ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ-ಲ್ಲಿ ಭಾರೀ ಮಳೆ, ಕಟ್ಟಡ ಕುಸಿದು ಇಬ್ಬರ ಸಾವು

By Staff
|
Google Oneindia Kannada News

ಬೆಂಗಳೂರು : ಶನಿವಾರ ಮಧ್ಯಾಹ್ನದಿಂದ ನಗರದಲ್ಲಿ ಒಂದೇ ಸಮನೆ ಸುರಿದ ಕುಂಭದ್ರೋಣ ಮಳೆಯಿಂದ ಎನ್‌.ಆರ್‌.ರಸ್ತೆಯ ವಾಣಿಜ್ಯ ಮಳಿಗೆಯಾಂದು ಕುಸಿದುಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ಪುರಭವನದ ಸಮೀಪ ಇರುವ ಆಂಧ್ರಬ್ಯಾಂಕ್‌ ಪಕ್ಕದ ಎನ್‌.ಆರ್‌. ಸಂಕೀರ್ಣದ ಹಳೆಯ ಮಳಿಗೆಯಾಂದು ಸಂಜೆ 6 ಗಂಟೆಯ ಸುಮಾರಿನಲ್ಲಿ ಕುಸಿದು ಬಿತ್ತು. ಅದೇ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ಸೈಕಲ್‌ ಹಿಡಿದುಕೊಂಡು ನಿಂತಿದ್ದ 17 ವರ್ಷದ ಹುಡುಗನೊಬ್ಬನ ಮೇಲೆ ವಿದ್ಯುತ್‌ ತಂತಿ ಬಿತ್ತು. ವಿದ್ಯುತ್‌ ಶಾಕ್‌ನಿಂದಾಗಿ ಹುಡುಗ ಸ್ಥಳದಲ್ಲೇ ಮೃತನಾದ. ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಈವರೆಗೂ ಬಾಲಕನ ಕಡೆಯವರಾರೂ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ಸ್ವಲ್ಪ ಹ್ತೊತಿನಲ್ಲೇ ಅಗ್ನಿ ಶಾಮಕ ದಳದವರು ಜೆಬಿಸಿ ಯಂತ್ರಗಳ ಸಮೇತ ಸ್ಥಳಕ್ಕೆ ಧಾವಿಸಿದರು. ಧೋ ಎಂದು ಸುರಿಯುತ್ತಿದ್ದ ಮಳೆಯ ನಡುವೆಯೇ ಕಟ್ಟಡದ ಅವಶೇಷಗಳನ್ನು ಹೊರ ತೆಗೆದು, ಸಿಕ್ಕಿಬಿದ್ದವರನ್ನು ರಕ್ಷಿಸಲು ಯತ್ನಿಸಿದರು. ಅವಶೇಷಗಳಡಿ ಸಿಕ್ಕಿದ್ದ 40 ವರ್ಷದ ರಂಗಪ್ಪ ಎಂಬ ಕಡಲೇಕಾಯಿ ವ್ಯಾಪಾರಿಯ ಶವವನ್ನೂ ಹೊರತೆಗೆದರು.

ಸಿಜಿಎ ಎಂಟರ್‌ಪ್ರೆೃಸಸ್‌ ಎಂಬ ಬೋರ್ಡಿದ್ದ ಈ ಕಟ್ಟಡದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ನಗರ ಪೊಲೀಸ್‌ ಆಯುಕ್ತ ಟಿ.ಮಡಿಯಾಳ್‌ ಹಾಗೂ ಜಂಟಿ ಪೊಲೀಸ್‌ ಆಯುಕ್ತ ಬಿ.ಎನ್‌.ನಾಗರಾಜ್‌ ಸ್ಥಳಕ್ಕೆ ಭೇಟಿ ನೀಡಿ, ಅಗ್ನಿ ಶಾಮಕ ದಳದವರ ಕಾರ್ಯವನ್ನು ವೀಕ್ಷಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X