ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಅ-ಡಿ-ಕೆ ಬೆಳೆ-ಗಾ-ರ-ರ ಹಿತಾ-ಸ-ಕ್ತಿ ರಕ್ಷಿ-ಸ-ಲು ಆಗ್ರ-ಹ

By Staff
|
Google Oneindia Kannada News

ಮಂಗಳೂರು : ಎಲ್ಲಾ ಅಡಿಕೆ ಬೆಳೆಗಾರರ ಸಾಲವನ್ನು ಮಧ್ಯಮಾವಧಿ ಸಾಲವಾಗಿ ಪರಿವರ್ತಿಸಬೇಕು ಎಂದು ಮಂಗಳವಾರ ಮಂಗಳೂರಿನಲ್ಲಿ ನಡೆದ ಕೇರಳ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಸಂಸ್ಥೆ ಪ್ರಮುಖರ ಸಮಾಲೋಚನಾ ಸಭೆ ಉಭ-ಯ ರಾ-ಜ್ಯ ಸರ್ಕಾ-ರ-ಗ-ಳ-ನ್ನು ಒತ್ತಾಯಿಸಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿಯ ರಾಜ್ಯಾಧ್ಯಕ್ಷ ರಾಂ ಭಟ್‌ ಉರಿಮಜಲು ಅವರು ಸಭೆಯ ನಿರ್ಣ-ಯಗಳನ್ನು ಸುದ್ದಿಗಾರರಿಗೆ ತಿಳಿಸಿದರು.

  • ಬೆಳೆ ಸಾಲದ ಮೇಲೆ ನಬಾರ್ಡ್‌ನವರು ಅಪೆಕ್ಸ್‌ ಬ್ಯಾಂಕಿಗೆ ವಿಧಿಸಿರುವ ಬಡ್ಡಿ ದರವನ್ನು ಮಾತ್ರವೇ ವಿಧಿಸಬೇಕು. ಉಳಿದ ಅಂಶವನ್ನು ಸರಕಾರ ಮತ್ತು ಅಪೆಕ್ಸ್‌ ಬ್ಯಾಂಕ್‌ಗಳು ತುಂಬಬೇಕು.
  • ಅಡಿಕೆ ಬೆಳೆಗಾರರಿಗೆ ಶೇ 50 ರ ದರದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಒದಗಿಸಬೇಕು .
  • ನೇರ ಖರೀದಿ ಮಾಡುವ ಸಹಕಾರಿ ಸಂಸ್ಥೆಗಳಿಗೆ ಕನಿಷ್ಠ 200 ಕೋಟಿ ರೂಪಾಯಿಗಳನ್ನು ರಿವಾಲ್ವಿಂಗ್‌ ಫಂಡ್‌(ಆವರ್ತ ನಿಧಿ ) ಆಗಿ, ಕಡಿಮೆ ಬ-ಡ್ಡಿ ದರದಲ್ಲಿ ಕರ್ನಾಟಕ ಮತ್ತು ಕೇರಳ ಸರಕಾರಗಳು ಒದಗಿಸಬೇಕು. ರೈತರೂ ಕೂಡ ಸಹಕಾರಿ ಸಂಸ್ಥೆಗಳಿಗೇ ಅಡಿಕೆ ಮಾರಾಟ ಮಾಡಬೇಕು.
  • ಅಡಿಕೆ ಬೆಲೆ ಸ್ಥಿರೀಕರಣ, ಅಡಿಕೆ ಕೃಷಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ವ್ಯಾಪಕ ಅಧ್ಯಯನ ನಡೆಸಿ, ಸೂಕ್ತ ಮಾರ್ಗೋಪಾಯ ಸೂಚಿಸಲು ಕೇಂದ್ರ ಸರಕಾರ ತಜ್ಞರ ಸಮಿತಿಯಾಂದನ್ನು ನೇಮಿಸಬೇಕು.
(ಮಂಗಳೂರು ಪ್ರತಿನಿಧಿಯಿಂದ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X