ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾತ್ರಾ-ಸ್ಥ-ಳ-ವಾ-ಗಿ ಅಭಿವೃದ್ಧಿಗೊಳ್ಳ-ಲಿ-ರುವ ತಲಕಾವೇರಿ

By Staff
|
Google Oneindia Kannada News

ಮಡಿಕೇರಿ : ತಲಕಾವೇರಿಯನ್ನು -ಯಾ-ತ್ರಾಸ್ಥಳವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಜರಾಯಿ ಸಚಿವ ಬಾಬುರಾವ್‌ ಚಿಂಚನಸೂರು ಶುಕ್ರವಾರ ಹೇಳಿದ್ದಾರೆ.

ಸ್ವಾತಂತ್ರ್ಯ ಪಡೆದು 53 ವರ್ಷಗಳಾದರೂ ನಮ್ಮ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ಪ್ರಸ್ತುತ ತಲಕಾವೇರಿಯ ಅಭಿವೃದ್ಧಿ ಕುರಿತ ನೀಲಿ ನಕ್ಷೆ ಮತ್ತು ಖರ್ಚು ವೆಚ್ಚಗಳ ಅಂದಾಜು ಲೆಕ್ಕವನ್ನು ಸರಕಾರಕ್ಕೆ ಸಲ್ಲಿಸುವಂತೆ ಮುಖ್ಯ ಮಂತ್ರಿ ಎಸ್‌. ಎಂ. ಕೃಷ್ಣ ಸೂಚಿಸಿದ್ದು , ಅಗತ್ಯವಿರುವ ಹಣವನ್ನು ಸರಕಾರ ಬಿಡುಗಡೆ ಮಾಡಲಿದೆ ಎಂದು ಚಿಂಚನಸೂರು ಹೇಳಿದರು.

ಈ ನಿಟ್ಟಿನಲ್ಲಿ ಭಾಗಮಂಡಲ ಮತ್ತು ತಲಕಾವೇರಿಯ ಅಭಿವೃದ್ಧಿ ಕೆಲಸವನ್ನು ತಕ್ಷಣ ಆರಂಭಿಸಲಾಗುವುದು. ಸದ್ಯದಲ್ಲಿಯೇ ಉನ್ನತ ಮಟ್ಟದ ಸಭೆ ಸೇರಿ ಕಾಮಗಾರಿಯ ಬಗೆಗೆ ಚರ್ಚಿಸಲಾಗುವುದು. ಖಾಸಗಿಯವರಿಂದಲೂ ದೇಣಿಗೆ ಸಂಗ್ರಹಿಸಲಾಗುವುದು ಎಂದ ಸಚಿವರು ಮುಜರಾಯಿ ಇಲಾಖೆಯ ಕಾರ್ಯ ವೈಖರಿಯಲ್ಲಿ ಕೃಷ್ಣರ ನೇತೃತ್ವದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ ಎಂದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X