ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೇಗೆ-ಯಂ--ತೆ ಎರ-ಗಿ-ದ ರೋಗವಿ-ನಾ-ಶ-ದ ಅಂಚಿ-ನ-ಲ್ಲಿ -ಹ-ದ್ದು

By Staff
|
Google Oneindia Kannada News

ನವದೆಹಲಿ : ವನ್ಯಜೀವಿಗಳ ಬಗ್ಗೆ ಅಪಾರ ತಿಳಿವಳಿಕೆ, ಕಾಳಜಿಯುಳ್ಳ ತಜ್ಞರೆಲ್ಲ ದೆಹಲಿಯಲ್ಲಿ ಸಭೆ ಸೇರಿದ್ದರು. ಚರ್ಚೆಯಾದ ವಿಷಯ, ವೇಗವಾಗಿ ಕ್ಷೀಣಿಸುತ್ತಿರುವ ರಣಹದ್ದುಗಳ ಸಂಖ್ಯೆ.

ಸಭೆಯಲ್ಲಿ ವಿದೇಶೀ ತಜ್ಞರೂ ಭಾಗವಹಿಸಿದ್ದರು. ಸೆಪ್ಟಂಬರ್‌ 18 ರಿಂದ ಮೂರು ದಿನಗಳ ಕಾಲ ನಡೆದ ವಿಚಾರ ಸಂಕಿರಣವದು. ಎಲ್ಲರಿಗೂ ಹದ್ದುಗಳ ಸಂಖ್ಯೆ ಇಳಿಮುಖವಾಗುತ್ತಿರುವ ಬಗೆಗೆ, ಇದರಿಂದಾಗಿ ಪರಿಸರ ಸಮತೋಲನದಲ್ಲಿ ವ್ಯತ್ಯಾಸವಾಗುತ್ತಿರುವ ಕುರಿತು ಆತಂಕ. ಸಮಸ್ಯೆಗೊಂದು ಪರಿಹಾರ ಕಾಣಿಸುವ ತವಕ.

ಕೇವಲ 9 ವರ್ಷಗಳಲ್ಲಿ ಶೇ.90 ರಷ್ಟು ಹದ್ದುಗಳ ಸಂಖ್ಯೆ ನಶಿಸಿರುವುದು ತಜ್ಞರ ಆತಂಕಕ್ಕೆ ಕಾರಣ. ಮುಂಬಯಿಯ ನ್ಯಾಚುರಲ್‌ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್‌), ಬ್ರಿಟನ್ನಿನ ರಾಯಲ್‌ ಸೊಸೈಟಿ ಹಾಗೂ ಯುಎಸ್‌ನ ಫಿಶ್‌ ಆ್ಯಂಡ್‌ ವೈಲ್ಡ್‌ ಲೈಫ್‌ ಸರ್ವೀಸ್‌- ಸಂಯುಕ್ತವಾಗಿ ಸಂಕಿರಣವನ್ನು ಏರ್ಪಡಿಸಿದ್ದವು.

ಡ್ರಾಪ್‌ ಡೆಡ್‌ ಸಿಂಡ್ರೋಮ್‌- ರಣಹದ್ದುಗಳ ಸಂತತಿ ಕ್ಷೀಣಿಸುತ್ತಿರುವುದಕ್ಕೆ ಈ ಅಪರೂಪದ ರೋಗ ಕಾರಣವಿರಬಹುದೇ? ಅನೇಕರು ಹೌದೆಂದರು. ಭರತಪುರ, ರಾಜಸ್ತಾನದಲ್ಲಿರುವ ಪಕ್ಷಿಧಾಮ, 1996 ರಲ್ಲಿ ಅಪಾರ ಸಂಖ್ಯೆಯ ಹದ್ದುಗಳು ಇಲ್ಲಿ ಮರಣ ಹೊಂದಿದವು. ಅಪರೂಪದ ರೋಗ ತನ್ನ ಮೊದಲ ಸಾಕ್ಷ್ಯ ಬಿಟ್ಟುಕೊಟ್ಟದ್ದು ಇಲ್ಲಿಯೇ. ಈ ವಿಷಯವನ್ನು ಸಭೆಯ ಗಮನಕ್ಕೆ ತಂದದ್ದು ವಿಭು ಪ್ರಕಾಶ್‌, ಇವರು ಹದ್ದುಗಳನ್ನು ಕುರಿತ ಅಧ್ಯಯನಕ್ಕಾಗಿ ಬಿಎನ್‌ಎಚ್‌ಎಸ್‌ ನೇಮಿಸಿದ್ದ ಆಯೋಗದ ಸಂಶೋಧಕರು.

ಭರತಪುರದ ದುರಂತದಲ್ಲಿ , ಸಂಶೋಧಕರು ಕೆಲವು ರೋಗ ಲಕ್ಷಣಗಳನ್ನು ಗುರ್ತಿಸಿದರು. ಮುಖ್ಯವಾಗಿ, ರೋಗ ಪೀಡಿತ ಹಕ್ಕಿಯ ಕತ್ತು ದುರ್ಬಲವಾಗಿ ಜೋಲು ಬೀಳುತ್ತದೆ. ತಾಪಮಾನ ಹೆಚ್ಚಿದ್ದಾಗಂತೂ ಈ ಯಾತನೆ ಇನ್ನಷ್ಟು ಹೆಚ್ಚು . ಉಳಿದಂತೆ ಹಕ್ಕಿಗಳು ಆರೋಗ್ಯದಿಂದಿರುವಂತೆ ಕಾಣಿಸಿಕೊಳ್ಳುತ್ತವೆ, ಮರಿಗಳಿಗೆ ಗುಟುಕು ನೀಡುತ್ತವೆ. ಆದರೆ, ರೋಗ ಲಕ್ಷಣ ಕಾಣಿಸಿಕೊಂಡ 30- 32 ದಿನಗಳಲ್ಲಿ ಹದ್ದುಗಳು ಸಾಯುತ್ತವೆ.

ಮಾರಕ ರೋಗದಿಂದ ಹದ್ದುಗಳು ಸತ್ತರೂ, ಅವುಗಳ ಶವದಲ್ಲಿ ಯಾವುದೇ ರೋಗಲಕ್ಷಣ ಕಾಣುವುದಿಲ್ಲ ಎನ್ನುತ್ತಾರೆ, ಲಂಡನ್ನಿನ ಜೀವಶಾಸ್ತ್ರ ಸಂಸ್ಥೆಯ ಆಂಡ್ರ್ಯೂ ಕನ್ನಿಂಗ್‌ಹ್ಯಾಂ. ಅವರ ಪ್ರಕಾರ ಆಹಾರದ ಕೊರತೆ ಕೂಡ ಹದ್ದುಗಳ ಸಂತತಿ ಕ್ಷೀಣಿಸುವುದಕ್ಕೆ ಮತ್ತೊಂದು ಮುಖ್ಯ ಕಾರಣ .

ರೋಗಕ್ಕೆ ಕಾರಣಗಳನ್ನು ಕಂಡು ಹಿಡಿಯಲು ಬಿಎನ್‌ಎಚ್‌ಎಸ್‌ ಹಾಗೂ ಇತರ ಸಂಸ್ಥೆಗಳು ಶ್ರಮಿಸುತ್ತಿವೆ. ಸರ್ಕಾರ ಮಾತ್ರ ಮುಗುಮ್ಮಾಗಿದೆ. ಈ ಕಾರಣದಿಂದಾಗಿಯೇ, ಪುಣೆಯ ಪ್ರತಿಷ್ಠಿತ ವೆಂಕಟೇಶ್ವರ ಪ್ರಯೋಗಾಲಯದ ಸಹಯೋಗದಲ್ಲಿ ರೋಗ ಕ್ಕೆ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಬಿಎನ್‌ಎಚ್‌ಎಸ್‌ನ ಪ್ರಕಾಶ್‌ ಹೇಳುತ್ತಾರೆ.

ಪರಿಸರ ಸಮತೋಲನದಲ್ಲಿ ಹದ್ದುಗಳ ಅಗತ್ಯವನ್ನು ಕುರಿತು, ಅವುಗಳ ಉಳಿವಿನ ಕುರಿತು ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಸಂಕಿರಣ ಒತ್ತಿ ಹೇಳಿದೆ. ಹದ್ದುಗಳನ್ನು ಕಾಡುತ್ತಿರುವ ಮಾರಕ ರೋಗವನ್ನು ನಿವಾರಿಸುವ ಬಗ್ಗೆ ತಜ್ಞರಲ್ಲಿ ಹೊಸ ಹೊಳಹುಗಳನ್ನು ಸಂಕಿರಣ ಮೂಡಿಸಿದೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X