Get Updates
Get notified of breaking news, exclusive insights, and must-see stories!

ಚು-ಕ್ಕಿ-ಗ-ಳಿ-ಲ್ಲ-ದ ನಾಡಿ-ನಾ-ಗ-ಸ-ದಲ್ಲಿ ದಸ-ರೆ-ಯ ಬೆಳ-ಕು-

ಕಡೂರಿನ ದಾರಿಯಲ್ಲಿ ಬಸ್ಸು ಭರ್ರೋ... ಎಂದು ಹೋಗುತ್ತಿದೆ. ತೆಂಗಿನ ಮರಗಳು ಒದ್ದೆ ಗರಿಗಳಿಂದ ಟಪ ಟಪನೆ ನೀರು ಹನಿಸುತ್ತಿರುವುದನ್ನು ಎವೆಯಿಕ್ಕದೇ ನೋಡುತ್ತಿದ್ದರೆ... ತಟ್ಟನೆ ಅಂಗವಿಕಲ ತೆಂಗಿನ ಮರಗಳ ಸಾಲುಗಳು ಎ-ದು-ರಾ-ಗುತ್ತವೆ. ಶಾಸ್ತ್ರಕ್ಕೆ ನಾಲ್ಕೈದು ತೆಂಗಿನ ಗರಿಗಳನ್ನಿಟ್ಟು ಉಳಿದೆಲ್ಲವನ್ನೂ ಕಡಿದು ಹಾಕಲಾಗಿದೆ. ಹಸಿರು ದ್ರಾಕ್ಷಿ ಚಪ್ಪರದ ಪಕ್ಕದಲ್ಲಿ ಬೋಳು ಬೋಳು ತೆಂಗಿನ ಮರಗಳು. ಅಲ್ಲಿನವರ ಕಾಡಿಸಿ, ಪೀಡಿಸಿ ಅರೆ ಬರೆ ಸುರಿದ ಮಳೆಗೆ ಈ ಸಾಲು ಸಾಲು ಅಂಗ ವಿಕಲ ಮರಗಳೆಂದರೆ ಅದೇ-ನು ಪ್ರೀತಿಯೋ...

ಗುಲ್ಬರ್ಗಾ ಜಿಲ್ಲೆ-ಯಲ್ಲಿ ಅಂದು ಉರಿಬಿಸಿಲಿಗೆ ಶಾಪ ಹಾಕಿದವರೆಲ್ಲಾ ಈಗ ಧುಮುಗುಟ್ಟುತ್ತಾ ಹನಿವ ಮಳೆಯ ಶಪಿಸುತ್ತಿದ್ದಾರೆ. ಅಲ್ಲಿ ಮಳೆಗೆ ಇಬ್ಬರು ಜೀವ ತೆತ್ತಿದ್ದಾರೆ. ಮಳೆ ಹೀಗೆ ಬಂದು, ಬರದೇ ಕಾಡಿಸುವುದು ನಿಂತಿಲ್ಲ . ಕರಾವಳಿಯಲ್ಲಿ ಮಳೆ ಇಲ್ಲದೇ ದಿನಗಳಾಯಿತು ಎಂದು ಗೊಣಗುತ್ತಿದ್ದವರು ಬುಧವಾರ ಸುರಿದ ಹಿತವಾದ ಮಳೆಯಲ್ಲಿ ನೆಂದಿದ್ದಾರೆ. ಜನ ಮಳೆಯಾಂದಿಗೆ ಏಗುವುದು ಹೇಗೆ ಎಂದು ಚಿಂತಿಸುತ್ತಾ, ಗತ್ಯಂತರವಿಲ್ಲದೇ ಏಗುತ್ತಾ ದಿನ ಕಳೆಯುತ್ತಿದ್ದಾರೆ. ಆ ದಿನಗಳೆಡೆಯಲ್ಲಿ ದಸರಾ ತೂರಿಕೊಂಡು ಬಂದಿದೆ. ಏನೂ ಆಗದವರಂತೆ .

ಬುಧ-ವಾ-ರ ಉತ್ತ-ರ ಒಳ-ನಾ-ಡಿ-ನ-ಲ್ಲಿ ಮಳೆ ಇಳಿ-ಮು-ಖ-ವಾ-ಗಿ-ದೆ. ಬೆ-ಳ್ತಂ-ಗ-ಡಿ, ಕುಂದಾ-ಪು-ರ, ತಾಳ-ಗು-ಪ್ಪ ಗಳ-ಲ್ಲಿ ತಲಾ 3 ಸೆಂಮೀ ಮಳೆ ಸುರಿ-ದಿ-ದೆ. ಕೊಲ್ಲೂ-ರು, ಸಿದ್ಧಾ-ಪು-ರ, ಪಣಂ-ಬೂ-ರು, ಉಡು-ಪಿ, ಕಾರ-ವಾ-ರ, ಹಾವೇ-ರಿ, ಶಿರಾ-ಳ-ಕೊ-ಪ್ಪ, ಶಿರ್ಸಿ, ಅಂಕೋ-ಲಾ, ಕುಮ-ಟಾ, ಮಂಕಿ, ಮಂಗಳೂ-ರು, ಯಲ್ಲಾ-ಪು-ರ, ಹೊನ್ನಾ-ವರ, ಸಂಕೇ-ಶ್ವ-ರ, ಚಿತ್ತಾ-ಪು-ರ, ರಾಣೆ-ಬೆ-ನ್ನೂ-ರು, ಶಿಕಾ-ರಿ-ಪು-ರ, ಕಮ್ಮ-ರ-ಡಿಗಳ-ಲ್ಲಿ ತಲಾ 1 ಸೆಂಮೀ ಮಳೆ-ಯಾ-ಗಿ-ದೆ.

ನಾಳೆ ನಾಡಿದ್ದೆಲ್ಲಾ ಬೆಂಗಳೂರಿನಲ್ಲಿ ರಾತ್ರಿ ಪಾಳ್ಯದಲ್ಲಿ ಮಳೆ ಕೆಲಸ ಮಾಡಬಹುದು ಅಂತ ಹವಾಮಾನ ಇಲಾಖೆ ಹೇಳಿದೆ. ಹಗಲೆಲ್ಲಾ ಉರಿ ಬಿಸಿಲ ತಡೆಯುವ ಮೋಡವಿರುತ್ತದೆ. ಕರಾವಳಿಯಲ್ಲಿ ಮಳೆ ಸುರಿಯುವುದು ಇದ್ದೇ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+