ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ನ ಪಟಾಕಿ ಘಟಕದಲ್ಲಿ ಸ್ಫೋಟ

By Staff
|
Google Oneindia Kannada News

ಬೀದರ್‌: ಇಲ್ಲಿನ ಗೋಲಖಾನದ ಬಾರೂದಗಲ್ಲಿಯ ಮನೆಯಲ್ಲಿನ ಪಟಾಕಿ ತಯಾರಿಸುತ್ತಿದ್ದ ಘಟಕ ಸ್ಫೋಟಿಸಿದ ಪರಿಣಾಮ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ತಾಹೀರಬಿ ದಸ್ತಗೀರ (45) ಮತ್ತು ಆಕೆಯ ಮಕ್ಕಳು ಸುಲ್ತಾನ (16) , ಅಲೀಮಾ (12) ಹಾಗೂ ಹಸೀನಾಬಿ (10) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೀದರ್‌ನ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಮನೆಯ ಪಕ್ಕದ ಕೋಣೆಯನ್ನು ಬಾಡಿಗೆಗೆ ಪಡೆದು ಖುರ್ಷಿದ್‌ಮಿಯ್ಯಾ ದೀಪಾವಳಿಗೆ ಪಟಾಕಿ ತಯಾರಿಸುವುದರಲ್ಲಿ ಮಗ್ನರಾಗಿದ್ದರು. ಅಕಸ್ಮಿಕವಾಗಿ ಸಂಭವಿಸಿದ ಸ್ಫೋಟದಿಂದಾಗಿ ಮನೆಯ ಸಿಮೆಂಟಿನ ತಗಡು ಪುಡಿಯಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X