Get Updates
Get notified of breaking news, exclusive insights, and must-see stories!

ಮಂತ್ರಿಗಳ ಅಪಹರಣ ಆಗಿದ್ದರೆ, ಇಷ್ಟು ವಿಳಂಬ ಮಾಡುತ್ತಿದ್ದರೆ ?

ಬೆಂಗಳೂರು : ಟಾಡಾ ಬಂದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸರ್ವೋನ್ನತ ನ್ಯಾಯಾಲಯ ಸಮ್ಮತಿಸುತ್ತದೆ. ಒಂದೆರಡು ದಿನದಲ್ಲೇ ಗೋಪಾಲ್‌ ಕಾಡಿಗೆ ಹೋಗುತ್ತಾರೆ. ನಾಲ್ಕಾರು ದಿನದಲ್ಲೇ ರಾಜ್‌ ಬಿಡುಗಡೆ ಆಗುತ್ತದೆ ಎಂಬ ನಿರೀಕ್ಷೆಯೆಲ್ಲ ಈಗ ಹುಸಿಯಾಗಿದೆ.

ಸರ್ವೋನ್ನತ ನ್ಯಾಯಾಲಯ ನೀಡಿರುವ ತೀರ್ಪಿನಿಂದಾಗಿ ರಾಜ್‌ ಬಿಡುಗಡೆ ಬಹುತೇಕ ಇನ್ನೂ ಒಂದು ತಿಂಗಳು ಮುಂದಕ್ಕೆ ಹೋದಂತಾಗಿದೆ. ಇಷ್ಟು ದಿನ ತೆಪ್ಪಗಿದ್ದ ರಾಜ್‌ ಅಭಿಮಾನಿಗಳನ್ನು ಇದು ಕೆರಳಿಸಿದೆ. ರಾಜ್‌ ಬಿಡುಗಡೆ ಮತ್ತೂ ವಿಳಂಬವಾಗುತ್ತದೆ ಎಂಬ ಸುದ್ದಿಯಿಂದ ಉಗ್ರರಾಗಿದ್ದ ರಾಜ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಸರಕಾರದ ಮೇಲೆ ಕಿಡಿ ಕಾರಿದ್ದಾರೆ.

ಪ್ರಧಾನ ಮಂತ್ರಿಯನ್ನೋ, ಒಬ್ಬ ಮಂತ್ರಿಯನ್ನೋ ಅಪಹರಿಸಿದ್ದರೆ, ಆಗಲೂ ಇಷ್ಟು ವಿಳಂಬವಾಗಲು ಬಿಡುತ್ತಿದ್ದರೆ? ನಮ್ಮನ್ನೇನು ಅವರು ಹರಕೆಯ ಕುರಿಗಳೆಂದು ತಿಳಿದಿದ್ದಾರೆಯೇ? ಇದು ಹೀಗೇ ಮುಂದುವರಿದರೆ, ಏನಾಗುತ್ತದೋ ಗೊತ್ತಿಲ್ಲ. ಬೆಂಗಳೂರು ಬಂದ್‌, ಕರ್ನಾಟಕ ಬಂದ್‌... ಮುಂದೇನು ಎಂದು ಊಹಿಸಿಕೊಳ್ಳುವುದೂ ಕಷ್ಟ ಎಂದು ಉಕ್ಕಿ ಬರುತ್ತಿದ್ದ ಕೋಪದಲ್ಲಿ ನುಡಿದಿದ್ದಾರೆ.

ಅಣ್ಣಾವ್ರಿಗೆ 72 ವರ್ಷ ವಯಸ್ಸಾಗಿದೆ. ಅವರು ಇನ್ನೂ ಎಷ್ಟು ದಿನ ಆ ಕಾಡಿನಲ್ಲಿ ಯಾತನೆ ಅನುಭವಿಸಬೇಕು. ಅವರ ಕಷ್ಟ ಇವರಿಗೆ ಗೊತ್ತಾಗುತ್ತಿಲ್ಲವೇ ? ಎಂದು ಗೋವಿಂದು ಕಿಡಿ ಕಾರಿದ್ದಾರೆ.

ರಾಜ್‌ಕುಟುಂಬದವರ ಮೌನ : ಸುಪ್ರೀಂ ಕೋರ್ಟ್‌ ತೀರ್ಪು ಆಶಾದಾಯಕವಾಗಿರುತ್ತದೆ, ತಮ್ಮ ಅಪ್ಪಾಜಿ ಬಿಡುಗಡೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರಾಜ್‌ ಪುತ್ರರು ಕಂಗೆಟ್ಟಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಈ ಹೊತ್ತಿನವರೆಗೆ ಪತ್ರಕರ್ತರ ಕಣ್ಣಿಗೆ ಬಿದ್ದಿಲ್ಲ. ರಾಜ್‌ ಅವರ ಕಿರಿಯ ಮಗ ಪುನೀತ್‌ ರಾಜ್‌ಕುಮಾರ್‌ ಏನೂ ಹೇಳುವ ಸ್ಥಿತಿಯಲಿಲ್ಲ. ಪುನೀತ್‌ ಕೂಡ ಆತಂಕಕ್ಕೆ ಸಿಲುಕಿದ್ದಾರೆ. ಸರ್ವೋನ್ನತ ನ್ಯಾಯಾಲಯ ಅಕ್ಟೋಬರ್‌ 11ರ ನಂತರವೂ ವಿಚಾರಣೆಯನ್ನು ಮುಂದಕ್ಕೆ ಹಾಕಿದರೆ ಹೇಗೆ ಎಂಬ ಚಿಂತೆ ಅವರ ಮುಖದಲ್ಲಿ ವ್ಯಕ್ತವಾಗಿತ್ತು. ನಾನು ಈ ಬಗ್ಗೆ ಏನೂ ಹೇಳಲಾರೆ. ನನಗೆ ನಾಳೆಯವರೆಗೆ ಕಾಲಾವಕಾಶ ನೀಡಿ ಎಂದಷ್ಟೇ ಪುನೀತ್‌ ಹೇಳಿದ್ದಾರೆ.

ಕರೀಂ ಮೇಲೆ ಒತ್ತಡ ಇಲ್ಲ : ತಮ್ಮ ತಂದೆಯ ಶೀಘ್ರ ಬಿಡುಗಡೆಗಾಗಿ ವೀರಪ್ಪನ್‌ ಸಹಚರರಿಂದ ಹತರಾದ ಪೊಲೀಸ್‌ ಅಧಿಕಾರಿ ಶಖೀಲ್‌ ಅಹ್ಮದ್‌ ಅವರ ತಂದೆ ಅಬ್ದುಲ್‌ ಕರೀಂ ಅವರಿಗೆ ವಿಶೇಷ ತೆರವು ಅರ್ಜಿಯನ್ನು ವಾಪಸು ಪಡೆಯುವಂತೆ ತಾವು ಒತ್ತಾಯಿಸುವುದಿಲ್ಲ ಎಂದು ಪುನೀತ್‌ ಸೋಮವಾರ ತಿಳಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+