Get Updates
Get notified of breaking news, exclusive insights, and must-see stories!

ಪಾರ್ವತಮ್ಮ ರೇಡಿಯೋದಲ್ಲಿ ಅತ್ತಿದ್ದನ್ನು ಕೇಳಿ ತಡೆಯಲಾರದೆ ಓಡಿ ಬಂದೆ

ಬೆಂಗಳೂರು : ‘ಪಾರ್ವತಕ್ಕ ರೇಡಿಯೋದಲ್ಲಿ ಅತ್ತಿದ್ದನ್ನು ಕೇಳಿ ತಡೆಯಲಾರದೆ ಓಡಿ ಬಂದೆ. ನಾನು ಕಾಡಿನಿಂದ ಓಡಿ ಬಂದಿರುವುದರಿಂದ ರಾಜ್‌ಕುಮಾರ್‌ ಅವರಿಗೆ ಏನೂ ತೊಂದರೆ ಆಗುವುದಿಲ್ಲ. ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾನೆ. ಮಾರನ್‌ ಎಂಬ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ ’ ಎಂದು ವೀರಪ್ಪನ್‌ ಅಡಗುದಾಣದಿಂದ ತಪ್ಪಿಸಿಕೊಂಡು ಬಂದಿರುವ ನಾಗಪ್ಪ ಶುಕ್ರವಾರ ಬೆಳಿಗ್ಗೆ ಪತ್ರಕರ್ತರಿಗೆ ಹೇಳಿದ್ದಾರೆ.

ಗುರುವಾರ ರಾತ್ರಿ ನಾಗಪ್ಪ ಅವರನ್ನು ಚಾಮರಾಜ ನಗರದ ಪೊಲೀಸರ ವಶದಲ್ಲಿಡಲಾಗಿತ್ತು. ನಾಗಪ್ಪರೊಂದಿಗೆ ಮಾತನಾಡಬೇಕೆಂದು ಪತ್ರಕರ್ತರು ಶುಕ್ರವಾರದಂದು ಬೆಳಿಗ್ಗೆ ಠಾಣೆಯ ಹೊರಗೆ ಜಮಾಯಿಸಿದ್ದರು. ನೆರೆದಿದ್ದ ಪತ್ರಕರ್ತರ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ನಂತರ ಅವರ ಒತ್ತಾಯದ ಮೇರೆಗೆ , ನಾಗಪ್ಪ ಅವರಿಗೆ ಪತ್ರಕರ್ತರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಲಾಯಿತು. ರಾಜ್‌ಕುಮಾರ್‌ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ ನಾಗಪ್ಪ ಅವರು ಕಾಡಿನಲ್ಲಿ ಸುಮಾರು 150 ಕಿ.ಮೀ. ಗೂ ಹೆಚ್ಚು ದೂರ ಅಲೆದಾಡಿದ್ದೇನೆ ಎಂದು ಹೇಳಿದ್ದಾರೆ.

ಇಂದು ಮಧ್ಯಾಹ್ನ ನಾಗಪ್ಪ, ಮುಖ್ಯಮಂತ್ರಿ ಭೇಟಿ : ಶುಕ್ರವಾರದಂದು ಚಾಮರಾಜ ನಗರದ ಪೊಲೀಸ್‌ ಅಧೀಕ್ಷಕ ಅಣ್ಣೆ ಗೌಡರ ಜೊತೆಗೆ ನಾಗಪ್ಪ ಅವರು ಬೆಂಗಳೂರು ತಲುಪಲಿದ್ದಾರೆ. ಬೆಂಗಳೂರಿನಲ್ಲಿ ನಾಗಪ್ಪ , ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಭೇಟಿಯಾಗಲಿದ್ದಾರೆ. ನಾಗಪ್ಪರೊಂದಿಗೆ ಮಾತನಾಡಿದ ನಂತರ ಎಸ್‌. ಎಂ. ಕೃಷ್ಣ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಲಿದ್ದು, ಮುಂದಿನ ಕಾರ್ಯವಿಧಾನಗಳ ಕುರಿತು ವಿವರಿಸಲಿರುವುದಾಗಿ ವರದಿಯಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+