Get Updates
Get notified of breaking news, exclusive insights, and must-see stories!

ನಗರದಲ್ಲಿ ನಾಲ್ಕು ದಿನಗಳ ಜನಪದ ಮೇಳ ಆರಂಭ

ಬೆಂಗಳೂರು: ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಜಾನಪದ ತಂಡಗಳಿಗೆ ವೇದಿಕೆಯಾಗಿರುವ ನಾಲ್ಕು ದಿನಗಳ ‘ಕಲಾಮಾಧ್ಯಮ’ ಜಾನಪದ ನೃತ್ಯ ಮೇಳ ಶುಕ್ರವಾರ ನಗರದಲ್ಲಿ ಆರಂಭವಾಗಿದೆ.

ಎಲ್ಲ ವಿಧದ ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲಾಗುವ ಮೊಟ್ಟಮೊದಲ ಸಮಾವೇಶ ಎಂಬ ಹೆಗ್ಗಳಿಕೆ ಪಡೆದಿರುವ ಈ ಸಮಾವೇಶದಲ್ಲಿ ಅಸ್ಸಾಂನ ಬಿಹು, ಧೋಲ್‌, ಬಾದನ್‌ ಮತ್ತು ಜೆಮೂರ್‌, ಕರ್ನಾಟಕದ ಡೊಳ್ಳು ಕುಣಿತ, ಪಶ್ಚಿಮ ಬಂಗಾಳದ ಬೌಲ್‌ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಹೊಸದಿಲ್ಲಿಯ ವಿವಿಧ ಜಾನಪದ ಪ್ರಾಕಾರಗಳ ತಂಡಗಳು ಭಾಗವಹಿಸುತ್ತಿವೆ.

ಸಮಾರಂಭವನ್ನು ದಸ್ತಕರಿ ಹಾತ್‌ ಸಮಿತಿ ಅಧ್ಯಕ್ಷೆ ಹಾಗೂ ಸಮತಾ ಪಕ್ಷದ ಅಧ್ಯಕ್ಷೆ ಜಯಾ ಜೇಟ್ಲಿ ಉದ್ಘಾಟಿಸಿದರು. ಸಮಾರಂಭದಲ್ಲಿ ಮಾತನಾಡಿದ ಅನೇಕ ಭಾಷಣಕಾರರು , ಭಾರತೀಯ ಜಾನಪದ ಕ್ಷೇತ್ರಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಲು ಹಾಗೂ ಈ ಬಗ್ಗೆ ಅರಿವು ಮೂಡಿಸಲು ಜಾನಪದ ಕಲೆಗಳ ರಾಷ್ಟ್ರೀಯ ಆಯೋಗ ರಚಿಸಬೇಕೆಂದು ಒತ್ತಿ ಹೇಳಿದ್ದಾರೆ. ಜಾನಪದ ಕಲಾವಿದರನ್ನು ರಾಜಕಾರಣಿಗಳು ಶೋಷಣೆ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯದ ವಾರ್ತಾ ಮತ್ತು ಪ್ರಚಾರ ಸಚಿವ ಬಿ.ಕೆ . ಚಂದ್ರಶೇಖರ್‌ ಹಾಜರಿದ್ದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+