Get Updates
Get notified of breaking news, exclusive insights, and must-see stories!

ನಗರದ ನಲ್ಲಿಗಳಲ್ಲಿ ಇಂಪೋರ್ಟೆಡ್‌ ಕಾರ್ಪೊರೇಟ್‌ಗಳ ನೀರು!

ಬೆಂಗಳೂರು : ಫ್ರಾನ್ಸ್‌ನ -ಕಾ-ರ್ಪೊ-ರೇ-ಟ್‌ ದಿಗ್ಗಜಗಳಾದ ಸೂಯೆಜ್‌ ಲಿಯಾನ್ನೇಯ್ಸ್‌ ಡೆಸ್‌ ಈಕ್ಸ್‌ ಮತ್ತು ವಿವೆಂಡಿ ವಾಟರ್‌ ಜೊತೆ ಕರ್ನಾಟಕ ಸರ್ಕಾರ ಶುಕ್ರವಾರ ಪ್ರಮುಖ ನೀರು ಪೂರೈಕೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ.

ಒಡಂಬಡಿಕೆಯನ್ವಯ ಎರಡೂ ಕಂಪನಿಗಳು ಒಂದೊಂದು ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದು, ಇನ್ನು 5 ವರ್ಷಗಳಲ್ಲಿ ಬೆಂಗಳೂರಿನ 20 ಲಕ್ಷ ಜನರಿಗೆ ಉತ್ತಮ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲಿವೆ. ಈ ಯೋಜನೆಗಳು ಪೂರ್ಣವಾದ ನಂತರ ನಗರದಲ್ಲಿ ಹಮ್ಮಿಕೊಳ್ಳಬಹುದಾದ ದೀರ್ಘಾವಧಿ ಯೋಜನೆಗಳ ಪ್ರಸ್ತಾವನೆಗಳನ್ನು ಕಂಪನಿಗಳು ಸರ್ಕಾರಕ್ಕೆ ಸಲ್ಲಿಸಲಿವೆ. ಈ ಯೋಜನೆಯಿಂದ ಬೆಂಗಳೂರಿನ ಜನ ಹಾಗೂ ಉದ್ದಿಮೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ.

ಸೂಯೆಜ್‌ ಲಿಯಾನ್ನೇಯ್ಸ್‌ ಡೆಸ್‌ ಈಕ್ಸ್‌ ಮತ್ತು ವಿವೆಂಡಿ ವಾಟರ್‌ ಕಂಪನಿಗಳು ಮೂಲಭೂತ ಸೌಕರ್ಯಗಳ ಸೇವೆಯಲ್ಲಿ ಜಗತ್ತಿನಲ್ಲೇ ಹೆಸರುವಾಸಿ. 100 ದೇಶಗಳು ಈ ಕಂಪನಿಗಳ ಸೇವೆ ಪಡೆಯ್ತುತಿವೆ. ಈ ಕಂಪನಿಗಳ ವರಮಾನ 800 ಕೋಟಿ ಅಮೆರಿಕ ಡಾಲರ್‌ಗಳಿಗೂ ಹೆಚ್ಚು. 210 ದಶಲಕ್ಷ ಜನ ಈ ಕಂಪನಿಗಳ ಸೇವೆ ಪಡೆದಿದ್ದಾರೆ.

ವಿವೆಂಡಿ ವಾಟರ್‌ ಕಂಪನಿಯ ಇಂಗ್ಲೆಂಡ್‌ ಮತ್ತು ದಕ್ಷಿಣ ಏಷ್ಯಾ ನಿರ್ದೇಶಕ ಜೀನ್‌ ಕ್ಲಾಡ್‌ ಬ್ಯಾನನ್‌ ಹೀಗೆಂದರು- ಬೆಂಗಳೂರಿನಂಥ ಸಿಲಿಕಾನ್‌ ನಗರಿಯಲ್ಲಿ ನೀರುಪೂರೈಕೆಗೆ ಸಾಕಷ್ಟು ಒತ್ತು ನೀಡಬೇಕು. ನೀರುಪೂರೈಕೆ ಕಾರ್ಯದಲ್ಲಿ ವೃತ್ತಿಪರತೆ ಬಹಳ ಮುಖ್ಯ. ನೀರನ್ನು ಪೋಲಾಗದಂತೆ ನೋಡಿಕೊಂಡು, ಯಾವುದೇ ಕಾರಣಕ್ಕೂ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ.

ಬಿಲ್ಲು ? :ನಮ್ಮೂರ ನಲ್ಲಿಗಳಲ್ಲಿ ಫಾರಿನ್‌ ಕಂಪನಿಗಳು ನೀರು ಹರಿಸಲು ಮುಂದೆ ಬಂದಿರುವುದರಿಂದ ವಾಟರ್‌ ಬಿಲ್ಲಿನಲ್ಲಿ ಇನ್ನಷ್ಟು ಏರಿಕೆ ಆಗುವುದಿಲ್ಲವಷ್ಟೆ ಎಂದು ಈ ಸುದ್ದಿ ಕೇಳಿದ ಬೆಂಗಳೂರಿಗ ಪ್ರಶ್ನಿಸುತ್ತಿದ್ದಾನೆ. ಇದಕ್ಕೆ ನಮ್ಮ ಸರ್ಕಾರ ಉತ್ತರ ಕೊಡಬೇಕಷ್ಟೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+