ಸಹನಾ ಕುಮಾರಿ- ಶಿಲ್ಪಾ ಸಿಕ್ವೆರಾಗೆ ದಸರಾ ಕ್ರೀಡಾ ರತ್ನ, ನಿಶಾಗೆ 4 ಚಿನ್ನ
ಮೈಸೂರು : ಬೆಂಗಳೂರಿನ ನಿಶಾ ಮೋಹಿತೆ 3 ದಿನಗಳ ಕಾಲ ನಡೆದ ದಸರಾ ಈಜು ಸ್ಪರ್ಧೆಯಲ್ಲಿ ಒಟ್ಟು 35 ಅಂಕ ಗಳಿಸಿ ವೈಯಕ್ತಿಕ ಚಾಂಪಿಯನ್ಷಿಪ್ ಗೆದ್ದಿದ್ದಾರೆ.
ಗುರುವಾರ ನಡೆದ 100 ಇನ್ ಟು 400 ಮೀ. ಫ್ರೀಸ್ಟೈಲ್ ರಿಲೆ ಚಿನ್ನ ಸೇರಿದಂತೆ ವೈಯಕ್ತಿಕ ಮಿಡ್ಲೆ, ಬ್ಯಾಕ್ಸ್ಟ್ರೋಕ್, 100 ಮೀ. ಫ್ರೀಸ್ಟೈಲ್ಗಳಲ್ಲಿ ಒಟ್ಟು 4 ಚಿನ್ನಗಳನ್ನು ಮೋಹಿತೆ ಗೆದ್ದರು. ಈಜು ಸ್ಪರ್ಧೆಗಳಲ್ಲಿ 190 ಅಂಕ ಗಳಿಸಿದ ಬೆಂಗಳೂರು ನಗರಕ್ಕೆ ಸಮಗ್ರ ಪ್ರಶಸ್ತಿ ಸಿಕ್ಕಿತು.
ಗುರುವಾರ ಮುಗಿದ ದಸರಾ ಕ್ರೀಡಾ ಕೂಟದಲ್ಲಿ ಒಟ್ಟು 66 ಅಂಕ ಗಳಿಸಿದ ಮೈಸೂರು ಸಮಗ್ರ ಪ್ರಶಸ್ತಿ ಗಳಿಸಿತು. ತಲಾ 54 ಅಂಕ ಗಳಿಸಿದ ಬೆಳಗಾವಿ ಮತ್ತು ಬೆಂಗಳೂರು ನಗರ 2ನೇ ಸ್ಥಾನ ಹಂಚಿಕೊಂಡವು. ಹೈಜಂಪ್ನಲ್ಲಿ ವೈಯಕ್ತಿಕ ದಾಖಲೆ ಸ್ಥಾಪಿಸಿದ ಮೈಸೂರು ವಿಭಾಗದ ಸಹನಾ ಕುಮಾರಿ ಹಾಗೂ ಲಾಂಗ್ಜಂಪ್ ದಾಖಲೆ ಸ್ಥಾಪಿಸಿದ ಬೆಂಗಳೂರಿನ ಶಿಲ್ಪಾ ಸಿಕ್ವೆರಾ ದಸರಾ ಕ್ರೀಡಾ ರತ್ನ ಪ್ರಶಸ್ತಿ ಗಳಿಸಿದರು.
ಪುರುಷರ ವಿಭಾಗದಲ್ಲಿ ಗುಲ್ಬರ್ಗಾದ ಪ್ರಕಾಶ ಶಂಕ್ರಪ್ಪ ಕಟಗಿ ಹಾಗೂ ಮೈಸೂರಿನ ಮಹೇಶ್ ಶೆಟ್ಟಿ ವೈಯಕ್ತಿಕ ಪ್ರಶಸ್ತಿ ಹಂಚಿಕೊಂಡರು. ಮೊದಲೆರಡು ದಿನ ಮೇಲುಗೈ ಸಾಧಿಸಿದ್ದ ಬೆಂಗಳೂರು ಸ್ಪರ್ಧಿಗಳು, ಕೊನೆಯ ದಿನವಾದ ಗುರುವಾರ ಒಂದೂ ಚಿನ್ನ ಗೆಲ್ಲಲಿಲ್ಲ. ಬೆಂಗಳೂರು ಗ್ರಾಮಾಂತರದ ಮಹ್ಮದ್ ರಫೀಕ್ ಮಾತ್ರ 100 ಮೀ. ಓಟದಲ್ಲಿ ಚಿನ್ನ ಗಳಿಸಿದರು. ಗುರುವಾರ ನಡೆದ ಕ್ರೀಡೆಗಳ ಒಟ್ಟು 11 ಚಿನ್ನಗಳಲ್ಲಿ 7ನ್ನು ಮೈಸೂರು ಗಳಿಸಿದರೆ, 3 ಬೆಳಗಾವಿ ಪಾಲಾಯಿತು.
(ಮೈಸೂರು ಪ್ರತಿನಿಧಿಯಿಂದ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications