ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಲ್‌ ಕ್ಲಿಂಟನ್‌ರ ಸಹಿಗೆ ಕಾದಿರುವ ನಿಮ್ಮ ಅಮೆರಿಕಾ ವಿಸಾ

By Staff
|
Google Oneindia Kannada News

ವಾಷಿಂಗ್ಟನ್‌ : ನೂತನ ವಿತ್ತ ವರ್ಷದಲ್ಲಿ 2 ಲಕ್ಷ ನುರಿತ ವಿದೇಶೀ ಕಾರ್ಮಿಕರನ್ನು ಎಚ್‌- 1ಬಿ ವೀಸಾ ನಿಯಮದಡಿಯಲ್ಲಿ ಅಮೆರಿಕೆಗೆ ಕರೆಸಿಕೊಳ್ಳಲು ಹೊಸ ಮಸೂದೆಯಾಂದನ್ನು ಅಮೆರಿಕ ಕಾಂಗ್ರೆಸ್‌ ಅಂಗೀಕರಿಸಿದ್ದು, ಅದರ ಜಾರಿಗೆ ಅಧ್ಯಕ್ಷ ಬಿಲ್‌ ಕ್ಲಿಂಟನ್‌ರ ಒಂದು ಸಹಿ ಸಾಕು.

ಕಳೆದ ಮೇ ತಿಂಗಳಲ್ಲಿ ಎಚ್‌-1ಬಿ ವೀಸಾ ಸಂಖ್ಯೆಯನ್ನು ಹೆಚ್ಚಿಸುವ ಭರವಸೆಯನ್ನು ಕ್ಲಿಂಟನ್‌ ನೀಡಿದ್ದು, ಸದ್ಯದಲ್ಲೇ ಮಸೂದೆಗೆ ಅವರ ಸಹಿ ಬೀಳಲಿದೆ ಎಂದು ರಿಪಬ್ಲಿಕನ್‌ ಪಕ್ಷದ ಸೆನೆಟ್‌ ಸದಸ್ಯ ಸ್ಪೆನ್ಸರ್‌ ಅಬ್ರಹಾಂ ಹೇಳಿದ್ದಾರೆ.

ಐಟಿ ನುರಿತವರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು : ಭಾರತದ ಐಟಿ ನುರಿತರಿಗೆ ಇನ್ನು ಕೆಲವೇ ದಿನಗಳಲ್ಲಿ ಸುಗ್ಗಿ. ಈವರೆಗೆ ಈ ವಿಶೇಷ ವೀಸಾ ಅನುಕೂಲ ಪಡೆದು ಅಮೆರಿಕೆಗೆ ಹೋಗಿರುವ ವಿದೇಶೀಯರಲ್ಲಿ ಭಾರತೀಯರದೇ ಸಿಂಹ ಪಾಲು. 2000ನೇ ವಿತ್ತೀಯ ವರ್ಷ (ಸೆಪ್ಟೆಂಬರ್‌ 30ಕ್ಕೆ ಮುಗಿದಿದೆ) ದ ಫೆಬ್ರವರಿ ಹೊತ್ತಿಗೆ ಎಚ್‌-1ಬಿ ವೀಸಾ ಪಡೆದ ವಿದೇಶೀಯರಲ್ಲಿ ಭಾರತೀಯರೇ ಶೇ. 43ರಷ್ಟಿದ್ದರು. ಚೀನಾಕ್ಕೆ ಅದರ ನಂತರದ ಸ್ಥಾನ. ಈ ಸವಲತ್ತು ಪಡೆದ ವಿದೇಶೀಯರ ಪೈಕಿ ಶೇ. 50ರಷ್ಟು ಜನ ಕಂಪ್ಯೂಟರ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಈಗಿರುವ ನಿಯಮದಂತೆ 2001ನೇ ವಿತ್ತೀಯ ವರ್ಷದಲ್ಲಿ ನೀಡಬಹುದಾದ ಗರಿಷ್ಠ ಎಚ್‌-1ಬಿ ವೀಸಾ ಸಂಖ್ಯೆ ಒಂದು ಲಕ್ಷದ ಏಳೂವರೆ ಸಾವಿರ. 2002ನೇ ವಿತ್ತೀಯ ವರ್ಷದಲ್ಲಿ ಈ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಲಿದೆ. ಆದರೆ, ಅಮೆರಿಕೆಯಲ್ಲಿ ಐಟಿಗೆ ಸಂಬಂಧಿಸಿದ 10 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಈಗಾಗಲೇ ಖಾಲಿ ಬಿದ್ದಿವೆ. ಮುಂದಿನ 10 ವರ್ಷಗಳ ಅವಧಿಯಲ್ಲಿ ಪ್ರತಿವರ್ಷ 2 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಸೃಷ್ಟಿಯಾಗಲಿವೆ. ಈ ಕೊರತೆ ಭರಿಸಲೆಂದೇ ಅಮೆರಿಕ ಕಾಂಗ್ರೆಸ್ಸು ಹೊಸ ಮಸೂದೆ ಅಂಗೀಕರಿಸಿರುವುದು ಎಂದು ಅಬ್ರಹಾಂ ಹೇಳಿದ್ದಾರೆ.

ಮೊದಲು ಭಾರತದಿಂದ ಅಮೆರಿಕಕ್ಕೆ ಭಾರೀ ಸಂಖ್ಯೆಯಲ್ಲಿ ಹೋಗುತ್ತಿದ್ದವರು ವೈದ್ಯರು. ಈಗ ಅಮೆರಿಕೆಗೆ ಹಾರುತ್ತಿರುವ ವೈದ್ಯರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ವಿತ್ತೀಯ ವರ್ಷದಲ್ಲಿ ಎಚ್‌-1ಬಿ ವೀಸಾ ಪಡೆದ ವಿದೇಶೀ ವೈದ್ಯರ ಸಂಖ್ಯೆ ಕೇವಲ ಶೇ. 4.1. ಎಚ್‌- 1ಬಿ ಸವಲತ್ತು ಪಡೆದ ನುರಿತವರ ಸರಾಸರಿ ವಾರ್ಷಿಕ ಸಂಬಳ 50 ಸಾವಿರ ಡಾಲರ್‌ಗಳು.

ಮಾಡೆಲ್‌ಗಳಿಗೂ ಆ-ದ್ಯ-ತೆ: ಕ್ಲಿಂಟನ್‌ ಟೇಬಲ್ಲಿನ ಮೇಲಿರುವ ಮಸೂದೆಯಲ್ಲಿ ಮಾಡೆಲ್‌ಗಳಿಗೂ ವಿಶೇಷ ಆದ್ಯತೆ ನೀಡಲಾಗಿದೆ. ಮಾಡೆಲಿಂಗ್‌ನಲ್ಲಿ ಸೂಕ್ತ ಅರ್ಹತೆ ಇರುವವರಿಗೂ ಎಚ್‌-1ಬಿ ವೀಸಾ ಕೊಡುವ ಪ್ರಸ್ತಾವನೆ ಇದೆ. ಫೆಬ್ರವರಿವರೆಗೆ ಈ ಸೌಕರ್ಯ ಪಡೆದ ಮಾಡೆಲ್‌ಗಳ ವಾರ್ಷಿಕ ವರಮಾನ ಸರಾಸರಿ 1 ಲಕ್ಷದ 30 ಸಾವಿರ ಡಾಲರ್‌. ಈ ಮಸೂದೆ ಅಂಗೀಕೃತವಾದಲ್ಲಿ ಇನ್ನು 3 ವರ್ಷಗಳಲ್ಲಿ 6 ಲಕ್ಷ ವಿದೇಶೀಯರಿಗೆ ಅಮೆರಿಕಕ್ಕೆ ಹಾರಲು ಅವಕಾಶ ಸಿಗಲಿದೆ.

ಏನೇ ಆಗಲಿ, ವಿಶ್ವದ ಸಿಲಿಕಾನ್‌ ವ್ಯಾಲಿಗೆ ಭಾರತದ ಸಿಲಿಕಾನ್‌ ನಗರಿಯ ಕಂಪ್ಯೂಟರ್‌ ಕ್ಷೇತ್ರದ ನುರಿತ-ವರು ಪ್ರಯಾಣ ಬೆಳೆಸಲು ಮುಕ್ತ ಆಮಂತ್ರಣ ದೊರೆಯಲಿದೆ. ಪ್ರತಿಭಾ ಪಲಾಯನದ ಬಗ್ಗೆ ನಡೆಯುತ್ತಿರುವ ವಾದ ವಿವಾದಗಳು ಮತ್ತೆ ಚುರುಕಾಗಲಿವೆ. ನೀವೇನಂತೀರಿ?

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X