ಹ್ಯಾನ್ಸಿ ಕ್ರೋನಿಯೆಗೆ ಜೀವನ ಪರ್ಯಂತ ನಿಷೇಧ
ಕೇಪ್ಟೌನ್ : ಮೋಸದಾಟ ಆಡಿ, ತಪ್ಪೊಪ್ಪಿಕೊಂಡು, ಜನರ ಮರುಕ ಗಿಟ್ಟಿಸಿದ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ ಜೀವನ ಪರ್ಯಂತ ಪ್ರಥಮ ದರ್ಜೆ ಕ್ರಿಕೆಟ್ ಆಡುವಂತಿಲ್ಲ. ಯುನೈಟೆಡ್ ಕ್ರಿಕೆಟ್ ಮಂಡಳಿ (ಯು ಸಿ ಬಿ) ಮಂಗಳವಾರ ಈ ಕುರಿತ ಆದೇಶ ಹೊರಡಿಸಿದ್ದು, ಕ್ರೋನಿಯೆ ಕ್ಷಮಾದಾನದ ಬಗೆಗಿದ್ದ ನಿರೀಕ್ಷೆಗಳು ಹುಸಿಯಾಗಿವೆ.
ಮಂಡಳಿ ಹೊರಡಿಸಿರುವ ಆದೇಶದನ್ವಯ, ಯು ಸಿ ಬಿ ನಡೆಸುವ ಪ್ರಥಮ ದರ್ಜೆ ಕ್ರಿಕೆಟ್ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಕ್ರೋನಿಯೆ ಆಡುವಂತಿಲ್ಲ ಹಾಗೂ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಿಲ್ಲ. ಮಂಗಳವಾರ ದಕ್ಷಿಣ ಆಫ್ರಿಕದ ಯುನೈಟೆಡ್ ಕ್ರಿಕೆಟ್ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಾಮರ್ಥ್ಯಕ್ಕಿಂತ ಕಳಪೆ ಆಟ ಆಡಲು ಹಾಗೂ ಪಂದ್ಯಗಳ ಬಗೆಗೆ ಮಾಹಿತಿ ನೀಡಲು 1996ರಿಂದ 2000ದವರೆಗೆ 5 ಬಾರಿ ವಿವಿಧ ಬುಕ್ಕಿಗಳಿಂದ ಸಾವಿರಾರು ಡಾಲರ್ ಹಣ ಪಡೆದಿರುವುದಾಗಿ ಜೂನ್ ತಿಂಗಳಲ್ಲಿ ಕಿಂಗ್ ಆಯೋಗಕ್ಕೆ ಕ್ರೋನಿಯೆ ತಿಳಿಸಿದ್ದರು. ತಮ್ಮ ಸಹ ಆಟಗಾರರಿಗೂ ಹಣದ ಆಮಿಷ ಒಡ್ಡಿದ್ದರು.
ದಕ್ಷಿಣ ಆಫ್ರಿಕದಲ್ಲಿ ಮ್ಯಾಚ್ಫಿಕ್ಸಿಂಗ್ ತನಿಖೆ ನಡೆಸುತ್ತಿರುವ ಕಿಂಗ್ ಆಯೋಗ ತನ್ನ ನಿರ್ಧಾರವನ್ನು ಹಾಗೂ ಶಿಫಾರಸುಗಳನ್ನು ನವೆಂಬರ್ ಹೊತ್ತಿಗೆ ಪ್ರಕಟ ಪಡಿಸುವ ನಿರೀಕ್ಷೆಯಿದೆ. ಮಂಡಳಿಯ ಸಾಮಾನ್ಯ ಸಭೆಯ ನಿರ್ಧಾರದ ಬಗೆಗೆ ಏನಾದರೂ ಮನವಿ ಸಲ್ಲಿಸಬೇಕಾಗಿದ್ದಲ್ಲಿ, 7 ದಿನಗಳೊಳಗೆ ಸಲ್ಲಿಸುವಂತೆ ಕ್ರೋನಿಯೆಗೆ ಆದೇಶ ನೀಡಲಾಗಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications