ನ್ಯಾಯದೇವತೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಕರ್ನಾಟಕರಾಜ್ ಬಿಡುಗಡೆಯ ನಿರ್ಣಾಯಕ ವಿಚಾರಣೆ ಬುಧವಾರ
* ಟಿ. ಎಂ. ಸತೀಶ್
ಬೆಂಗಳೂರು: ರಾಜ್‌ಕುಮಾರ್ ಬಿಡುಗಡೆ ಪ್ರಕ್ರಿಯೆಯ ನಿರ್ಣಾಯಕ ಘಟ್ಟ ಎಂದು ನಿರೀಕ್ಷಿಸಲಾಗುತ್ತಿರುವ ಟಾಡಾ ಬಂದಿಗಳ ಬಿಡುಗಡೆ ಸಂಬಂಧದ ವಿಶೇಷ ತೆರವು ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಬುಧವಾರ (ಅ. 11) ಮತ್ತೆ ಕೈಗೆತ್ತಿಕೊಳ್ಳಲಿದೆ.
ಇಡೀ ಕರ್ನಾಟಕಕ್ಕೆ ತಲ್ಲಣ ಉಂಟುಮಾಡಿ ರಾಜ್ಯದ ಜನತೆಯನ್ನು ನಿರಂತರ ಆತಂಕ, ಕುತೂಹಲದಲ್ಲಿ ನಿಲ್ಲಿಸಿರುವ ರಾಜ್ ಅಪಹರಣ ಪ್ರಕರಣ ಸಂಭವಿಸಿ ಇವತ್ತಿಗೆ 73 ದಿನ. ಇನ್ನೇನು ರಾಜ್ ಬಿಡುಗಡೆಯ ಕ್ಷಣ ಹತ್ತಿರವಾಯಿತು ಎನ್ನುವ ಹೊತ್ತಿಗೆ ಮೈಸೂರಿನ ಅಬ್ದುಲ್ ಕರೀಂ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ವಿಶೇಷ ತೆರವು ಅರ್ಜಿಯಿಂದಾಗಿ ರಾಜ್ ಬಿಡುಗಡೆ ಪ್ರಕ್ರಿಯೇ ಬುಡಮೇಲಾಯಿತು.
ಅವತ್ತಿನಿಂದ ಶತಾಯಗತಾಯ ಹೋರಾಡುತ್ತಾ ಬಂದಿರುವ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ನಾಳೆ ಅಕ್ಟೋಬರ್ 11 ಅಗ್ನಿ ಪರೀಕ್ಷೆಯ ದಿವಸ. ಅಂದಹಾಗೆ ನಾಳೆಗೆ ಕೃಷ್ಣ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬುತ್ತದೆ. ನಾಳಿನ ನ್ಯಾಯಾಂಗ ಸಮರದಲ್ಲಿ ಕೃಷ್ಣ ಗೆಲ್ಲುತ್ತಾರೆಯೇ ? ಟಾಡಾ ಬಂದಿಗಳ ಬಿಡುಗಡೆಯಾಗಿ ರಾಜ್ ಕಾಡಿನಿಂದ ಕ್ಷೇಮವಾಗಿ ಹೊರಬರುತ್ತಾರೆಯೇ ?
ಕಾನೂನು ಸಮರ : ಬುಧವಾರ ರಾಜ್ಯದ ಪರ ಸಮರ್ಥವಾಗಿ ವಾದ ಮಂಡಿಸಿ, ಟಾಡಾ ಬಂದಿಗಳ ಬಿಡುಗಡೆಗೆ ಶತಾಯ ಗತಾಯ ಹೋರಾಡಲು ರಾಜ್ಯ ಸರಕಾರ ಮಾಜಿ ಅಟಾರ್ನಿ ಜನರಲ್ ಪರಾಶರನ್ ಅವರ ಸೇವೆಯ ಲಾಭ ಪಡೆಯುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ರಾಜ್ಯ ಸರಕಾರ ಕೈಗೊಂಡ ಕ್ರಮವನ್ನು ಸಮರ್ಥಿಸಲು ರಾಜ್ಯ ಸರಕಾರ ಸಕಲ ಸಜ್ಜಾಗಿದೆ. ಈ ವಿಷಯವನ್ನು ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ. ಚಂದ್ರೇಗೌಡ ಸ್ಪಷ್ಟಪಡಿಸಿದ್ದಾರೆ.
ಈ ವರೆಗೆ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಅವರ ನೆರವು ಪಡೆಯಲಾಗಿದೆಯಾದರೂ, ಹೆಚ್ಚಿನ ಅನುಭವ ಇರುವ ಪರಾಶರನ್ ಅವರನ್ನು ಖುದ್ದಾಗಿ ವಾದಿಸುವಂತೆ ಕೋರಲಾಗಿದೆ. ಹರೀಶ್ ಸಾಳ್ವೆ ಅವರ ನೆರವೂ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಜಯ ನಮ್ಮದೇ ಎಂದು ವಾದಿಸುತ್ತಿದ್ದಾರೆ ರಾಜ್ಯ ಕಾನೂನು ಸಚಿವ ಡಿ. ಬಿ. ಚಂದ್ರೇಗೌಡ. ತಮಿಳುನಾಡು ಸರಕಾರ ಹಾಗೂ ಕೇಂದ್ರ ಸರಕಾರಗಳೆರಡೂ ರಾಜ್ಯದ ನಿಲುವನ್ನು ಸಮರ್ಥಿಸಿ ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ತೀರ್ಪು ಕರ್ನಾಟಕದ ಪರ ಇರುತ್ತದೆ ಎಂಬುದು ಚಂದ್ರೇಗೌಡ ಅವರ ಲೆಕ್ಕಾಚಾರ.
1 ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications