ಗೋವಾಗೆ ಹೋಗೋಣ ಬರುತ್ತೀರಾ ?
ರಜಾ ಬಂದಾಗ ಅಥವಾ ಬೇಜಾರಾದಾಗ, ಅಥವಾ ಬೋನಸ್ ಬಂದಾಗ ನಾವು ಕರ್ನಾಟಕದ ಮಂದಿ ಏನು ಮಾಡುತ್ತೇವೆ ಗೊತ್ತೆ ? ಎಲ್ಲಾದರೂ ಹೋಗಿ ನಾಲ್ಕು ದಿನ ಹಾಯಾಗಿ ಇದ್ದು ಬರೋಣ, ರೊಟೀನ್ ಲೈಪ್ ಸಖತ್ ಬೋರಾಗುತ್ತಿದೇ ಗುರೂ ಎನ್ನುತ್ತೇವೆ. ಯಾರಾದರೊಬ್ಬರು ಎಳೆಯುವ ಇಂಥ ರಾಗಕ್ಕೆ ಇನ್ನಿಬ್ಬರು ಹಾರ್ಮೋನಿಯಂ ನುಡಿಸಿದರೆ ಸಾಕು ಟ್ರಿಪ್ ಕಾರ್ಯಕ್ರಮ ಹೆಚ್ಚೂ ಕಡಿಮೆ ಸಿದ್ಧವಾಗಿ ಬಿಡುತ್ತದೆ. ಆದರೆ ಒಂದು ಪ್ರಾಬ್ಲಂ. ಎಲ್ಲಿಗೆ ಹೋಗುವುದು ? ಅದೇ ದೊಡ್ಡ ಸಮಸ್ಯೆ. ಒಂದು ಕಡೆ ನೀರಿದ್ದರೆ ಊಟ ಸಿಗಲ್ಲ, ಇನ್ನೊಂದು ಕಡೆ ಇವೆರಡೂ ಸಿಕ್ಕರೆ ಉಳಿದುಕೊಳ್ಳುವುದಕ್ಕೆ ಜಾಗ ಇರುವುದಿಲ್ಲ. ಎಲ್ಲಾ ಸಿಗತ್ತೆ ಅಂತ ತಿಳ್ಕಳಿ. ಮಜಾ ಏನೆಂದರೆ ಆ ಜಾಗ ತಲುಪುವುದಕ್ಕೆ ಸರಿಯಾದ ಬಸ್ಸೇ ಇರುವುದಿಲ್ಲ. ಜಾಸ್ತಿ ತಲೆ ಕೆಡಿಸಿಕೊಂಡು ಪ್ರಯೋಜನ ಇಲ್ಲ ಅಂದುಕೊಂಡು ಕೊನೆಗೆ ನಾವು ಎಲ್ಲಿಗೆ ಹೋಗುತ್ತೇವೆ ಗೊತ್ತೆ ? ಚಿತ್ರಾನ್ನ, ಮೊಸರನ್ನ ಕಟ್ಟಿಕೊಂಡು ಸೀದಾ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ! ದಾಸ್ಯ ಸಂಕೋಲೆಯಿಂದ ಬಸವಳಿದ ಹ್ಯಾಪಮೋರೆಯ ನಾಲ್ಕು ಸಿಂಹಗಳನ್ನ ನೋಡಕ್ಕೆ !
ಹೇಳಿಕೊಳ್ಳುವಷ್ಟು ಬೇಜಾರಾಗಿಲ್ಲ, ಅಕೊಂಟ್‌ನಲ್ಲಿ ಜಾಸ್ತಿ ರಜಾನೂ ಇಲ್ಲ, , ಇನ್ನು ಬೋನಸ್ ಬರಬೇಕಾದರೆ ದೀಪಾವಳಿಯವರೆವಿಗೂ ಕಾಯಬೇಕು. ಹಾಗಿದ್ದೂ ಈ ಟೈಂನಲ್ಲಿ ಪಿಕ್‌ನಿಕ್ ಹೋಗೋ ಯೋಚನೆ ಏಕಾದರೂ ಬಂತು ?
ಗೋವಾದಿಂದ ಒಂದು ಸಮಾಚಾರ ಬಂತು ಅದಕ್ಕೆ.
ನೀವು ಏನೇ ಹೇಳಿ. ಗೋವಾದಲ್ಲಿ ಅದೆಂಥ ಬೀಚ್‌ಗಳೇ ಇರಲಿ, ನಿಸರ್ಗ ಸೌಂದರ್ಯ ಅದೆಷ್ಟೇ ತುಂಬಿತುಳುಕುತ್ತಿರಲಿ, ನಮ್ಮ ಫ್ರೆಡ್ಸ್ ಗ್ಯಾಂಗ್‌ಗೆ ಗೋವಾ ಅಂದಾಕ್ಷಣ ಬೆಂಗಳೂರಿಗಿಂತ ಕಡಿಮೆ ರೇಟ್‌ನಲ್ಲಿ ದೊರೆಯುವ ಬೀರು, ರಮ್ಮು, ಫೆನ್ನಿ ನೆನಪಾಗಿ ಒಂದು ಕ್ಷಣ ತಲೆ ಸುತ್ತಿಬರತ್ತೆ. ಕರ್ನಾಟಕ ಗೌರ್ನಮೆಂಟ್ ಥರ ಗೋವಾ ಸರಕಾರ ಯಾವತ್ತೂ ಗುಂಡಿನ ಮೇಲೆ ಸಿಕ್ಕಾಪಟ್ಟೆ ತೆರಿಗೆ ಹಾಕುವುದಿಲ್ಲ. ಅದಕ್ಕೇ ಮಾಲು ಅಲ್ಲಿ ತುಂಬಾ ಚೀಪು. ಅದಕ್ಕೇ ನಮ್ಮ ಹುಡುಗರು ಹೇಳುತ್ತಾರೆ : ಇನ್ನೇಕೆ ತಡ. ನಡೀರಿ ಹೋಗೋಣ ಇವತ್ತೇ ತೆಗೀರಿ ನಿಮ್ಮ ಜೀಪು.
ಗೋವಾದ ಮಜಾ ನಮಗೆ ಗೊತ್ತು, ನಿಮಗೂ ಗೊತ್ತಿದೆ. ಆದರೆ ಎಲ್ಲ ಸುಖಗಳ ಹಿಂದೆಯೇ ಕಷ್ಟಗಳು ಕೈಕಟ್ಟಿಕೊಂಡು ಕಾಯುತ್ತಾ ಕುಳಿತಿರುತ್ತದೆ ಎನ್ನುವುದು ಎಷ್ಟು ಮಂದಿಗೆ ಗೊತ್ತು ? ಗೋವಾದ ಮಂದಿಯ ಬೆನ್ನು ಹತ್ತಿರುವ ಹೆಂಡದ ಪಿಶಾಚಿಯ ಉಪದ್ರವಗಳು ಇವತ್ತು ಎಲ್ಲಿಯ ತನಕ ಬಂದಿದೆ ಎಂದರೆ...............
1 ಮುಖಪುಟ / ನೋಡು ಬಾ ನಮ್ಮೂರ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications