Get Updates
Get notified of breaking news, exclusive insights, and must-see stories!

ಕರ್ನಾಟಕ- ಮಹಾರಾಷ್ಟ್ರವನ್ನು ಸಂಪರ್ಕಿಸಲಿರುವ ಸೇತುವೆಗೆ ಕೆ-ಸ-ರು- ಕ-ಲ್ಲು

ಬಸವ ಕಲ್ಯಾಣ : ಮಹಾರಾಷ್ಟ್ರದ ಸಾಲೆಗೋವ್‌- ಔರಾದ್‌ ಮತ್ತು ಕರ್ನಾಟಕದ ವನ್ಜಾಲಖೇಡ್‌ ನಡುವೆ ಸಂಪರ್ಕ ಕಲ್ಪಿಸಲಿರುವ ಸೇತುವೆಯಾಂದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ ರಾವ್‌ ದೇಶ್‌ಮುಖ್‌ ಭಾನುವಾರ ಕೆಸರು ಕಲ್ಲು ಹಾಕಿದರು.

ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಈ ಪ್ರದೇಶದ ಜನರ ಬಹಳ ಕಾಲದ ಬೇಡಿಕೆಯಾಗಿರುವ ಈ ಸೇತುವೆಯ ಕಾಮಗಾರಿ ಇನ್ನೆರಡು ವರ್ಷಗಳಲ್ಲಿ ಮುಗಿಯುವ ಭರವಸೆಯಿತ್ತರು. 80 ಲಕ್ಷ ರೂಪಾಯಿ ವೆಚ್ಚದಲ್ಲ ನಿರ್ಮಾಣವಾಗಲಿರುವ ಈ ಸೇತುವೆಯಿಂದಾಗಿ ಎರಡು ರಾಜ್ಯಗಳ ಗಡಿ ಪ್ರದೇಶದ ಜನರ ನಡುವಿನ ವ್ಯವಹಾರ ಹಾಗೂ ಬಾಂಧವ್ಯ ಉತ್ತಮವಾಗಲಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕೋಪಯೋಗಿ ಸಚಿವ ಧರಂ ಸಿಂಗ್‌ ಹೇಳಿದರು.

ವನ್ಜಾಲಖೇಡ್‌ ಗ್ರಾಮವು ಬೀದರ್‌ ಜಿಲ್ಲೆಯ ಭಾಲ್ಕಿ ಗ್ರಾಮದಲ್ಲಿದ್ದು , ಮಹಾರಾಷ್ಟ್ರ ಗಡಿಯ ಪಕ್ಕದಲ್ಲಿದೆ. ಈ ಗ್ರಾಮದ ಬಳಿಯೇ ಮಂಜ್ರಾ ನದಿ ಹರಿಯುತ್ತಿದ್ದು , ಪ್ರವಾಹದ ಸಮಯದಲ್ಲಿ ನಗರದ ಸಂಪರ್ಕ ಕಳೆದುಕೊಳ್ಳುತ್ತದೆ. ಸೇತುವೆ ನಿರ್ಮಾಣದಿಂದಾಗಿ ಈ ಸಮಸ್ಯೆಗೆ ಪರಿಹಾರ ದೊರಕಲಿದೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+