Get Updates
Get notified of breaking news, exclusive insights, and must-see stories!

ಸಿಲಿಕಾನ್‌ ಸಿಟಿಯಲ್ಲಿ ಹೂಡಿಕೆ : ಈಗ ಫಿನ್‌ಲ್ಯಾಂಡ್‌ ಸರದಿಬೆಂಗಳೂರು ಸಾಫ್ಟ್‌ವೇರ್‌ ಆಕರ್ಷಣೆ ಮುಂದುವರೆದಿದೆ...

ಬೆಂಗಳೂರು :ಜಿಇ ಅಧ್ಯಕ್ಷ ವೆಲ್ಶ್‌, ಬೆಂಗಳೂರಿನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮೇಲೆ ಇನ್ನು 3 ವರ್ಷಗಳಲ್ಲಿ 100 ದಶಲಕ್ಷ ಡಾಲರ್‌ ಸುರಿಯುತ್ತೇನೆ ಅಂತ ಪ್ರಾಮಿಸ್‌ ಮಾಡಿರುವ ಬೆನ್ನಲ್ಲೇ ಫಿನ್‌ಲ್ಯಾಂಡ್‌ ಕೂಡ ಐಟಿಗೆ ಸಂಬಂಧಿಸಿದಂತೆ ರಾಜ್ಯದ ಜೊತೆ ವ್ಯಾಪಾರ ಹೆಚ್ಚಿಸುವುದಾಗಿ ಗುರುವಾರ ಆಶ್ವಾಸನೆ ಕೊಟ್ಟಿದೆ.

ಫಿನ್‌ಲೆಂಡಿನ ವಿದೇಶಾಂಗ ವ್ಯವಹಾರಗಳ ಸಚಿವ ಕೀಮೊ ಸಾಸಿ, ವ್ಯಾಪಾರ ವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ, ರಾಜ್ಯದ ಸಂಪನ್ಮೂಲ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ವ್ಯಾಪಾರ ವೃದ್ಧಿಸಿಕೊಳ್ಳಲು ತಮ್ಮ ದೇಶ ಸಿದ್ಧವಿದೆ. ಭಾರತ ಮತ್ತು ಫಿನ್‌ಲ್ಯಾಂಡ್‌ ದೇಶಗಳ ರಾಜಕೀಯ ಹಾಗೂ ಆರ್ಥಿಕ ಧೋರಣೆಗಳು ಒಂದೇ ಆಗಿದ್ದು, ವ್ಯಾಪಾರ ಸಂಬಂಧ ಇನ್ನಷ್ಟು ಹೆಚ್ಚಲು ಅನುವಾಗಿದೆ ಎಂದರು.

ಐಟಿ ಕ್ಷೇತ್ರದಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು ಮುಂಚೂಣಿಯಲ್ಲಿರುವುದನ್ನು ಶ್ಲಾಘಿಸಿದ ಸಾಸಿ, ತಮ್ಮ ಭೇಟಿಯ ಮುಖ್ಯ ಉದ್ದೇಶ ಈ ಕ್ಷೇತ್ರದಲ್ಲಿ ಬಂಡವಾಳ ಹೂಡುವುದು ಹಾಗೂ ತಂತ್ರಜ್ಞಾನ ವಿನಿಮಯಕ್ಕೆ ಒತ್ತು ಕೊಡುವುದು ಎಂದು ಹೇಳಿದರು.

ದೇಶಪಾಂಡೆ ಬಾಯಿಪಾಠ : ಭಾರತದಿಂದ ರಫ್ತಾಗುವ ಸಾಫ್ಟ್‌ವೇರ್‌ ಉತ್ಪಾದನೆಯಲ್ಲಿ ಶೇ. 40ರಷ್ಟು ಕರ್ನಾಟಕದಿಂದಲೇ ರಫ್ತಾಗುತ್ತಿದೆ. ನಮ್ಮ ಪರಿಸರ, ತಂತ್ರಜ್ಞರು ಹಾಗೂ ಸಹಕಾರಿ ಭಾವನೆ ಹೂಡಿಕೆದಾರರಿಗೆ ತುಂಬಾ ಹಿಡಿಸಿದೆ. ಬಂಡವಾಳ ಹೂಡಲು ಅನುಕೂಲವಾಗುವಂತೆ ನಮ್ಮ ಸರ್ಕಾರ ಫಿನ್‌ಲ್ಯಾಂಡಿಗೆ ಸಂಪೂರ್ಣ ನೆರವು ನೀಡಲಿದೆ ಎಂದು ಸಂಕಿರಣದಲ್ಲಿ ಭಾಗವಹಿಸಿದ್ದ ಭಾರೀ ಕೈಗಾರಿಕೆ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು. ಫಿನ್‌ಲ್ಯಾಂಡಿನ ಭಾರತದ ರಾಯಭಾರಿ ಬೆಂಜಮಿನ್‌ ಬಾಸಿನ್‌ ಸಹ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+