋಬರ್‌ 12ರ ಬೆಳಗ್ಗೆ 11.24ಕ್ಕೆ ಸರಿಯಾಗಿ ಭಾರತದ ದಕ್ಷಿಣ ವಿದ್ಯುತ್‌ ಜಾಲಕ್ಕೆ ಸೇರ್ಪಡೆಯಾಗುವ ಮೂಲಕ ಹೊಸ ಶಕೆಯನ್ನೇ ಆರಂಭಿಸಿತು.

ಸ್ವದೇಶೀ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಪಡಿಸಲಾದ ಪ್ರಥಮ ಅಣು ವಿದ್ಯುತ್‌ ಸ್ಥಾವರ ಎಂಬ ಕೀರ್ತಿಗೆ ಭಾಜನವಾಗಿರುವ ಕೈಗಾ ಅಣು ವಿದ್ಯುತ್‌ ಸ್ಥಾವರದಲ್ಲಿ ಮೊದಲ ಘಟಕ ಕ್ರಿಯಾಶೀಲವಾಗಿ ಕೇವಲ 16 ದಿನಗಳಲ್ಲೇ ವಿದ್ಯುತ್‌ ಉತ್ಪಾದನೆ ಆರಂಭಿಸುವ ಮೂಲಕ ಮತ್ತೊಂದು ವಿಶ್ವ ದಾಖಲೆ ಮೆರೆದಿದೆ.

ಪ್ರಸಕ್ತ ಮೊದಲ ಘಟಕ 50 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಿದ್ದು, ಅದನ್ನು ಮುಂಬರುವ ದಿನಗಳಲ್ಲಿ ಕ್ರಮೇಣ ಹೆಚ್ಚಿಸಲಾಗುವುದು ಎಂದು ಕೈಗಾ ಅಣುಸ್ಥಾವರದ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಾವರ ಕ್ರಿಯಾಶೀಲವಾದ ಬಳಿಕ ಕಠಿಣ ಪರೀಕ್ಷೆಗಳು ತೃಪ್ತಿಕರ ಫಲಿತಾಂಶ ನೀಡಿದ ಬಳಿಕವೇ ವಿದ್ಯುತ್‌ ಉತ್ಪಾದನೆಗೆ ಅಣು ಶಕ್ತಿ ನಿಯಂತ್ರಣ ಮಂಡಳಿ ಅನುಮತಿ ನೀಡುತ್ತದೆ.

ಆದರೆ, ಅಣುವಿದ್ಯುತ್‌ ಘಟಕ ಕ್ರಿಯಾಶೀಲಗೊಂಡ ಕೆಲವೇ ದಿನಗಳಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸುವುದು ವಿಶ್ವ ಕಂಡು ಕೇಳರಿಯದ ಮಾತು. ಅದರಲ್ಲೂ ಭಾರಜಲ ಸ್ಥಾವರವಾಗಿದ್ದರಂತೂ ಅದು ಮತ್ತೂ ಕಷ್ಟ. ಆದರೆ, ಇಂತಹ ಕಠಿಣ ಸವಾಲುಗಳನ್ನು ಸ್ವೀಕರಿಸಿದ ಕೈಗಾ ಅಣು ವಿದ್ಯುತ್‌ ನಿಗಮದ ವಿಜ್ಞಾನಿಗಳು, ಹಗಲಿರುಳೂ ಶ್ರಮಿಸಿ, ಕೈಗಾ ಘಟಕ ಅಣು ಇಂಧನ ಭೂಪಟದಲ್ಲಿ ಹೊಸ ಸ್ಥಾನ ಪಡೆಯಲು ಕಾರಣರಾಗಿದ್ದಾರೆ.

ಉತ್ಪಾದಿತ ವಿದ್ಯುತ್‌ ಜಾಲಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಅಣು ವಿದ್ಯುತ್‌ ನಿಗಮದ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್‌ ಡೈರಕ್ಟರ್‌ ವಿ.ಕೆ. ಚತುರ್ವೇದಿ, ಹಿರಿಯ ಉಪಾಧ್ಯಕ್ಷರಾದ ಎ. ಸನತ್‌ ಕುಮಾರ್‌ ಹಾಗೂ ಎಸ್‌.ಎಸ್‌. ಕುಲಕರ್ಣಿ ಮತ್ತು ಸ್ಥಾವರದ ನಿರ್ದೇಶಕ ಎನ್‌. ರಾಜಸಭಾಯ್‌ ಅವರು ಹಾಜರಿದ್ದರು.

ಕಳೆದೊಂದು ವರ್ಷದಿಂದ ವಿದ್ಯುತ್‌ ಉತ್ಪಾದಿಸುತ್ತಿರುವ ಸ್ಥಾವರದ ಎರಡನೇ ಘಟಕ ತನ್ನ ಸಾಮರ್ಥ್ಯದ (220 ಮೆಗಾವ್ಯಾಟ್‌) ಶೇಕಡಾ 95ರಷ್ಟು ಕೆಲಸ ನಿರ್ವಹಿಸುತ್ತಿದೆ. ಅಲ್ಲದೆ ಕಳೆದ 160 ದಿನಗಳಿಂದ ಸತತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್‌ ಸಭಾಯ್‌ ಇಂಡಿಯಾ ಇನ್ಫೋ ಪ್ರತಿನಿಧಿಗೆ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+