Get Updates
Get notified of breaking news, exclusive insights, and must-see stories!

ಕಾಡಿ-ನಿಂ-ದ ನಾಡಿ-ಗೆ ಕರೆ-ಸಿ-ದ-ರು, ಕತ್ತ-ಲ-ಲ್ಲೇ ಬಿಟ್ಟು -ಸು-ಮ್ಮ-ನಾ-ದ-ರು

ಬೆಂಗಳೂರು :ರಾಷ್ಟ್ರೀಯ ಉದ್ಯಾನವನ ಮತ್ತು ಅರಣ್ಯ ಧಾಮಗಳನ್ನು ಅಭಿವೃದ್ಧಿ ಪಡಿಸುವಾಗ ಅರಣ್ಯದ ಮೂಲನಿವಾಸಿಗಳನ್ನು ಸ್ಥಳಾಂತರಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದಲ್ಲದೆ ಬುಡಕಟ್ಟು ಜನಾಂಗದವರ ಸಂಖ್ಯೆ ಕ್ಷೀಣಿಸಲು ದಾರಿ ಮಾಡಿಕೊಟ್ಟಿದೆ ಎಂದು ಮೂಲನಿವಾಸಿಗಳ ವಿವಿಧ ಸಂಘಟನೆಗಳು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿವೆ.

ರಾಜ್ಯದಲ್ಲಿರುವ ಮೂಲನಿವಾಸಿಗಳು ಸಂವಿಧಾನಾತ್ಮಕ ಹಕ್ಕುಗಳಿಂದ ವಂಚಿತರಾಗಿದ್ದಾರೆ. ವನ್ಯ ಮೃಗಗಳನ್ನು ರಕ್ಷಿಸುವ ಅರಣ್ಯಧಾಮಗಳನ್ನು ಅಭಿವೃದ್ಧಿ ಪಡಿಸುವಾಗ ಮೂಲನಿವಾಸಿಗಳ ಹಿತಾಸಕ್ತಿಗಳನ್ನು ನಿರ್ಲಕ್ಷಿಸಬಾರದು. ಸುಮಾರು ಆರುವರೆ ಸಾವಿರಕ್ಕೂ ಹೆಚ್ಚು ಮೂಲನಿವಾಸಿ ಕುಟುಂಬಗಳನ್ನು ನಾಗರಹೊಳೆ, ಕೊಡಗು ಮತ್ತು ಮೈಸೂರಿನಿಂದ ಸ್ಥಳಾಂತರಿಸಲಾಗಿದೆ. ಆದ-ರೆ, ಅವರಿಗೆ ಪರಿಹಾರವಾಗಲೀ, ಮರುವಸತಿಯಾಗಲೀ ಕಲ್ಪಿಸಿಲ್ಲ . 1996ರ ಕಾಯ್ದೆಯ ಪ್ರಕಾರ ಮೂಲನಿವಾಸಿಗಳಿಗೆ ವಿಶೇಷ ಅಭಿವೃದ್ದಿ ಕಾರ್ಯಕ್ರಮ ಹಮ್ಮಿಕೊಳ್ಳುವ ಪ್ರಸ್ತಾಪವನ್ನೂ ಕೂಡ ಸರಕಾರ ಪರಿಶೀಲಿಸುತ್ತಿಲ್ಲ ಎಂದು ಮೈಸೂರು ಸು-ತ್ತ-ಮು-ತ್ತ-ಲಿ-ನ ವಿವಿಧ ಮೂಲನಿವಾಸಿ ಸಂಘಟನೆಗಳು ರಾಜ್ಯ ಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ದೂರಿವೆ.

ನ್ಯಾಷನಲ್‌ ಪ್ರಂಟ್‌ ಫಾರ್‌ ಟ್ರೆೃಬಲ್‌ ಸೆಲ್ಫ್‌ ರೂಲ್‌, ರಾಜ್ಯ ಮೂಲ ನಿವಾಸಿ ವೇದಿಕೆ ಮತ್ತಿತರ ಮೂಲನಿವಾಸಿ ಸಂಘಟನೆಗಳು ರಾಜ್ಯಪಾಲರು ಮಧ್ಯ ಪ್ರವೇಶಿಸಿ, ಮೂಲನಿವಾಸಿಗಳ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಗಮನ ಹರಿಸುವಂತೆ ಗ್ರಾಮ ಸಭೆಗಳಿಗೆ ಸೂಚಿಸ-ಲು ಸರಕಾರಕ್ಕೆ ಸಲಹೆ ಮಾಡುವಂತೆ ಕೇಳಿಕೊಂಡಿವೆ. ಮೂಲನಿವಾಸಿಗಳಿಗೆ ವಿಶೇಷ ಸಂವಿಧಾನಾತ್ಮಕ ರಕ್ಷಣೆ ನೀಡುವಂತೆ ಕೇಳಿಕೊಂ-ಡಿ-ರು-ವ ಸಂಘಟನೆಗಳು, ಈ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ರಾಷ್ಟ್ರೀಯ ಆಯೋಗ ಮುಂದೆ ಬರಬೇಕು ಎಂದು ಆಗ್ರಹಿಸಿವೆ.

ಮೂಲನಿವಾಸಿಗಳಲ್ಲದವರೂ ಮೀಸಲಾತಿಗಾಗಿ ಲಾಬಿ ನಡೆಸುತ್ತಿರುವುದು, ಮೂಲನಿವಾಸಿಗಳ ಗುಡಿಸಲುಗಳಿಗೆ ಬೆಂಕಿಯಿಟ್ಟು ಅವರನ್ನು ಅಲ್ಲಿಂದ ಗುಳೆ ಹೊರಡುವ ಅನಿವಾರ್ಯ ಪರಿಸ್ಥಿತಿ ನಿರ್ಮಿಸುವಂತಹ ಅನ್ಯಾಯಗಳ ಕುರಿತು ಸರಕಾರ ಗಮನ ಹರಿಸಬೇಕು , ವಾಸ್ತವವಾಗಿ ಮೀಸಲಾತಿ ಪಡೆಯಬೇಕಾದ ಗುಂಪುಗಳ ಹೊರತಾಗಿ ಅದರ ಲಾಭವನ್ನು ಬೇರೆ ಜನಾಂಗದವರು ಪಡೆದುಕೊಳ್ಳುತ್ತಿರುವುದನ್ನು ತಡೆಯಬೇಕು ಎಂದು ಸಂಘಟನೆಗಳು ಒತ್ತಾಯಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+