ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಐರೋಪ್ಯ ರಾಷ್ಟ್ರಗಳಿಗಿಂತ ನಮ್ಮ ಅಣು ವಿದ್ಯುತ್‌ ಉತ್ಪಾದನೆ ಹೆಚ್ಚು’

By Staff
|
Google Oneindia Kannada News

ಕಾರವಾರ : ಅಣುವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು ಯುರೋಪಿಯನ್‌ ದೇಶಗಳಿಗಿಂತ ಮುಂದಿದೆ. ವಿದ್ಯುತ್‌ ಉತ್ಪಾದನೆಯಲ್ಲಿ ಐರೋಪ್ಯ ದೇಶಗಳಿಗಿಂತ ನಮ್ಮ ದೇಶದ ಸಾಮರ್ಥ್ಯ ಹೆಚ್ಚಾಗಿದೆ ಎಂದು ಅಣು ವಿದ್ಯುತ್‌ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ವಿ.ಕೆ. ಚತುರ್ವೇದಿ ತಿಳಿಸಿದ್ದಾರೆ.

ದೇಶದ ಜನಸಂಖ್ಯೆ ಹಾಗೂ ವಿಶಾಲ ಭೂ ಪ್ರದೇಶವಿರುವ ಕಾರಣ ವಿದ್ಯುತ್‌ ಪೂರೈಕೆಯಲ್ಲಿ ತೊಡಕುಂಟಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ಕೈಗಾ ವಿದ್ಯುತ್‌ ಸ್ಥಾವರದ ಪ್ರಥಮ ಘಟಕ ಕ್ರಿಯಾಶೀಲಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮುಂದಿನ 20 ವರ್ಷಗಳ ಅವಧಿಯಲ್ಲಿ 20 ಸಾವಿರ ಮೆಗಾವ್ಯಾಟ್‌ ಅಣು ವಿದ್ಯುತ್‌ ಉತ್ಪಾದಿಸುವ ಗುರಿ ಇದ್ದು, ಇದಕ್ಕಾಗಿ ಅಣು ವಿದ್ಯುತ್‌ ನಿಗಮ ತನ್ನೇಲ್ಲಾ ಸ್ಥಾವರಗಳಲ್ಲೂ ನೂತನ ತಂತ್ರಜ್ಞಾನ ಅಳವಡಿಸುತ್ತಿದೆ ಎಂದರು.

ಕೈಗಾ ಮೂರು ಮತ್ತು ನಾಲ್ಕನೇ ಘಟಕಗಳಿಗೆ ಆರ್ಥಿಕ ಮಂಜೂರಾತಿ ಈ ವರ್ಷಾಂತ್ಯದಲ್ಲಿ ದೊರೆಯುವ ಸಾಧ್ಯತೆ ಇದೆ ಎಂದ ಅವರು, ಈ ಬಗ್ಗೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದರು. ಕೈಗಾದ ಮೂರು ಮತ್ತು ನಾಲ್ಕನೇ ಘಟಕವನ್ನು ಖಾಸಗೀ ಅಥವಾ ಅರೆ ಸರಕಾರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರಂಭಿಸುವ ಪ್ರಸ್ತಾವವೂ ಇದೆ ಎಂದರು.

(ಕಾರವಾರ ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X