Get Updates
Get notified of breaking news, exclusive insights, and must-see stories!

ವಚನದ ಅಂಕಿತ ಬದಲಾವಣೆ : ಬೀದರ್‌ ಬಸವದಳ ಇಬ್ಭಾಗಸರ್ವತಂತ್ರ ಸ್ವತಂತ್ರ ರಾಷ್ಟ್ರೀಯ ಬಸವ ದಳ ಅಸ್ತಿತ್ವಕ್ಕೆ

ಬೀದರ್‌: ಮಾತೆ ಮಾಹಾದೇವಿ ಅವರು ವಚನದಲ್ಲಿನ ಅಂಕಿತ ಬದಲಾಯಿಸಿದ ವಿಚಾರವಾಗಿ ಎದ್ದ ಭಿನ್ನಾಭಿಪ್ರಾಯ ಬಸವದಳ ಇಬ್ಭಾಗವಾಗುವಲ್ಲಿ ಪರ್ಯವಸಾನಗೊಂಡಿದೆ.

ಇತ್ತೀಚೆಗೆ ಇಲ್ಲಿನ ಬಸವ ಮಂಟಪದಲ್ಲಿ ನಡೆದ ಸಭೆಯಲ್ಲಿ ಸ್ವತಂತ್ರ ರಾಷ್ಟ್ರೀಯ ಬಸವದಳ ಅಸ್ತಿತ್ವಕ್ಕೆ ಬಂದಿದೆ. ಹೊಸ ಗುಂಪಿಗೆ ಬಸವಕುಮಾರಪಾಟೀಲ ಅಧ್ಯಕ್ಷರಾಗಿದ್ದಾರೆ. ಮಾತೆ ಮಹಾದೇವಿ ಅವರು ವಚನಗಳ ಅಂಕಿತವನ್ನು ಬದಲಾಯಿಸಿದ್ದರಿಂದ ಸಂಘಟನೆಯ ನೈತಿಕ ಬಲ ಕುಸಿಯಿತು. ಈ ಸಂಬಂಧ ಸಂಘಟನೆಯ ಕಾರ್ಯಕರ್ತರ ಮನವಿಗೆ ಮಹಾದೇವಿ ಅವರು ಬೆಲೆ ಕೊಡದೆ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಆದ ವಿಚಾರಬೇಧ ಇಬ್ಭಾಗಕ್ಕೆ ಕಾರಣವಾಯಿತೆಂದು ಹೊಸ ಅಧ್ಯಕ್ಷರು ತಿಳಿಸಿದ್ದಾರೆ.

ಪದಾಧಿಕಾರಿಗಳ ನೇಮಕ : ಸ್ವತಂತ್ರವಾಗಿ ಅಸ್ಥಿತ್ವಕ್ಕೆ ಬಂದಿರುವ ಘಟಕದ ಗೌರವ ಅಧ್ಯಕ್ಷರಾಗಿ ವಿಶ್ವನಾಥ ಕಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಹಾಲಪ್ಪಗೋಳ, ಖಜಾಂಚಿಯಾಗಿ ರಾಜೇಂದ್ರಜೊನ್ನಿಕೇರಿ ಆಯ್ಕೆಯಾಗಿದ್ದಾರೆ.

ಈ ಮಧ್ಯೆ ಬಸವ ಮಂಟಪದಲ್ಲಿ ನಡೆದ ಸಭೆಯಲ್ಲಿ , ರಾಷ್ಟ್ರೀಯ ಬಸವದಳದ ಅಧ್ಯಕ್ಷ ಸ್ಥಾನದಿಂದ ಬಸವಕುಮಾರ ಪಾಟೀಲ ಅವರನ್ನು ಉಚ್ಚಾಟಿಸಲಾಗಿದ್ದು, ಹೊಸ ಅಧ್ಯಕ್ಷರನ್ನಾಗಿ ಕಲ್ಯಾಣರಾವ್‌ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ಕುಶಾಲರಾವ್‌ ಪಾಟೀಲ ಅವರನ್ನು ನೇಮಿಸಲಾಗಿದೆ ಎಂದು ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+