ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರಿ ಚಿಕಿತ್ಸೆಗೆ ಕಡಿವಾಣ ಹಾಕಬೇಕು : ಡಾ.ಸುದರ್ಶನ್‌

By Staff
|
Google Oneindia Kannada News

ಬೆಂಗಳೂರು : ಹೃದಯ ಸಂಬಂಧೀ ರೋಗಗಳು ಹಾಗೂ ಕ್ಯಾನ್ಸರ್‌ ಸೇರಿದಂತೆ ಭಾರೀ ವೆಚ್ಚದ ರೋಗಗಳಿಗೆ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ವೈದ್ಯರು , ಸಂಘಸಂಸ್ಥೆಗಳು ಮತ್ತು ಸರಕಾರಗಳು ಯತ್ನಿಸಬೇಕೆಂದು ರಾಜ್ಯ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷ ಡಾ. ಸುದರ್ಶನ್‌ ಕರೆ ನೀಡಿದ್ದಾರೆ.

‘ಇಂಡಿಯನ್‌ ಕಾಲೇಜ್‌ ಆಫ್‌ ಕಾರ್ಡಿಯಾಲಜಿ’ ಸಂಸ್ಥೆಯ ಏಳನೇ ವಾರ್ಷಿಕೋತ್ಸವದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನದ ವ್ಯಾಪಕ ಬಳಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವೈದ.್ಯಕೀಯ ಸೇವೆ ದುಬಾರಿಯಾಗುತ್ತಿದೆ ಹಾಗಾಗಿ ವೈದ್ಯಕೀಯ ಉಪಕರಣಗಳ ಆಮದು ಮತ್ತು ಹೊಸ ತಂತ್ರಜ್ಞಾನ ಬಳಕೆಗಾಗಿ ಸರಕಾರ ಧನ ಸಹಾಯ ನೀಡಿದರೆ ವೆಚ್ಚ ಕಡಿಮೆ ಮಾಡಲು ಸಾಧ್ಯ, ಈ ಸಂಬಂಧ ಕಾರ್ಯಪಡೆ ವರದಿಯಲ್ಲಿ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಡ ರೋಗಿಗಳಿಗೆ ವಿಮಾ ಕಂಪನಿಗಳು ಹೇಗೆ ನೆರವಾಗಬಹುದು ಎಂಬುದರ ಬಗೆಗೂ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಲಾಗಿದೆ. ಈ ವರದಿಯ ಬಗ್ಗೆ ಬರುವ ವಿಧಾನಸಭಾ ಅಧಿವೇಶನದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಹೃದಯಾಘಾತ ಇಷ್ಟ : ಕೆಲಸ ಮಾಡುತ್ತಲೇ ಹೃದಯಾಘಾತವಾಗಿ ಸಾಯುವುದನ್ನು ತಾವು ಇಚ್ಛಿಸುವುದಾಗಿ ರಾಜ್ಯಪಾಲರಾದ ರಮಾದೇವಿ ಹೇಳಿದ್ದಾರೆ.

ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು ಪ್ರಾಥಮಿಕ ಆರೋಗ್ಯಕ್ಕೆ ಒತ್ತು ಕೊಡಲು ನುರಿತ ವೈದ್ಯರನ್ನು ತಯಾರು ಮಾಡಬೇಕು. ಅದಕ್ಕಾಗಿ ಉತ್ತಮ ಸೌಲಭ್ಯಗಳನ್ನು ಒದಗಿಸುವ ದಿಸೆಯಲ್ಲಿ ಸರಕಾರ ಇನ್ನೂ ಹೆಚ್ಚು ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X