Get Updates
Get notified of breaking news, exclusive insights, and must-see stories!

ನಮ್ಮೂ-ರಿ-ನ ಮಳೆ-ಬಿ--ಲ್ಲಿಗೆ ಏಳು ಬಣ್ಣಮಾರಿ-ಷ-ಸ್‌-ನ ಭೂಮಿ-ಗೋ 22 ಬಣ್ಣ

  • ಮಾಹಿತಿ : ಕಿರ-ಣ್‌ ಮಹಾಲೆ
  • ಹಿಂದೂ ಮಹಾ ಸಾಗರದಲ್ಲಿನ ಪೇರು ಹಣ್ಣಿನಾಕಾರದ, ಕಡಲ ಕಿನಾರೆಗಳ, ನೈಸರ್ಗಿಕ ಉದ್ಯಾನಗಳ, ಧೋಗುಟ್ಟುವ ಜಲಪಾತಗಳ ಪುಟ್ಟ ವಾಲ್ಕೆನಿಕ್‌ ದ್ವೀಪ ರಾಷ್ಟ್ರ ಮಾರಿಷಸ್‌. ಅಸೂಯೆ ಇಲ್ಲದೆ ಹೇಳುವುದಾದರೆ, ಸೌಂದರ್ಯ ಕಾಲು ಮುರಿದು ಬಿದ್ದಿರುವ ತಾಣ.

    ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು, ಧುಮುಕುವ ಜಲಲ ಧಾರೆ, ಬೇಟೆಗೂ ಅವಕಾಶವಿರುವ ಖಾಸಗಿ ಕಾಡುಗಳು, ಹಸಿರ ಹೊದ್ದ ಗುಡ್ಡ , ಝರಿ. ದ್ವೀಪದ ಉತ್ತರ ಭಾಗದಲ್ಲಂತೂ ಅನೇಕ ಬೀಚ್‌ಗಳು ಮೈ ಚಾಚಿವೆ. ದಕ್ಷಿಣದಲ್ಲಿ ಗುಡ್ಡ , ಜಲಪಾತ, ನೈಸರ್ಗಿಕ ಉದ್ಯಾನಗಳು. ನಮ್ಮೂರಿನ ಮಳೆಬಿಲ್ಲಿಗೆ 7 ಬಣ್ಣಗಳಾದರೆ ಇಲ್ಲಿನ ಭೂಮಿಗೇ 22 ಬಣ್ಣ .

    ಜೊತೆಗೆ ನಿಲ್ಲಿಸಿದರೆ ಜನಸಂಖ್ಯೆಯಲ್ಲಾಗಲೀ, ವಿಸ್ತೀರ್ಣದಲ್ಲಾಗಲೀ ಬೆಂಗಳೂರಿನ ಸಮಕ್ಕೆ ತೂಗದ ಈ ದ್ವೀಪದಲ್ಲಿ ಕೆಲವು ಕನ್ನಡಿಗರೂ ಇದ್ದಾರೆ. ಕೆಲವು ಕನ್ನಡ ಚಿತ್ರಗಳ ಚಿತ್ರೀಕರಣವೂ ಇಲ್ಲಿ ನಡೆದಿದೆ. ಇತ್ತೀಚಿನ ಚಿತ್ರ ಗಲಾಟೆ ಅಳಿಯಂದ್ರು ಮಾರಿಷಸ್‌ನ ಕಡಲ ಕಿನಾರೆಗಳನ್ನು ಸೆರೆ ಹಿಡಿದಿದೆ.

    ಮಾರಿಷಸ್‌ ಎಂದಕೂಡಲೇ ಭಾರತೀಯರ ಮೈ ನಿಮಿರುವುದಕ್ಕೆ ಕಾರಣ ಇಲ್ಲಿರುವ ಮೂರನೇ ಎರಡರಷ್ಟು ಪ್ರಮಾಣದ ಭಾರತೀಯ ಮೂಲದ ಜನಸಂಖ್ಯೆ. ಅಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಿರುವುದೂ ಕಾರಣವಿರಬಹುದು. ನೂರು ಮಾರಿಷಸ್‌ ಪ್ರಜೆಗಳಲ್ಲಿ 65 ಮಂದಿ ಹಿಂದೂಗಳೇ. ಅವರಲ್ಲಿ 60 ಜನ ಬಿಹಾರಿಗಳು. ಉಳಿದಂತೆ ತಮಿಳರು, ತೆಲುಗರು, ಮರಾಠಿಗರು. ಹಿಂದೂಗಳ ಜೊತೆಗೆ ಕ್ರಿಯೋಲರು (ಶೇ.15), ಮುಸಲ್ಮಾನರು (ಶೇ.10), ಚೀನಿಯರು (ಶೇ.5) ಇದ್ದಾರೆ. ಭಾರತದಂತೆ ಮಾರಿಷಸ್‌ ಕೂಡ ಸರ್ವ ಜನಾಂಗದ ಶಾಂತಿಯ ತೋಟ.

    ಡಚ್‌ ದೊರೆಯ ಹೆಸರೇ ದ್ವೀಪಕ್ಕೂ ಅಂಟಿಕೊಂಡಿತು

    1968 ರಲ್ಲಿ ಸ್ವತಂತ್ರಗೊಳ್ಳುವ ಮುನ್ನ ಮಾರಿಷಸ್‌ ಸುಮಾರು 158 ವರ್ಷಗಳ ಕಾಲ ಬ್ರಿಟೀಷ್‌ ವಸಾಹತುಗಳ ಪಟ್ಟಿಯಲ್ಲಿತ್ತು . ಪ್ರಜಾಪ್ರಭುತ್ವ ವ್ಯವಸ್ಥೆಯ ಸುಂದರ ದ್ವೀಪದ ಪ್ರಜೆಗಳ ಸಂಖ್ಯೆ 12 ಲಕ್ಷ. 60 ಕಿಮೀ ಉದ್ದ, 50 ಕಿಮೀ ಅಗಲದ ವಿಸ್ತೀರ್ಣದಲ್ಲಿ ಮಾರಿಷಿಯನ್ನರ ಕಾರುಬಾರು.

    ಅರಬ್ಬರಿಗೆ 10 ನೇ ಶತಮಾನದ ಹೊತ್ತಿಗಾಗಲೇ ಮಾರಿಷಸ್‌ನ ಅಸ್ತಿತ್ವ ಗೊತ್ತಿತ್ತು . ಡಚ್ಚರು ಈ ಪ್ರದೇಶದ ಮೇಲೆ ಪ್ರಭಾವ ಸಾಧಿಸಿದ್ದ 1598 ರ ಸುಮಾರಿನಲ್ಲಿ ತಮ್ಮ ದೊರೆಯ ಹೆಸರನ್ನೇ ದ್ವೀಪಕ್ಕಿಟ್ಟರು ಎನ್ನುತ್ತದೆ ನಾಮ ಪುರಾಣ. 1715 ರಲ್ಲಿ ಫ್ರೆಂಚರ ಅಧಿಪತ್ಯಕ್ಕೂ ದ್ವೀಪ ಒಳಗಾಗಿದ್ದುಂಟು.

    ಮಾರಿಷಸ್‌ ಪ್ರಜೆಯ ಮನೆ ಮಾತು ಕ್ರಿಯೋಲ್‌ ಅಥವಾ ಭೋಜ್‌ಪುರಿ. ಕಚೇರಿಯಲ್ಲಿ ಫ್ರೆಂಚ್‌, ಬರವಣಿಗೆಯಲ್ಲಿ ಇಂಗ್ಲೀಷ್‌, ಗುನುಗಲಿಕ್ಕೆ ಹಿಂದಿ ಹಾಡುಗಳು. ಇವಿಷ್ಟು ಸಾಕು ಭಾವೈಕ್ಯತೆಗೆ, ಸೌಹಾರ್ದತೆಗೆ ಮಾರಿಷಸ್‌ ತುಂಬಾ ಹೆಸರಾದುದು ಎನ್ನಲಿಕ್ಕೆ. ಜನಭಾಷೆಗಳೂ ಹಲವಾದರೂ, ಅಧಿಕೃತ ಭಾಷೆ ಫ್ರೆಂಚನ್ನು ಮುರಿದಂತೆ ಕಾಣುವ ಕ್ರಿಯೋಲ್‌. ಇಲ್ಲಿನ ಕರೆನ್ಸಿ ಮಾರಿಷಸ್‌ ರುಪಾಯಿ ಭಾರತದ 1.75 ರುಪಾಯಿಗೆ ಸಮ .

    ಮರಡೋನಾ ಹಾಗೂ ಪೀಲೆ ಪುಟಾಣಿಗಳಿಂದ ವಯೋ ವೃದ್ಧರವರೆಗೂ ಇಲ್ಲಿ ಜನಪ್ರಿಯರು. ಫುಟ್‌ಬಾಲ್‌ ಎಂದರೆ ಊಟ ನಿದ್ರೆ ಮರೆಯುವಷ್ಟು ಇಲ್ಲಿನ ಜನಕ್ಕೆ ಹುಚ್ಚು . ಬಾಲಿವುಡ್‌ ಸಿನಿಮಾಗಳು ಜನಪ್ರಿಯ.

    ಸಕ್ಕರೆ, ಸಾಗರೋತ್ಪನ್ನ, ಪ್ರವಾಸೋದ್ಯಮ- ಪುಟ್ಟ ದ್ವೀಪದ ಬದುಕು

    ಕಬ್ಬು ಮಾರಿಷಸ್‌ನ ಆರ್ಥಿಕತೆಯ ಬೆನ್ನೆಲುಬು. ಶೇ. 45 ಕ್ಕಿಂತಲೂ ಹೆಚ್ಚು ಕೃಷಿಭೂಮಿಯಲ್ಲಿ ಕಬ್ಬಿನದೇ ಬೆಳೆ. ಟೀ ಹಾಗೂ ಟೊಬ್ಯಾಕೊ ಇತರ ಮುಖ್ಯ ಬೆಳೆಗಳು. ಸಕ್ಕರೆಯ ರಫ್ತು ಪ್ರಮುಖ ವಿದೇಶಿ ವಿನಿಮಯ ಗಳಿಸಿಕೊಡುತ್ತದೆ. ನಂತರದ ಸ್ಥಾನ ಜವಳಿ ಉದ್ಯಮಕ್ಕೆ. ಸಾಗರೋತ್ಪನ್ನ ಕೂಡ ಆದಾಯ ಗಳಿಸುವ ಒಂದು ಮೂಲವಾಗಿದೆ. ಪ್ರವಾಸೋದ್ಯಮ ಕೂಡ ಮಾರಿಷಸ್‌ಗೆ ಆದಾಯ ತರುವ ಪ್ರಮುಖ ಮೂಲವಾಗಿದೆ. ಆದರೆ, ಗಳಿಸಿದ ವಿದೇಶಿ ವಿನಿಮಯದ ಬಹುಪಾಲು ಇಂಧನ ತೈಲ ಹಾಗೂ ಆಹಾರದ ಆಮದಿಗೆ ಸರಿಹೋಗುತ್ತದೆ.

    ಮಾರಿಷಸ್‌ನದು ಪ್ರವಾಸೀ ಪ್ರಿಯ ಹವಾಮಾನ. ಸದಾ 30 ರಿಂದ 14 ರ ನಡುವೆ ತಾಪಮಾನ ಸುಳಿದಾಡುತ್ತಿರುತ್ತದೆ. ದುರಂತವೆಂದರೆ, ಚೆಂದದ ಪುಟ್ಟ ದ್ವೀಪಕ್ಕೆ ಸದಾ ಚಂಡಮಾರುತದ ಭೀತಿ. ಡಿಸೆಂಬರ್‌ನಿಂದ ಏಪ್ರಿಲ್‌ ಅವಧಿಯಲ್ಲಿ ಚಂಡಮಾರುತ ಮಾಮೂಲು.

    ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಹಾಗೂ ಸರ್ಕಾರಿ ಬಸ್ಸುಗಳದ್ದೇ ಅಧಿಪತ್ಯ. ಸರ್ಕಾರಿ ಬಸ್‌ಗಳ ಸೇವೆ ಉತ್ತಮವಾಗಿದೆ. ಬಹಳಷ್ಟು ಜನರು ಬಸ್ಸುಗಳನ್ನೇ ಅವಲಂಬಿಸಿದ್ದಾರೆ. ಸಸ್ಯಾಹಾರ, ಮಾಂಸಾಹಾರ ಸಾಮಾನ್ಯ. ಎಲ್ಲಾ ತರಕಾರಿಗಳೂ ಲಭ್ಯ. ಬ್ರೆಡ್‌ ಜನಪ್ರಿಯ ಆಹಾರ. ರೋಟಿ, ದಾಲ್‌ಪುರಿಯೂ ಹೆಸರುವಾಸಿ. ಒಟ್ಟಿನಲ್ಲಿ ಚೆಲುವ ಆಸ್ವಾದಿಸುವವರ ಪಾಲಿಗೆ ಮಾರಿಷಸ್‌ ಇಳೆ ಮೇಲಿನ ನಂದನ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+