Get Updates
Get notified of breaking news, exclusive insights, and must-see stories!

ಹಾಕಿಯಲ್ಲಿ ಭಾರತಕ್ಕೆ 7ನೇ ಸ್ಥಾನ, ಕಳೆದ ಒಲಂಪಿಕ್ಸ್‌ಗಿಂತ ಒಂದು ಸ್ಥಾನ ಬಡ್ತಿ

ಸಿಡ್ನಿ : ಒಲಂಪಿಕ್ಸ್‌ ಹಾಕಿ ಪಂದ್ಯದಲ್ಲಿ ಶುಕ್ರವಾರ ಅರ್ಜೆಂಟಿನಾ ವಿರುದ್ಧ 3-1ರಲ್ಲಿ ಭಾರತ ಗೆದ್ದು 7ನೇ ಸ್ಥಾನ ಪಡೆಯಿತು.

ಏಳನೇ ಸ್ಥಾನಕ್ಕಾಗಿ ಭಾರತ- ಅರ್ಜೆಂಟಿನಾ ನಡುವೆ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಗೆಲವು ತನ್ನದಾಗಿಸಿಕೊಂಡಿತು. ಮೊದಲಾರ್ಧ ಮುಗಿಯುವ 5 ನಿಮಿಷ ಮುನ್ನ ದೀಪಕ್‌ ಠಾಕುರ್‌ ಚೆಂಡನ್ನು ಗೋಲು ಮುಟ್ಟಿಸುವಲ್ಲಿ ಯಶಸ್ವಿಯಾದರು (ಮೊದಲಾರ್ಧದಲ್ಲಿ ಭಾರತ 1-0ಯಿಂದ ಮುಂದು). ಪಂದ್ಯದ 48ನೇ ನಿಮಿಷದಲ್ಲಿ ಬಲ್‌ಜಿತ್‌ ಮಾಡಿದ ಪಾಸನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದ ಸುಖ್‌ಬೀರ್‌ ಸಿಂಗ್‌ ಭಾರತಕ್ಕೆ 2-0 ಮುನ್ನಡೆ ಗಳಿಸಿಕೊಟ್ಟರು.

ನಂತರ ಅರ್ಜೆಂಟಿನಾ ಒಂದು ಗೋಲು ಗಳಿಸಿತಾದರೂ 63ನೇ ನಿಮಿಷದಲ್ಲಿ ಭಾರತದ ಧನರಾಜ್‌ ಪಿಳ್ಳೈ ಹೊಡೆದ ಗೋಲು ಭಾರತದ ಜಯವನ್ನು ಖಾತ್ರಿ ಪಡಿಸಿತು. ಈ ಗೆಲವು 1996ರ ಅಟ್ಲಾಂಟ ಒಲಂಪಿಕ್ಸ್‌ನಲ್ಲಿ ಪಡೆದಿದ್ದ ಸ್ಥಾನವನ್ನು ಭಾರತ ಉತ್ತಮಪಡಿಸಿಕೊಂಡಂತಾಗಿದೆ (ಅಟ್ಲಾಂಟ ಒಲಂಪಿಕ್ಸ್‌ನಲ್ಲಿ 8ನೇ ಸ್ಥಾನ ಪಡೆದಿತ್ತು). 1992ರ ಬಾರ್ಸಿಲೋನ ಮತ್ತು 1976ರ ಮಾಂಟ್ರಿಯಲ್‌ ಒಲಂಪಿಕ್ಸ್‌ಗಳಲ್ಲೂ ಭಾರತ 7ನೇ ಸ್ಥಾನ ಪಡೆದಿತ್ತು.

ನಮ್ಮ ತಂಡ ಉತ್ತಮವಾಗಿದೆ. ಇನ್ನೂ ಪರಿಶ್ರಮ ಅಗತ್ಯವಷ್ಟೆ . ತಂಡದ ಗೋಲ್‌ ಕೀಪರ್‌ ಜುಡೆ ಮೆಂರಿkುಸ್‌ ಬಹು ದಿನಗಳ ನಂತರ ಟೂರ್ನಿಯುದ್ದಕ್ಕೂ ತಮ್ಮ ಉತ್ತಮ ಆಟ ಕಾಯ್ದುಕೊಂಡಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಿಲಿಪ್‌ ಟಿರ್ಕೆ ಹಾಗೂ ಬಲ್‌ಜಿತ್‌ಸಿಂಗ್‌ ಧಿಲ್ಲಾನ್‌(ತಲಾ 3 ಗೋಲುಗಳು) ತಂಡದ ಭರವಸೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ ಎಂದು ತಂಡದ ಕೋಚ್‌ ಭಾಸ್ಕರನ್‌ ಪ್ರಶ್ನೆಯಾಂದಕ್ಕೆ ಉತ್ತರ ಕೊಟ್ಟರು.

(ಇನ್ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+