Get Updates
Get notified of breaking news, exclusive insights, and must-see stories!

ಸಿಬಿಐನ ವರದಿ ಮ್ಯಾಚ್‌ಫಿಕ್ಸಿಂಗ್‌ ಸಿದ್ಧ,4 ಕ್ರಿಕೆಟಿಗರ ಹೆಸರುಗಳ ಪ್ರಸ್ತಾವ

ನವದೆಹಲಿ : ಭಾರತದಲ್ಲಿ ಕ್ರಿಕೆಟ್‌ ಮ್ಯಾಚ್‌ಫಿಕ್ಸಿಂಗ್‌ ವಿಚಾರಣೆ ನಡೆಸಿದ ಸಿಬಿಐ ತನ್ನ ವರದಿಯನ್ನು ಸಿದ್ಧಪಡಿಸಿದ್ದು, ಅದನ್ನು ಸಲ್ಲಿಸಲು ವಿದೇಶ ಪ್ರಯಾಣದಲ್ಲಿರುವ ಕೇಂದ್ರ ಕ್ರೀಡಾ ಸಚಿವರ ಬರವಿಗಾಗಿ ಕಾಯುತ್ತಿದೆ.

ಬಹುದಿನಗಳ ನಿರೀಕ್ಷೆಯಾದ ಸಿಬಿಐ ವರದಿಯಲ್ಲಿ ಕಪಿಲ್‌, ಅಜರ್‌, ಜಡೇಜ ಹೀಗೆ ಅನೇಕ ಮಾಜಿ- ಹಾಲಿ ಕ್ರಿಕೆಟಿಗರ ಹಣೆಬರಹ ವರದಿಯಲ್ಲಿ ದಾಖಲಾಗಿದೆ. ಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ಕ್ರೀಡಾ ಸಚಿವ ಸುಖದೇವ್‌ ಸಿಂಗ್‌ ಧಿಂಡ್ಸಾ ಭಾರತಕ್ಕೆ ಬಂದ ತಕ್ಷಣ ಸಿಬಿಐ ತನ್ನ ವರದಿಯನ್ನು ಸಲ್ಲಿಸಲಿದೆ. ಧಿಂಡ್ಸಾ ಶುಕ್ರವಾರ ಮರಳುವ ನಿರೀಕ್ಷೆಯಿದೆ.

ಸಿಬಿಐ ವರದಿಯಲ್ಲಿ ನಾಲ್ವರು ಕ್ರಿಕೆಟಿಗರ ಹೆಸರುಗಳು ಪ್ರಸ್ತಾವವಾಗಿವೆಯಂತೆ. ವಿಶ್ವಾದ್ಯಂತ ಕ್ರೋನಿಯೆ ತಪ್ಪೊಪ್ಪಿಗೆ ಎಬ್ಬಿಸಿದ ಫಿಕ್ಸಿಂಗ್‌ ಅಲೆಯ ಬಿಸಿ ಭಾರತಕ್ಕೂ ತಟ್ಟಿತು. ಮೊದಲಿನಿಂದಲೂ ಅಜರ್‌ ಹೆಸರು ಹೇಳುತ್ತಿದ್ದ ಮನೋಜ್‌ ಪ್ರಭಾಕರ್‌ ಸೊಲ್ಲಿಗೆ ಸಿಬಿಐ ಕಿವಿ ಕೊಟ್ಟಿತು. ತನಿಖೆ ನಡೆಸಿತು. ಇದರ ಫಲಶೃತಿ ಇನ್ನೆರಡು ಮೂರು ದಿನಗಳಲ್ಲಿ ಹೊರಬರುವ ನಿರೀಕ್ಷೆಯಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+