Get Updates
Get notified of breaking news, exclusive insights, and must-see stories!

ದೋಣಿ-ಯಾ-ಟ ಆಡು-ವ ಬನ್ನಿ-ರೋ.. ಸುಳ್ಯ-ದ ಹೊಂಡ-ಗ-ಳ-ಲ್ಲಿ

ಮಂಗಳೂರು: ಸುಳ್ಯದ ಸಂಪಾಜೆ ರಸ್ತೆಯಲ್ಲಿನ ಹೊಂಡಗಳ ಸಂಖ್ಯೆ ಗಿನ್ನೆಸ್‌ ದಾಖಲೆ ನಿರ್ಮಿಸಬಹುದು. ಅತ್ತ ಪುತ್ತೂರಿನಿಂದ ಸುಳ್ಯ ಪ್ರವೇಶಿಸುವವರಿಗೂ ತಾಲ್ಲೂಕು ಗಡಿಯಲ್ಲಿ ಕೆಸರು ಹೊಂಡಗಳ ನಡುವೆ ಚೂರು ಪಾರು ರಸ್ತೆ ಕಾಣಿಸುತ್ತದೆ. ಭಾರಿ ವಾಹನಗಳು ಓಡಾಡುವ ರಭಸಕ್ಕೆ ಪಕ್ಕದಲ್ಲಿ ನಡೆಯುವವರಿಗೆ ಸಣ್ಣ ಪುಟ್ಟ ಕಲ್ಲುಗಳು ಹಾರಿ ಬಂದು ಹೊಡೆಯುತ್ತವೆ. ಸಾಂಟ್ರೋ, ಮಾರುತಿಯಂತಹ ಕಾರುಗಳ ಗಾಜು ಪುಡಿಯಾಗುತ್ತದೆ. ಬಿಳಿ ಕಾರುಗಳು, ಬಸ್ಸುಗಳು, ಶರಟುಗಳು ಸುಳ್ಯ ತಾಲ್ಲೂಕು ಕೇಂದ್ರ ತಲುಪುವ ಹೊತ್ತಿಗೆ -ಕೆಂಪಾಗಿರುತ್ತವೆ.

ಸುಳ್ಯದ ರಸ್ತೆ ಭಯಂಕರವಾಗಿ ಕೆಟ್ಟುಹೋಗಲು ಕಾರಣ ಸುಳ್ಯ ಮೀಸಲು ವಿಧಾನ ಸಭಾ ಕ್ಷೇತ್ರವಾಗಿರುವುದು ಎನ್ನುವ ಆಪಾದನೆಯೂ ಇದೆ. ತಾಲೂಕು ಕೈಗಾರಿಕೆ ಮತ್ತು ವಾಣಿಜ್ಯ ಮಹಾ ಮಂಡಳಿಯ ಅಧ್ಯಕ್ಷ ಎಂ. ಬಿ. ಸದಾಶಿವರ ಪ್ರಕಾರ ಅವರು ಈ ರಸ್ತೆಯಲ್ಲಿ ಅನಿವಾರ್ಯವಾಗಿ ವಾಹನ ಓಡಿಸುತ್ತಾರೆ. ಮೂರು ದಿನ ಓಡಾಡಿದ -ವಾಹನ ನಾಲ್ಕನೇ ದಿನ ಗ್ಯಾರೇಜಿನಲ್ಲಿರುತ್ತದೆ. ಕಿಟಕಿ ಗಾಜು ತೆರೆದು ಗಾಳಿ ಸೇವಿಸುತ್ತಾ ಡ್ರೆೃವಿಂಗ್‌ ಮಾಡುವ ಕನಸು ಹೊತ್ತವರ ವಾಹನಗಳಿಗೆ ಸುಳ್ಯದ ಹೊಂಡಗಳಲ್ಲಿನ ರಸ್ತೆಯಲ್ಲಿ ಜಾಗವಿಲ್ಲ . ಕೆಸರಿನಭಿಷೇಕ ಕಡ್ಡಾಯ.

ರಸ್ತೆ ಮೇಲೆ ಡಾಂಬರ್‌ ಯಾಕೆ ನಿಲ್ಲುವುದಿಲ್ಲ : ಸುಳ್ಯದಲ್ಲಿ ಸಿಕ್ಕಾ ಪಟ್ಟೆ ಮಳೆ ಬರುತ್ತದೆ. ಆದ್ದರಿಂದ ಹಾಕಿದ ಡಾಂಬರು ನಿಲ್ಲುವುದಿಲ್ಲ ಎನ್ನುವುದು ಡಾಂಬರು ಹಾಕಿದವರ ನುಡಿ ಮುತ್ತುಗಳು. ಆದರೆ ಊರಿನವರು ತಕ್ಷಣ ಕೇಳುತ್ತಾರೆ, ಈ ರಸ್ತೆಗೆ ಒಂದುವರೆ ಕಿಮೀ ದೂರದಲ್ಲಿರುವ ಕೇರಳ- ಕರ್ನಾಟಕ ಹೆದ್ದಾರಿಗೂ ಸುಳ್ಯಕ್ಕೆ ಸುರಿದಷ್ಟೇ ಮಳೆ ಸುರಿಯುತ್ತದೆ. ಆ ರಸ್ತೆಯ ಡಾಂಬರು ಯಾವ ಮಾಂತ್ರಿಕನಿಂದಾಗಿ ಚೆನ್ನಾಗಿದೆ ? ಪರ್ಸೆಂಟೇಜ್‌ ವ್ಯವಹಾರಗಳು, ಅರೆ ಬರೆ ಕಾಮಗಾರಿಗಳು ರಸ್ತೆಯನ್ನು ನುಂಗಿ ನೀರು ಕುಡಿದಿವೆ ಎಂದು ಗೊಣಗುತ್ತಾರೆ. ಹುಡ್ಕೋ ನೆರವಿನಿಂದ ಮಾಣಿ -ಮೈಸೂರು ರಸ್ತೆ ಅಭಿವೃದ್ಧಿ ಯೋಜನೆಗೆ ಚಾಲನೆ ದೊರೆತಿದೆ. ಆದರೆ ಯೋಜನೆ ಮುಗಿಯಲು 3 ವರ್ಷ ಬೇಕು.

ಸಚಿವರು ಬರೇ ಜಗಳಾಡಿದರು : ಸುಳ್ಯದ ಸಮಾರಂಭವೊಂದಕ್ಕೆ ಬಂದ ಹಣಕಾಸು ಸಹಾಯಕ ಸಚಿವ ಧನಂಜಯ ಕುಮಾರ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಗಳ ಕಾರುಗಳು ಶೇಪ್‌ ಕಳೆದುಕೊಂಡಿತ್ತು. ರಸ್ತೆ ನಿರ್ವಹಣೆ ರಾಜ್ಯ ಸರಕಾರದ ಜವಾಬ್ದಾರಿ ಎಂದು ಧನಂಜಯರು ಹೇಳಿದರೆ, ಕಳೆದ ನಾಲ್ಕು ಸಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ ನೀವು ಏನು ಮಾಡಿದಿರಿ ? ನಾವೋ ಈಗಷ್ಟೇ ಅಧಿಕಾರಕ್ಕೆ ಬಂದವರು ಎಂದರು ರೈ. ಮೆತ್ತಗೆ ಇಬ್ಬ-ರೂ ಕಚ್ಚಾಡಿಕೊಂಡ ತ-ಮಾ-ಷಿ-ಯ-ನ್ನು ಕಂಡ-ದ್ದ-ಷ್ಟೇ ಸುಳ್ಯ-ಕ್ಕಾ-ದ ಲಾಭ.

ನಮ್ಮ ಕರ್ಮ : ಟ್ಯಾಕ್ಸಿಗಳು, ಆಟೋಗಳು ಓಡಾಡಲು ನಿರಾಕರಿಸುವ ಈ ಊರಿನಲ್ಲಿ ರುವ ಉದ್ಯಮಿ, ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಗಳ ಸ್ಥಾಪಕ ಅಧ್ಯಕ್ಷ ಕೆ. ವಿಶ್ವನಾಥ್‌, ನಾವು ಮಾಡಿದ ಯಾವ ಪಾಪಕ್ಕೆ ಈ ಶಿಕ್ಷೆ ಎಂದು ಕೇಳುತ್ತಾರೆ. ಈ ಹೊಂಡಗಳಲ್ಲಿ ಪ್ರಯಾಸಪಟ್ಟು ದ್ವಿಚಕ್ರವಾಹನ ಓಡಿಸಿದ ತಾಜ್‌ ಮಹ್ಮದ್‌ ತಮ್ಮ 35 ರ ಹರೆಯದಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ 1998-99ರಲ್ಲಿ ಸುಳ್ಯದ ರಸ್ತೆ ರಿಪೇರಿಗೆ 3.83 ಕೋಟಿ ರೂಪಾಯಿ, 1999-00 ರಲ್ಲಿ 6.19 ಕೋಟಿ ರೂಪಾಯಿ ಬೊಕ್ಕಸ ಸೇರಿದೆ. ಆದರೆ ರಸ್ತೆಗೆಷ್ಟು ಇಳಿದುಬಂದಿದೆ ಎನ್ನುವ ಬಗ್ಗೆ ಲೆಕ್ಕವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+