Get Updates
Get notified of breaking news, exclusive insights, and must-see stories!

ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಷೇರುಪೇಟೆ ಪ್ರವೇಶ

ಬೆಂಗಳೂರು : ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಬಂಡವಾಳ ವರ್ಧನೆಗಾಗಿ ಷೇರುಪೇಟೆ ಪ್ರವೇಶಿಸಲಿದೆ ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಸ್‌.ಸಿ. ಗುಪ್ತಾ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 10 ರುಪಾಯಿಗಳ ಮುಖಬೆಲೆಯ 11.12ಕೋಟಿ ಷೇರುಗಳನ್ನು ಸೆ.25ರಂದು ಷೇರುಪೇಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅಕ್ಟೋಬರ್‌ 5 ಕೊನೆಯ ದಿನವಾಗಿರುತ್ತದೆಂದೂ ತಿಳಿಸಿರುವ ಅವರು, ಷೇರು ಮಾರಾಟದಿಂದ ಪ್ರಸಕ್ತ ಇರುವ ಬಂಡವಾಳವನ್ನು 333.60 ಕೋಟಿ ರುಪಾಯಿಗಳಿಂದ 444.80 ಕೋಟಿ ರುಪಾಯಿಗಳಿಗೆ ಹೆಚ್ಚಿಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಮಾರ್ಚ್‌ ಅಂತ್ಯದವರೆಗೆ ಬ್ಯಾಂಕ್‌ನ ಠೇವಣಿ 24,318 ಕೋಟಿ ರು.ಗಳಿಗೆ ತಲುಪಿದ್ದು, ಕೇಂದ್ರ ಕಚೇರಿಯ ಕಂಪ್ಯೂಟರ್‌ ನೀತಿ ಹಾಗೂ ಯೋಜನಾ ಇಲಾಖೆಗಳು ತಮ್ಮ ಕಾರ್ಯವೈಖರಿಯಿಂದ ಬ್ಯಾಂಕ್‌ಗೆ ಐಎಸ್‌ಓ -9001 ಪ್ರಮಾಣಪತ್ರ ದೊರಕುವಂತೆ ಮಾಡಿವೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+