ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಫ್ರಿ ಬಾಯ್ಕಾಟ್‌ ಹೋಂ ಪಿಚ್‌ನಲ್ಲಿ ಬೆತ್ತಲೆ ಕ್ರಿಕೆಟ್‌!ಇದು ಯಾರ್ಕ್‌ಷೈರ್‌ನ ಹೊಸ ಕ್ರಿಕೆಟ್‌ ಸಂಪ್ರದಾಯವೇ?

By Staff
|
Google Oneindia Kannada News

ಲಂಡನ್‌ : ಮ್ಯಾಚ್‌ಫಿಕ್ಸಿಂಗ್‌ ನಡೆಸಿದ ಹಾಗೂ ಗೆಳತಿಯರನ್ನು ರೂಮಿಗೆ ಕರೆದೊಯ್ದು ಸಿಕ್ಕಿಬಿದ್ದ ಆಟಗಾರರ ಸುದ್ದಿಗಳು ಹಸುರಾಗಿರುವಾಗಲೇ ಸ್ಥಳೀಯ ಕ್ರಿಕೆಟ್‌ ಕ್ಲಬ್ಬೊಂದರಲ್ಲಿ ಬೆತ್ತಲೆ ಕ್ರಿಕೆಟ್‌ ನಡೆದ ಸುದ್ದಿ ಹೊರ ಬಿದ್ದಿದೆ.

ಜೆಫ್ರಿ ಬಾಯ್ಕಾಟ್‌ ಬೆಳಕಿಗೆ ಬಂದ ಯಾರ್ಕ್‌ಷೈರ್‌ನ ಬೆನ್‌ ರಿಡ್ಡಿಂಗ್‌ ಕ್ರಿಕೆಟ್‌ ಕ್ಲಬ್‌ನಲ್ಲಿ ಇತ್ತೀಚೆಗೆ ರಾತ್ರೋರಾತ್ರಿ ಕಾರಿನ ಬೆಳಕಿನಲ್ಲಿ ಕೆಲ ಕ್ರಿಕೆಟಿಗರು ನಿರ್ವಾಣರಾಗಿ ಕ್ರಿಕೆಟ್‌ ಆಡುತ್ತಿದ್ದರು. ಪಕ್ಕದಲ್ಲೇ ಇದ್ದ ಮನೆಯ ಒಬ್ಬಾಕೆಗೆ ಇದು ಮುಜುಗರ ತಂದಿದೆ. ಪೊಲೀಸರಿಗೆ ಫೋನಾಯಿಸಿದ್ದಾಳೆ. ಪೊಲೀಸರು ಬಂದು ಇವರನ್ನು ಬಟ್ಟೆ ಹಾಕಿಕೊಳ್ಳುವಂತೆ ಬಲವಂತ ಮಾಡಿ, ಬುದ್ಧಿಹೇಳಿ ಹೋಗಿದ್ದಾರೆ.

‘ಪೊಲೀಸರು ಬಂದಾಗ ಕ್ರಿಕೆಟಿಗರು ಹೊರಡಲನುವಾಗುತ್ತಿದ್ದರು. ಅವರು ಸುಮ್ಮನೆ ಬುದ್ಧಿ ಹೇಳಿದರೇ ವಿನಃ ಬೇರಾವುದೇ ಶಿಸ್ತಿನ ಕ್ರಮ ಕೈಗೊಳ್ಳಲಿಲ್ಲ ’ ಎಂದು ದೂರು ಕೊಟ್ಟಾಕೆ ಐಎಎನ್‌ಎಸ್‌ಗೆ ಹೇಳಿದ್ದಾರೆ. ಕ್ಲಬ್‌ನ ನಾಯಕ ಆ್ಯಂಡ್ರೂ ಜೆನ್ನಿಂಗ್ಸ್‌ , ‘ಆಟ ಅಂದರೆ ಅದಪ್ಪ. ಒಂದು ಗಂಟೆ ಕಾಲ ಜನರಿಗೆ ಮನರಂಜನೆಯೋ ಮನರಂಜನೆ’ ಎಂದು ಸ್ವಲ್ಪವೂ ಸಂಕೋಚವಿಲ್ಲದೆ ಸ್ಥಳೀಯ ಪತ್ರಿಕೆಗೆ ಹೇಳಿಕೆ ಕೊಟ್ಟಿದ್ದಾರೆ.

ಯಾರ್ಕ್‌ಷೈರ್‌ನಲ್ಲಿ ಬೆತ್ತಲೆ ಕ್ರಿಕೆಟ್‌ ಒಂದು ಸಂಪ್ರದಾಯವಾಗುತ್ತಿದೆ ಎಂದೂ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಎರಡು ತಿಂಗಳ ಹಿಂದೆ ಇದೇ ರೀತಿ ಹುಣ್ಣಿಮೆ ದಿನ ಬೆತ್ತಲೆ ಕ್ರಿಕೆಟ್‌ ನಡೆದ ವರದಿಯಾಗಿತ್ತು. ಆಟದ ಜೊತೆಗೆ ಓಡಾಡುವ ಗೊಮ್ಮಟರನ್ನು ಕಂಡು ಎಷ್ಟೋ ಜನ ಮಜಾ ಅನುಭವಿಸಿದ್ದಾರೆ. ಅದಕ್ಕಿಂತ ಹೆಚ್ಚು ಜನ ಈ ಅಸಭ್ಯ ಕ್ರಿಕೆಟಿಗರಿಗೆ ಶಾಪ ಹಾಕುತ್ತಲೂ ಇದ್ದಾರೆ. ಆದರೆ ಪೊಲೀಸರು ಮಾತ್ರ ಯಾವುದಕ್ಕೂ ಕಿವಿಗೊಡುತ್ತಿಲ್ಲ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X