ಆಸ್ಟ್ರೇಲಿಯಾ ಡಾಕ್ಟರುಗಳು ಭಾರತದ ಆಸ್ಪತ್ರೆಗಳಲ್ಲಿ ಕಾಸು ಹಾಕ್ತಾರಂತೆ
ನವದೆಹಲಿ : ಈವರೆಗೆ ಭಾರತಕ್ಕೆ ಯಾವುದಾದರೂ ವಿದೇಶೀ ಸಂಸ್ಥೆ ಬರುತ್ತದೆಂದರೆ ಐಟಿ ಕ್ಷೇತ್ರದಲ್ಲಿ ಬಂಡವಾಳ ಹೂಡಲು ತಾನೆ ಎಂದು ಜನ ಹಿಂದೂಮುಂದೂ ನೋಡದೆ ಜವಾಬು ಕೇಳುತ್ತಿದ್ದರು. ಈಗ ಇದಕ್ಕೆ ಹೊರತಾದ ಸುದ್ದಿಯಾಂದು ಬಂದಿದೆ. ಆಸ್ಟ್ರೇಲಿಯಾದ ಆರೋಗ್ಯ ಸಂರಕ್ಷಣಾ ಸಂಸ್ಥೆ ಅಕ್ಟೋಬರ್ 1ರಿಂದ 13ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಆರೋಗ್ಯ ಕ್ಷೇತ್ರದಲ್ಲಿ ಎಲ್ಲೆಲ್ಲಿ, ಹೇಗೆ ಹಣಕಾಸು ಹೂಡಬೇಕು ಎಂದು ಪರಿಶೀಲಿಸಲಿದೆ. ಸಂಸ್ಥೆಯ ನಿಯೋಗ ಬೆಂಗಳೂರಿಗೂ ಬರಲಿದೆ.
‘ಭಾರತದ ವೈದ್ಯಕೀಯ ಮಾರುಕಟ್ಟೆಯಲ್ಲಿ ಆಸ್ಟ್ರೇಲಿಯಾ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಪರಿಶೀಲಿಸಿ, ಕ್ಷೇತ್ರದಲ್ಲಿ ಬಂಡವಾಳ ಹೂಡುವುದು ನಮ್ಮ ಗುರಿ’ ಎಂದು ಆಸ್ಟ್ರೇಲಿಯಾ ಆರೋಗ್ಯ ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥ ಕಾರ್ಲ್ ಲಿಸನರ್ಸ್ ಆಸ್ಟ್ರೇಲಿಯಾ ಹೈಕಮಿಷನರ್ ಕಳುಹಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಆರೋಗ್ಯ ಸಮಸ್ಯೆಗಳಿಗೆ ಆಸ್ಟ್ರೇಲಿಯಾದ ಪರಿಹಾರ ತಂತ್ರಗಳನ್ನು ಭಾರತದಲ್ಲಿ ಪ್ರಯೋಗಿಸುವಂತೆ ನಾವು ಹೇಳುವುದಿಲ್ಲ. ಭಾರತದಲ್ಲಿನ ಅಂತರರಾಷ್ಟ್ರೀಯ ಮಟ್ಟದ ವೈದ್ಯಕೀಯ ಸಂಸ್ಥೆಗಳ ಗುಣಮಟ್ಟ ಸುಧಾರಿಸಲು ಬೇಕಾದ ಪಕ್ಕಾ ವ್ಯವಸ್ಥೆ ರೂಢಿಸುವುದು ಮಾತ್ರ ನಮ್ಮ ಉದ್ದೇಶ’ ಎನ್ನುತ್ತಾರೆ ಆಸ್ಟ್ರೇಲಿಯಾದ ಆಸ್ಪತ್ರೆ ವಿನ್ಯಾಸ ಸಮೂಹ (ಎಎಚ್‌ಡಿಜಿ) ದ ರಿಚರ್ಡ್ ಕೆಮರಾನ್. ಭಾರತಕ್ಕೆ ಭೇಟಿ ಕೊಡುವ ನಿಯೋಗದ ಸದಸ್ಯರಲ್ಲಿ ಇವರೂ ಒಬ್ಬರು. ಎಎಚ್‌ಡಿಜಿ ಭಾರತಕ್ಕೆ ಈಗಾಗಲೇ 6 ಬಾರಿ ಭೇಟಿ ಕೊಟ್ಟಿದೆ.
ಆರೋಗ್ಯ ಸಂಸ್ಥೆ ನಿಯೋಗವು ಬೆಂಗಳೂರು, ಚೆನ್ನೈ, ದೆಹಲಿ ಹಾಗೂ ಮುಂಬೈಗೆ ಭೇಟಿ ನೀಡಲಿದ್ದು, ಆಯಾ ಪ್ರದೇಶದ ಆಸ್ಪತ್ರೆಗಳ ಅಗತ್ಯಕ್ಕೆ ತಕ್ಕಂತೆ ಗುಣಮಟ್ಟದ ಅಭಿವೃದ್ಧಿ ಬಗ್ಗೆ ಚಿಂತಿಸಲಿದೆ. ಭಾರತದ ಅಂತರರಾಷ್ಟ್ರೀಯ ಆಸ್ಪತ್ರೆಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ, ವಿದೇಶೀ ಆಸ್ಪತ್ರೆಗಳು ಹಾಗೂ ಆಸ್ಟ್ರೇಲಿಯಾದ ವೈದ್ಯಕೀಯ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರಗಳ ಜೊತೆ ಸಂಪರ್ಕ ಕಲ್ಪಿಸಲಾಗುವುದು ಎಂದು ಕೆಮರಾನ್ ಹೇಳಿದ್ದಾರೆ.
ನಿಮ್ಮ ಗಮನಕ್ಕೆ : ಒಂದಂತೂ ಸ್ಪಷ್ಟ. ಆಸ್ಟ್ರೇಲಿಯಾ ಕಾಸು ಚೆಲ್ಲುವುದು ಹೈಟೆಕ್ ಆಸ್ಪತ್ರೆಗಳ ಮೇಲೆ, ಅದೂ ಕೇವಲ ನಾಲ್ಕು ನಗರಗಳಲ್ಲಿ. ಇದರಿಂದ ಭಾರತೀಯರಿಗೆಷ್ಟು ಲಾಭ ? ಉತ್ತರ ಪ್ರದೇಶದ ಹಲವಾರು ಕುಗ್ರಾಮಗಳು, ಕರ್ನಾಟಕದ ಎಂಕೇಗೌಡನ ಪಾಳ್ಯದಂಥ ಹಳ್ಳಿಗಳಲ್ಲಿ ಈವತ್ತಿಗೂ ಒಬ್ಬೇ ಒಬ್ಬ ಡಾಕ್ಟರು ಇಲ್ಲ. ಹಳ್ಳಿಗಳ ದೇಶದ ಬುಡದಲ್ಲೇ ಹುಳುಕಿದ್ದರೂ ತಲೆಗೆ ಸೋಪು ಹಾಕುವ ಕೆಲಸ ಮುಂದುವರೆದಿದೆ.
(ಐಎಎನ್‌ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications