ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರತ್ಕಲ್‌ ಬಳಿ ರೈಲು ಅಪಘಾತ : ಕೊಂಕಣ ರೈಲು ಸಂಚಾರ ಸ್ಥಗಿತ

By Staff
|
Google Oneindia Kannada News

ಮಂಗಳೂರು : ದೆಹಲಿಯಿಂದ ಎರ್ನಾಕುಲಂಗೆ ತೆರಳುತ್ತಿದ್ದ ಮಂಗಳಾ ಲಕ್ಷದ್ವೀಪ ಎಕ್ಸ್‌ ಪ್ರೆಸ್‌ ರೈಲು ಸೋಮವಾರ ನಸುಕಿನ ವೇಳೆ ಸುಮಾರು 2.30ಕ್ಕೆ ಸುರತ್ಕಲ್‌ ಸಮೀಪ ಅಪಘಾತಕ್ಕೀಡಾಗಿದ್ದು, ನಾಲ್ಕು ಮಂದಿ ಪ್ರಯಾಣಿಕರು ಗಾಯಗೊಂಡಿ-ದ್ದಾ--ರೆ.

ರೈಲಿನಲ್ಲಿ -ದ್ದ ಎಲ್ಲಾ 600 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರತ್ಕಲ್‌ಗೆ 2 ಕಿ. ಮೀ. ದೂರದ ಕುಳಾಯಿ ಬಳಿ ಎರಡು ಗುಡ್ಡಗಳ ನಡುವೆ, ಹಳಿಗಳ ಮೇಲೆ ಉರುಳಿಬಿದ್ದ ಬಂಡೆಗೆ ಡಿಕ್ಕಿ ಹೊಡೆದ ಪರಿ-ಣಾ-ಮ-ವಾ-ಗಿ ರೈಲು ಇಂಜಿನ್‌ ಸೇರಿ ಐದು ಬೋಗಿಗಳು ಹಳಿ ತಪ್ಪಿವೆ. ಈ ಅವಘಡದಲ್ಲಿ ಅಂದಾಜು 4 ಲಕ್ಷ ರೂಪಾಯಿ ಹಾನಿಯುಂಟಾಗಿದೆ. ರೊನಾಲ್ಡ್‌, ವಿಜೇತಾ, ವೈ. ಎನ್‌. ಜಾಯ್‌, ಸಿ. ಕೆ. ಬಾಬು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೈಲು ಸಂಚಾರ ಸ್ಥಗಿತ : ರೈಲು ಹಳಿ ತಪ್ಪಿರುವುದರಿಂದ ಕೊಂಕಣ ರೈಲು ಮಾರ್ಗದ ಎಲ್ಲ ರೈಲುಗಳ ಓಡಾಟ ರದ್ದಾಗಿದೆ. ಹಳಿಯನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ರೈಲಿನಲ್ಲಿದ್ದ ಇತರ ಪ್ರಯಾಣಿಕರನ್ನು ಬಸ್ಸುಗ-ಳ ಮೂಲಕ ಅವರವರ ಸ್ಥಳಗಳಿಗೆ ಕಳಿ-ಸಲಾಗಿದೆ.

ಕೊಂಕಣ ರೈಲ್ವೇ ರೀಜನಲ್‌ ಮ್ಯಾನೇಜರ್‌ ಎ.ಸಿ. ಬಾಲಕೃಷ್ಣನ್‌, ಮಂಗಳೂರು ಕೆ.ಎಸ್‌.ಆರ್‌. ಟಿ.ಸಿ ವಿಭಾಗೀಯ ನಿಯಂತ್ರಕ ಡಿ. ವೆಂಕಟೇಶ್‌ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬಸ್‌ ದರ ಏರಿಕೆ : ಡೀಸೆಲ್‌ ದರ ಏರಿರುವ ಬೆನ್ನಲ್ಲಿಯೇ ಖಾಸಗಿ ಬಸ್ಸುಗಳ ಪ್ರಯಾಣದರವೂ ಏರಿಕೆಯಾಗಿದ್ದು ಅಕ್ಟೋಬರ್‌ 5 ರಿಂದ ಇದು ಜಾರಿಗೆ ಬ-ರ-ಲಿದೆ. ಬೆಂಗಳೂರಿನಲ್ಲಿ ನಡೆದ ಖಾಸಗಿ ಬಸ್ಸು ಮಾಲಕರ ಸಭೆಯಲ್ಲಿ ಬಸ್ಸು ಪ್ರಯಾಣ ದರವನ್ನು ಶೇಕಡಾ 20ರಷ್ಟು ಏರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಬಸ್ಸು ಮಾಲಕರ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಮಂಗಳೂರಿನಲ್ಲಿ ಹೇಳಿದ್ದಾರೆ.

(ಮಂಗಳೂರು ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X