Get Updates
Get notified of breaking news, exclusive insights, and must-see stories!

ಐದಂಕಿ ಸಂಬಳ ಪಡೆವವರು ಹೆಚ್ಚೆಂದರೆ ಒಂದು ದಿನದ ಸಂಬಳ ನೀಡಬಹುದು ಆದರೆ...

ತರಬೇತಿಗೆ ಸ್ತ್ರೀ-ಪುರುಷ ಬೇಧವಿಲ್ಲ. ಈಗ ಪಡೆದಿರುವುದು ಕೇವಲ ದೈಹಿಕ ತರಬೇತಿ ಮಾತ್ರ. ಇನ್ನೂ ಮುಂದೆ ಕಷ್ಟದ ಹಾದಿಗಳಿವೆ. ಇಲೆಕ್ಟ್ರಾನಿಕ್ಸ್‌ ಮತ್ತು ಇಲೆಕ್ಟ್ರಕಲ್‌ ಎಂಜಿನಿಯರಿಂಗ್‌ ಪದವೀಧರಳಾದ ತಮಗೆ ಮಿಲಿಟರಿ ಸಿಗ್ನಲ್ಸ್‌ ವಿಭಾಗ ದೊರೆತಿರುವುದು ಒಳ್ಳೆಯದೇ ಆಗಿದೆ. ನನ್ನ ಪಿಯುಸಿ, ಎಂಜಿನಿಯರಿಂಗ್‌ ಸಹಪಾಠಿಗಳು ಐದಂಕಿವರೆಗೂ ಸಂಬಳ ಪಡೆಯುತ್ತಾರೆ. ಹೆಚ್ಚೆಂದರೆ ಅವರು ದೇಶಕ್ಕಾಗಿ ಒಂದು ದಿನದ ಸಂಬಳ ನೀಡಬಹುದು ಆದರೆ ಯೋಧರು ದೇಶಕ್ಕೆ ಪ್ರಾಣ ಕೊಡುತ್ತೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡಳು ಸಂಗೀತಾ.

ಮಿಲಿಟರಿ ಎಂಬ ಶಿಸ್ತಿನ ಶಾಲೆ: ಮಿಲಿಟರಿ ತರಬೇತಿ, ತಮ್ಮ ಸಾಮಾನ್ಯ ದಿನಚರಿ ಸೇರಿದಂತೆ ಸಮಗ್ರ ಬದಲಾವಣೆ ತಂದ ಬಗ್ಗೆಯೂ ಹೇಳಿಕೊಂಡ ಸಂಗೀತಾ, ತರಬೇತಿ ಅವಧಿಯಲ್ಲಿ ಸಣ್ಣಪುಟ್ಟ ತಪ್ಪಿಗೂ ಕಠಿಣ ಶಿಕ್ಷೆ ನೀಡಿದ್ದನ್ನು, ಕಾಲೇಜಿನಂತೆ ಸೇನೆಯಲ್ಲೂ ಒಂಥರದ ರ್ಯಾಗಿಂಗ್‌ ನಡೆದಿದ್ದನ್ನೂ ಹೇಳಿದಳು. ಮಾನಸಿಕ ಹಾಗೂ ದೈಹಿಕ ದೃಡತೆ ಹೆಚ್ಚಿಸಲು ಇದು ತರಬೇತಿಯ ಭಾಗ. ಇಲ್ಲಿಯ ರ್ಯಾಗಿಂಗ್‌ನಲ್ಲಿ ಸಾವಿರಗಟ್ಟಲೆ ಪುಶ್‌ಅಪ್‌ಗಳು, ಸ್ಟಾರ್‌ ಜಂಪ್‌, ರೋಲಿಂಗ್‌ಗಳನ್ನು ಮಾಡಿಸುತ್ತಿದ್ದರು ಎಂದ ಸಂಗೀತಾ ಅದನ್ನು ಮಾಡಿ ತೋರಿಸಿಯೇ ಬಿಟ್ಟಳು.

ಸೆ. 17ರಂದು ಜಮ್ಮುವಿನ ಯುದ್ಧಭೂಮಿಗೆ ಹೋಗಿರುವ ಸಂಗೀತಾ, ಬದುಕು, ಕುಟುಂಬ, ಸೇನೆ, ಶಿಸ್ತು ಎಂದೆಲ್ಲಾ ಜೀವನದ ಎರಡೂ ಮಗ್ಗುಲುಗಳ ಬಗ್ಗೆ ಹರಳು ಉರಿದಂತೆ ಮಾತನಾಡಿದಳು. ಯಶಸ್ಸಿಗೆ ಎಲ್ಲವೂ ಅಗತ್ಯ ಎಂದಳು. ಮದುವೆ ಸಂಸಾರದ ಬಗ್ಗೆ ಗಂಭೀರವಾಗಿಯೇ ಮಾತನಾಡಿದ ಸಂಗೀತಾ ಮಿಲಿಟರಿಯರಾದರೆ ಚೆನ್ನ. ಆದರೆ ಈವರೆಗೂ ಹುಡುಕಿಟ್ಟಿಲ್ಲ ಎಂದಳು.

ಕುಟುಂಬದ ಸಹಕಾರ : ಸಂಗೀತಾಳ ಅಮ್ಮ ಪ್ರಭಾ ಗಾಂವಕರ್‌, ತಾವು ಮಗಳಿಗೆ ನೀಡಿದ್ದ ಸ್ವಾತ್ತಂತ್ರ , ಆಕೆ ಓದಿದ ರೀತಿ ಎಲ್ಲದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ತಂದೆ ಕೂಡಾ ಮಗಳನ್ನು ಗಂಡು ಹುಡುಗನಂತೆ ಬೆಳಸಿದ್ದರ ಬಗ್ಗೆ ಹೇಳಿಕೊಂಡರು. ಈ ಹಂತದಲ್ಲಿ ಸಂಗೀತಾ ಕೂಡ ಕುಟುಂಬದ ಸಹಕಾರವನ್ನು ಸ್ಮರಿಸಿಕೊಂಡಳು. ಕೊಟ್ಟ ದುಡ್ಡಿಗೆ ಲೆಕ್ಕ ಕೇಳುತ್ತಿರಲಿಲ್ಲ. ಯಾವ ವಿಚಾರವನ್ನೂ ಹೇರಲಿಲ್ಲ. ತಾವೂ ಅಂಥ ಸ್ವಾತಂತ್ರವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ ಎಂದು ಮಾತು ಮುಗಿಸುವ ಹೊತ್ತಿಗೆ ಚುಕ್ಕಿಗಳು ಹುಟ್ಟಿದ್ದವು.

backಮುಖಪುಟ / ಲೋಕೋಭಿನ್ನರುಚಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+