ವಿಡಿಯೋ, ಆಡಿಯೋ ಕ್ಯಾಸೆಟ್ ಭರಾಟೆ
ಇಲ್ಲಿ ಈಗ ವಿಡಿಯೋ, ಆಡಿಯೋ ಸೇರಿದಂತೆ ವಿಸಿಡಿಗಳೂ ಅಂಗಡಿಗಳಲ್ಲಿ ಸಿಗುತ್ತಿವೆ. ಹೃತಿಕ್‌ನ ಇತ್ತೀಚಿನ ಹಿಂದಿಚಿತ್ರ ಫಿಜಾದ 40 ವಿಸಿಡಿ ಕಾಪಿಗಳು ಪ್ಯಾರಿಸ್ ತಲುಪಿವೆ ಎಂದು ಭಾರತೀಯ ಮೂಲದ ಅಂಗಡಿ ಮಾಲೀಕನೊಬ್ಬ ಹೇಳುತ್ತಾನೆ. ಇಷ್ಟಲ್ಲದೆ ನುಸ್ರಫ್ ಫತೇ ಆಲೀಖಾನ್ ಸಂಗೀತವಿರುವ ಕ್ಯಾಸೆಟ್‌ಗಳನ್ನೂ ಫ್ರಾನ್ಸ್ ನಾಗರಿಕರೂ ಮುಗಿಬಿದ್ದು ಕೊಳ್ಳುತ್ತಿದ್ದಾರೆ.
ದಿವಾನೆ, ಧಡಕನ್ ಚಿತ್ರಗಳೂ ಬೇಡಿಕೆಯ ಪಟ್ಟಿಯಲ್ಲಿವೆ. ಇಲ್ಲಿಯೂ ಜನಪ್ರಿಯತೆಯಲ್ಲಿ ಹೃತಿಕ್ ರೋಷನ್‌ದೇ ಸವಾರಿ. ನಂತರದ ಸ್ಥಾನಗಳಲ್ಲಿ ಶಾರುಖ್‌ಖಾನ್, ಗೋವಿಂದ ಇದ್ದಾರೆ. ಸತ್ಯಜಿತ್‌ರಾಯ್, ಆಡೂರ್ ಗೋಪಾಲಕೃಷ್ಣನ್, ಹೃತ್ವಿಕ್ ಘಟಕ್ ಪ್ರಸಿದ್ಧ ನಿರ್ದೇಶಕರು. ಶಬನಾ ಅಜ್ಮಿ, ಶರ್ಮಿಳಾ ಟಾಗೂರ್ ಕೂಡಾ ಜನಪ್ರಿಯರು.
ಭಾರತೀಯ ಹಬ್ಬಗಳು: ಗಣೇಶೋತ್ಸವ ಸೇರಿದಂತೆ ಅನೇಕ ಭಾರತೀಯ ಹಬ್ಬಗಳಿಗೆ ಪ್ಯಾರಿಸ್‌ನ ಬೀದಿಗಳು ತೆರೆದುಕೊಂಡಿರುವುದನ್ನು ಈಗಾಗಲೇ ಅನೇಕ ವರದಿಗಳು ಹೇಳಿವೆ. ಈಗ ಪ್ಯಾರಿಸ್‌ನಲ್ಲಿ ದಿಪಾವಳಿ ಭರಾಟೆ ನಡೆಯುತ್ತಿದೆ. ಈ ಬಾರಿ ಶಬನಾ ಅಜ್ಮಿ, ಶರ್ಮಿಳಾ ಟಾಗೂರ್ ಅವರಿಗೆ ದೀಪಾವಳಿ ಅಂಗವಾಗಿ ಸನ್ಮಾನ ಸಮಾರಂಭವೂ ಏರ್ಪಾಡಾಗಿದೆ.
ಲಂಡನ್ ರಹದಾರಿ: ಎಲ್ಲ ವಿಧದ ಕ್ಯಾಸೆಟ್‌ಗಳೂ ಲಂಡನ್ ಮೂಲಕ ಬರುತ್ತವೆ. ಇದರಲ್ಲಿ ಕಳ್ಳಸಾಗಣೆಯೂ ಉಂಟೆಂದು ಅನೇಕ ವ್ಯಾಪಾರಿಗಳು ಒಪ್ಪಿಕೊಳ್ಳುತ್ತಾರೆ. ಕೆಲವರು ಸ್ಥಳೀಯವಾಗಿ ಕೇಬಲ್ ಜಾಲವನ್ನೂ ಹುಟ್ಟುಹಾಕಿದ್ದಾರೆ.
ಹೆಚ್ಚುತ್ತಿರುವ ಜನಪ್ರಿಯತೆ: ಜಪಾನ್‌ನಲ್ಲಿ ಅದ್ಬುತ ಯಶಸ್ಸು ಕಂಡ ರಜನೀಕಾಂತ್, ಮೀನಾ ಅಭಿನಯದ ತಮಿಳಿನ ಇನ್ನೊಂದು ಚಿತ್ರ ಮುತ್ತು , ಇತಿಹಾಸ ನಿರ್ಮಿಸಿದೆ. ಬ್ರಿಟನ್, ಅಮೆರಿಕಾಗಳಲ್ಲೂ ಕೂಡಾ ಭಾರತೀಯ ಚಿತ್ರಗಳ ಬೇಡಿಕೆ ಹೆಚ್ಚುತ್ತಿದೆ.
(ಐಎಎನ್‌ಎಸ್)
ಮುಖಪುಟ / ಮನೆ ಆಚೆಯ ಮನೋನಂದನ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications