ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ದೇಶದ ನಿಲುವುಗಳನ್ನು ಸಮರ್ಥಿಸಲು ಒಗ್ಗಟ್ಟು ಈಗ ಅನಿವಾರ್ಯ

By Staff
|
Google Oneindia Kannada News

ವಿವಿಧ ವಿಷಯಗಳ ಮೇಲೆ ಅಮೆರಿಕಾ ಸರಕಾರದ ಮೇಲೆ ಪ್ರಭಾವ ಬೀರುವ ಕಾರ್ಯಕ್ರಮ ಕುರಿತು ಕೆಲವು ಟೀಕೆಗಳು ಈಗಾಗಲೇ ವ್ಯಕ್ತವಾಗಿದ್ದರೂ ಲೇಖನಗಳು ಪ್ರತಿಪಾದಿಸುತ್ತಿರುವ ಅಂಶಗಳು ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂಬುದು ರಾಜು ಅವರ ಅಭಿಪ್ರಾಯ. ಐಎಸಿಪಿಎ ತನ್ನ ಕಾರ್ಯವ್ಯಾಪ್ತಿಯನ್ನು ಕೇವಲ ಅಮೆರಿಕಕ್ಕಷ್ಟೇ ಸೀಮಿತಗೊಳಿಸಿಕೊಂಡಿಲ್ಲ. ಬ್ರಿಟನ್‌, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಈ ಬಗ್ಗೆ ಪ್ರಚಾರ ಕೈಗೊಂಡಿದೆ.

ಅಮೆರಿಕದಲ್ಲಿರುವ ಪ್ರತಿ ಭಾರತೀಯನೂ ರಾಜಕೀಯದಲ್ಲಿ ತೊಡಗುವುದು ತಮ್ಮ ಹಕ್ಕು ಎಂದು ಭಾವಿಸಬೇಕು ಎಂಬ ಅಂಶವನ್ನು ಪ್ರಮುಖವಾಗಿ ಹೇಳಲಾಗುತ್ತಿದ್ದು, ಈ ಹಿಂದೆ ಭಾರತದ ಪರವಾಗಿನ ಪ್ರಭಾವ ಬೀರುತ್ತಿದ್ದ ಸಂಗತಿಗಳ ಬಗ್ಗೆಯೂ ಬೆಳಕು ಚಲ್ಲಲಾಗುತ್ತಿದೆ. ಅಮೆರಿಕ ಮಂದಿ ರಾಜಕೀಯ ಪ್ರಕ್ರಿಯೆಯಲ್ಲಿ ಹೇಗೆ ಭಾಗವಹಿಸುತ್ತಾರೆ, ಈಗ ವ್ಯಕ್ತಿಗತವಾಗಿ ಮಾಡಬೇಕಿರುವ ಹಾಗೂ ಸಂಘಸಂಸ್ಥ್ಥೆಗಳ ಪಾತ್ರವನ್ನು ವಿವರಿಸಲಾಗುತ್ತಿದೆ. ತಮ್ಮ ಸೆನೆಟ್‌ ಸದಸ್ಯರ ಮನವೊಲಿಸುವ ಒಂದು ಗುಂಪನ್ನು ಹೇಗೆ ಸಂಘಟಿಸುವುದು ನಿರ್ಧಿಷ್ಟ ವಿಷಯದ ಕುರಿತು ಹೇಗೆ ಮನವರಿಕೆ ಮಾಡಿಕೊಡಬೇಕೆಂಬ ಬಗ್ಗೆಯೂ ಗಮನ ಹರಿಸಲಾಗಿದೆ.

ಇಸ್ರೇಲ್‌ ಮಾದರಿ: ಈ ಕುರಿತು ಸಮೀಕ್ಷೆಯನ್ನೂ ನಡೆಸಲಾಗಿದೆ. ತಮ್ಮ ದೇಶದ ಪರಿವಾಗಿ ಅಭಿಪ್ರಾಯ ರೂಪಿಸುವ, ಮಂಡಿಸುವ ವಿಷಯಗಳಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿರುವ ಇಸ್ರೇಲ್‌ ದೇಶದ ಪರವಾಗಿರುವ ಸಂಸ್ಥೆಯನ್ನು ಮಾದರಿಯನ್ನಾಗಿಟ್ಟುಕೊಳ್ಳಲಾಗಿದೆ.

ಶಾಸಕರಾಗಿ, ಅಧಿಕಾರಿಯಾಗಿ ಅನುಭವ ಹೊಂದಿರುವ ನ್ಯೂರೆನ್‌ಬರ್ಗ್‌, ಹೊರಗಿನಿಂದ ಶಿಫಾರಸು ಮಾಡುವುದೂ ಸೇರಿದಂತೆ ಸರಕಾರವೊಂದರ ಮೇಲೆ ಪ್ರಭಾವ ಬೀರಲು ಉಪಯೋಗಹಿಸಬೇಕಾದ ಅನೇಕ ಸಾಧ್ಯತೆಗಳನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ ಚರ್ಚಿಸಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ಅಸ್ಥಿತ್ವದಲ್ಲಿರುವ ಬಹಳ ಮುಖ್ಯ ಪ್ರಭಾವ ಬೀರುವ ಸಂಘಟನೆಗಳ ಜೊತೆ ಕೆಲಸ ಮಾಡಿರುವ ನ್ಯೂರೆನ್‌ಬರ್ಗ್‌, ತಮ್ಮದೇ ಸಂಸ್ಥೆಯನ್ನೂ ಹುಟ್ಟುಹಾಕಿ ಅನುಭವ ಪಡೆದವರಾಗಿದ್ದಾರೆ ಇವರ ಲೇಖನಗಳ ಮಾರ್ಗದರ್ಶನದಲ್ಲಿ ಅನಿವಾಸಿ ಭಾರತೀಯರ ಲಾಭಿ ಅಮೆರಿಕದಲ್ಲಿ ಈಗ ತೀರ್ವವಾಗಿ ಬೆಳೆಯುತ್ತಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X