ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ ಜನತೆಯ ಜೀವನ ಮಟ್ಟ ಸುಧಾರಿಸುವುದೇ ನನ್ನ ಗುರಿ ’ - ಕೃಷ್ಣ

By Staff
|
Google Oneindia Kannada News

ಸಾವಿಲ್ಲದ ಮನೆ ಇಲ್ಲ , ಕ್ರೆೃಮ್‌ ಇಲ್ಲದ ಸಮಾಜ ಇಲ್ಲ ಎಂದು ಕೃಷ್ಣ

ಸಾವಿಲ್ಲದ ಮನೆ ಹೇಗೆ ಇರಲು ಸಾಧ್ಯವಿಲ್ಲವೋ ಹಾಗೆಯೇ ಕ್ರೆೃಮ್‌ ಇಲ್ಲದ ಸಮಾಜವೂ ಇಲ್ಲ. ಎಲ್ಲೆಡೆ ಅಪರಾಧಗಳು ಇವೆ. ಆದರೂ, ರಾಜ್ಯದಲ್ಲಿ ಹತೋಟಿಯಲ್ಲಿದೆ. ಒಂದು ವರ್ಷದ ಆಡಳಿತ ಅವಧಿಯಲ್ಲಿ ಎಷ್ಟುಬಾರಿ ಲಾಠಿ ಪ್ರಹಾರ ಮಾಡಲಾಗಿದೆ. ಎಷ್ಟು ಸಾರಿ ಗೋಲಿಬಾರ್‌ ನಡೆದಿದೆ ಎಂಬುದು ದಾಖಲೆಗಳಲ್ಲಿ ದೊರಕುತ್ತದೆ. ನಾನು ಹೆಚ್ಚೇನೂ ಹೇಳುವ ಅಗತ್ಯ ಇಲ್ಲ ಎಂದು, ಪ್ರತಿಪಕ್ಷ ನಾಯಕರ ಟೀಕೆಗೆ ಸೂಚ್ಯವಾಗಿ ಉತ್ತರ ನೀಡಿದರು.

ಹಳ್ಳಿಗೂ ಇಂಟರ್‌ನೆಟ್‌ : ಇಂದಿರಾಗಾಂಧಿ ಅವರು, ಗ್ರಾಮೀಣ ಪ್ರದೇಶಕ್ಕೆ ಟೆಲಿಫೋನ್‌ ತಂದಾಗ ಹಳ್ಳಿಗೇಕೆ ಟೆಲಿಫೋನ್‌ ಎಂದರು, ಈಗ ಫೋನ್‌ ಇಲ್ಲದ ಹಳ್ಳಿಯನ್ನು ಹುಡುಕಬೇಕು. ಈಗ ನಾವು ಯುವಡಾಟ್‌ಕಾಂ ಆರಂಭಿಸುತ್ತಿದ್ದೇವೆ, ಹಳ್ಳಿಗಳಿಗೂ ಇಂಟರ್‌ನೆಟ್‌ ಒದಗಿಸುತ್ತಿದ್ದೇವೆ. ಮುಂದೊಂದು ದಿನ ಎಸ್‌ಟಿಡಿ, ಐಎಸ್‌ಡಿ ಬೂತಗಳಲ್ಲಿ ಗ್ರಾಮೀಣ ಮಹಿಳೆಯರು ಕಾರ್ಯ ನಿವಹಿಸುವಂತೆ, ಸೈಬರ್‌ ಕೆಫೆಗಳನ್ನೂ ನಿರ್ವಹಿಸುತ್ತಾರೆ. ಇದಕ್ಕೆ ನಾಲ್ಕಾರು ವರ್ಷಗಳು ಬೇಕು ಅಷ್ಟೇ ಎಂದರು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಯಶಸ್ಸಿನ ಗುಟ್ಟು : ನಾನು ಕನ್‌ಸೆನ್‌ಸಸ್‌ ಪಾಲಿಟಿಕ್ಸ್‌ ಮಾಡುತ್ತೇನೆ. ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದರೂ, ಪ್ರತಿಪಕ್ಷದವರಾದಿಯಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಅವರ ಸಲಹೆ, ಮಾರ್ಗದರ್ಶನ ಪಡೆದು ಆನಂತರ ಅಂತಿಮ ತೀರ್ಮಾನ ನಾನು ಕೈಗೊಳ್ಳುತ್ತೇನೆ. ಇದೇ ನನ್ನ ಯಶಸ್ಸಿನ ಗುಟ್ಟು ಎಂದು ಕೃಷ್ಣ, ಅಧಿಕಾರ ಗುಲಾಬಿ ಹೂ ಹಾಸಿಗೆಯಲ್ಲ. ಅದು ಮುಳ್ಳಿನ ಮಂಚ ಎಂಬ ಅರಿವು ತಮಗಿದೆ ಎಂದು ಕೃಷ್ಣ ಆತ್ಮಾವಲೋಕನದ ಮಾತುಗಳನ್ನಾಡಿದ್ದಾರೆ.

ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗಾಗಿ ಸ್ತ್ರೀಶಕ್ತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. 18ರಂದು ಶ್ರೀಮತಿ ಸೋನಿಯಾ ಗಾಂಧಿ ಅವರು, ಇದನ್ನು ಉದ್ಘಾಟಿಸುವರು ಎಂದರು. ಗ್ರಾಮೀಣ ಹೆಣ್ಣುಮಕ್ಕಳಿಗೆ ಹತ್ತನೇ ತರಗತಿವರೆಗೆ ಉಚಿತ ಶಿಕ್ಷಣ ಯೋಜನೆ ತಂದಿದ್ದೇವೆ. ಇದರಿಂದ ಶಾಲೆ ಬಿಡುವ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗಿದೆ ಎಂದರು. ಡಾ. ಸುದರ್ಶನ್‌ ನೇತೃತ್ವದ ಸಮಿತಿ ಸಲಹೆ ಮೇರೆಗೆ ಕೆಲವು ಕಾರ್ಯಕ್ರಮ ರೂಪಿಸಿದ್ದು, ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದರು.

ಮೃದು ಮಾತು ದೊಣ್ಣೆ ಬಗಲಲ್ಲಿ : ಹಿರಿಯರೊಬ್ಬರು ಹೇಳಿದ್ದಾರೆ. ಮಾತು ಮೃದುವಾಗಿರಲಿ, ದೊಣ್ಣೆ ಬಗಲಲ್ಲಿರಲಿ ಎಂದು. ನಾನು ಕೆಲವೊಮ್ಮೆ ಈ ದೊಣ್ಣೆ ತೋರಿಸಿ, ಹೇದರಿಸುವುದು ಅನಿವಾರ್ಯ. ಇದಕ್ಕೂ ಬಗ್ಗದಿದ್ದರೆ, ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡಿದರು.

ಹೈಕಮಾಂಡ್‌ಗೆ ನಾನು ಗೌರವ ನೀಡುತ್ತೇನೆ. ನನಗೆ ಹೈಕಮಾಂಡ್‌ ಬಗ್ಗೆ ಪ್ರೀತಿ ಇದೆ. ಹಾಗೆಂದ ಮಾತ್ರಕ್ಕೆ ನಾನು ಕೈಗೊಂಬೆ ಎಂಬ ಆರೋಪ ತಪ್ಪು ಎಂದ ಅವರು, ನಮ್ಮ ಸರಕಾರಕ್ಕೆ ಜನತೆಯ ಹಾಗೂ ವರುಣನ ಬೆಂಬಲ ಇದೆ. ಯಾವುದೇ ಹೊಸ ಸರಕಾರ ಅಧಿಕಾರಕ್ಕೆ ಬಂದಾಗಲೂ ಜನರ ನಿರೀಕ್ಷೆಗಳು ಮಹತ್ವದ್ದಾಗಿರುತ್ತದೆ. ನಾವು ಅದನ್ನು ಸಾಧ್ಯವಾದಷ್ಟೂ ಪೂರೈಸಿದ್ದೇವೆ. ಸಮರ್ಥವಾಗಿ ಕಾರ್ಯನಿರ್ವಹಿಸಿದ್ದೇವೆ. ಸಾಧಿಸಬೇಕಾದ್ದು ಬಹಳಷ್ಟಿದೆ ಎಂದರು.

ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮೆರೆದಿದೆ. ವಿಶ್ವದಲ್ಲಿ ಬೆಂಗಳೂರು ತನ್ನ ಛಾಪು ಮೂಡಿಸಿದೆ. ಇದಕ್ಕೆ ಜಪಾನ್‌ ಪ್ರಧಾನಿ ಮೊದಲು ಬೆಂಗಳೂರಿಗೆ ಬಂದು ಆನಂತರ ದೆಹಲಿಗೆ ಹೋಗಿದ್ದೇ ಸಾಕ್ಷಿ ಎಂದ ಕೃಷ್ಣ, ಎಂಜಿನಿಯರ್‌ಗಳನ್ನೂ, ರಾಜ್ಯದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರನ್ನೂ ಮುಕ್ತ ಕಂಠದಿಂದ ಪ್ರಶಂಸಿಸಿದರು.

backಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X