Get Updates
Get notified of breaking news, exclusive insights, and must-see stories!

ಹಾಕಿ : ಭಾರತ- ಪೋಲೆಂಡ್‌ ಪಂದ್ಯ ಡ್ರಾ, ಟೂರ್ನಿಯಿಂದ ಭಾರತ ಹೊರಕ್ಕೆ

ಸಿಡ್ನಿ : ಒಲಂಪಿಕ್ಸ್‌ ಹಾಕಿ ಟೂರ್ನಿಯಿಂದ ಭಾರತ ಹೊರಬಿದ್ದಿದೆ.

ಮಂಗಳವಾರ ಪೋಲೆಂಡ್‌ ನಡುವಣ ನಡೆದ ಪಂದ್ಯ 1-1 ಗೋಲುಗಳಲ್ಲಿ ಡ್ರಾ ಆಗುವ ಮೂಲಕ ಸೆಮಿಫೈನಲ್ಸ್‌ ತಲುಪುವ ಅವಕಾಶವನ್ನು ಭಾರತ ಕಳೆದುಕೊಂಡಿತು. 2-2 ಗೊ-ೕಲು-ಗ-ಳ-ಲ್ಲಿ ಪಂದ್ಯ ಡ್ರಾ ಆಗಿ-ದ್ದ-ರೆ ಭಾರ-ತ-ಕ್ಕೆ ಸೆಮಿ-ಫೈ-ನ-ಲ್‌ ತಲು-ಪು-ವ ಅವ-ಕಾ-ಶ ಇತ್ತು .

ಆಮೆಗತಿಯ ಪಂದ್ಯದ ಪ್ರಥಮಾರ್ಧದಲ್ಲಿ ಯಾವ ತಂಡವೂ ಗೋಲು ಗಳಿಸಲಿಲ್ಲ. ದ್ವಿತೀಯಾರ್ಧದಲ್ಲಿ ಇನ್ನು 16.5 ನಿಮಿಷಗಳ ಆಟ ಬಾಕಿ ಇರುವಾಗ ಭಾರತ ಮೊದಲ ಗೋಲು ಗಳಿಸಿ, ಸೆಮಿಫೈನಲ್ಸ್‌ ಪ್ರವೇಶಿಸುವ ಭರವಸೆ ಮೂಡಿಸಿತು.

ಪಂದ್ಯ ಮುಗಿಯಲು 5 ನಿಮಿಷ ಉಳಿದಿರುವಾಗ ಪೋಲೆಂಡ್‌ ತಂಡ ಗೋಲು ಗಳಿಸಿ ಭಾರತದ ಹಾಕಿ ಪದಕದಾಸೆಗೆ ತಣ್ಣೀರೆರಚಿತು. ಭಾರತಕ್ಕೆ ಒಲಂಪಿಕ್ಸ್‌ನಲ್ಲಿ ಮಹಿಳಾ ವೈಯ್ಟ್‌ಲಿಫ್ಟಿಂಗ್‌ (ಕರ್ಣಂ ಮ-ಲ್ಲೇಶ್ವರಿ) ಕಂಚು ಪದಕ ಬಿಟ್ಟರೆ ಬೇರಾವ ಪದಕವೂ ಸಿಕ್ಕಿಲ್ಲ. ಹಾಕಿಯಲ್ಲಿ ಭಾರತಕ್ಕೆ ಪದಕ ಸಿಗಬಹುದೆಂಬ ನಿರೀಕ್ಷೆ ಈಗ ಹುಸಿಯಾಗಿದೆ. 8 ಬಾರಿ ಒಲಂಪಿಕ್ಸ್‌ ಹಾಕಿ ಪದಕ ಗಳಿಸಿರುವ ಭಾರತ ಕಳೆದೆರಡು ದಶಕಗಳಿಂದ ಹಾಕಿ ಪದಕ ಗಳಿಸಲು ವಿಫಲವಾಗಿದ್ದು, ಅದು ಮುಂದುವರೆದಂತಾಗಿದೆ.

(ಇನ್ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+