Get Updates
Get notified of breaking news, exclusive insights, and must-see stories!

ನನಗೆ ಒಲಂಪಿಕ್ಸ್‌ನಲ್ಲಿ ಆಡಬೇಕೆಂಬ ಕನಸಿದೆ- ವಿ.ಆನಂದ್‌

ಸಿಡ್ನಿ : ವಿಶ್ವ ದ್ವಿತೀಯ ಶ್ರೇಯಾಂಕದ ಆಟಗಾರ ವಿಶ್ವನಾಥನ್‌ ಆನಂದ್‌ಗೆ ಎಲ್ಲಾ ಕ್ರೀಡಾಕೂಟಗಳ ತಾಯಿ ಒಲಂಪಿಕ್ಸ್‌ನಲ್ಲಿ ಆಡುವುದು ತುಂಬಾ ಇಷ್ಟವಂತೆ.

ಸಿಡ್ನಿಯಲ್ಲಿ ನಡೆಯುತ್ತಿರುವ 23ನೇ ಒಲಂಪಿಕ್ಸ್‌ನಲ್ಲಿ ಚೆಸ್‌ ಪ್ರದರ್ಶನ ಪಂದ್ಯ ಆಡಿರುವ ಆನಂದ್‌, ಚೆಸ್‌ -ಆ-ಟ-ವ-ನ್ನು ಒಲಂಪಿಕ್ಸ್‌ನಲ್ಲಿ ಸೇರ್ಪ-ಡೆ-ಗೊ-ಳಿ-ಸ-ಲು ಪ್ರಯ-ತ್ನಿ-ಸುತ್ತಿದ್ದಾರೆ. ರಷ್ಯಾ ಮೂಲದ ಸ್ಪೇನ್‌ನ ವಿಶ್ವ 7ನೇ ಶ್ರೇಯಾಂಕದ ಆಟಗಾರ ಅಲೆಕ್ಸಿ ಶಿರೋವ್‌ ಜೊತೆ ಆನಂದ್‌ ಆಡಿದ ಪ್ರದಶನ ಪಂದ್ಯ 1-1ರಿಂದ ಡ್ರಾ ಆಯಿತು.

‘ನನಗೆ ಒಲಂಪಿಕ್ಸ್‌ನಲ್ಲಿ ಆಡಬೇಕೆಂಬ ಕನಸಿದೆ. ಅದು ನನಸಾಗುವುದೆಂಬ ಭರವಸೆಯೂ ಇದೆ. ಅದಕ್ಕಾಗಿ ಫಿಡೆ ಸರ್ವಥಾ ಪ್ರಯತ್ನಿಸುತ್ತಿದೆ. ಈವರೆಗೆ ನಾನು ಒಲಂಪಿಯಾಡ್‌ ನೋಡಿದ್ದೆ. ಈಗ ಒಲಂಪಿಕ್ಸ್‌ನ ರಸದೌತಣ ಸವಿಯುತ್ತಿದ್ದೇನೆ. ಪ್ರದರ್ಶನ ಪಂದ್ಯಗಳಿಗೆ ಅಂತರರಾಷ್ಟ್ರೀಯ ಒಲಂಪಿಕ್ಸ್‌ ಸಮಿತಿ ಸೂಕ್ತ ಬೆಂಬಲ ನೀಡಿತು. ಅದರ ಪ್ರತಿಕ್ರಿಯೆ ನೋಡಿದರೆ ಒಲಂಪಿಕ್ಸ್‌ನಲ್ಲಿ ಚೆಸ್‌ ಖಂಡಿತ ಸ್ಥಾನ ಪಡೆದೇ ಪಡೆಯುತ್ತದೆ’ ಎನ್ನುತ್ತಾರೆ ಶೆನ್‌ಯಾಂಗ್‌ ವಿಶ್ವಕಪ್‌ ವಿಜಯಿ ಆನಂದ್‌.

‘ಪ್ರಸ್ತುತ ನಾನು ನವೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಸಿದ್ಧನಾಗುತ್ತಿದ್ದೇನೆ. ನನ್ನ ದೇಶದಲ್ಲಿ ಗೆದ್ದರೆ ಅದರಿಂದಾಗುವ ಸಂತೋಷ ಅಷ್ಟಿಷ್ಟಲ್ಲ’ ಎನ್ನುವ ಆನಂದ್‌, ‘ಒಲಂಪಿಕ್ಸ್‌ನಲ್ಲಿ ಚೆಸ್‌ ಸೇರ್ಪಡೆಯಾದರೆ ಪ್ರಾಯೋಜಕರು ಮತ್ತು ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಾವಾಗೇ ಮುಂದೆ ಬರುತ್ತಾರೆ’ ಎನ್ನುತ್ತಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+