• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳ ಜೊತೆಗೊಂದು ಆಟವೆಂಬ ಪಾಠ

By Staff
|

ಹೊಸದಿಲ್ಲಿ : ರಮಣ್‌ಲಾಲ್‌ ಸೋನಿ ಎಂಬ 40ರ ಹರೆಯದ ಶಿಕ್ಷಕರ ಮಂದೆ ಶಾಲೆಯಲ್ಲಿ ಕಪ್ಪು ಬೋರ್ಡ್‌ ಇರುವುದಿಲ್ಲ. ಬದಲಾಗಿ ಬಿಳಿಯ ಪರದೆ ಇರುತ್ತದೆ. ಇದು ಮಕ್ಕಳಿಗೆ ಪಾಠ ಹೇಳಲು ರಮಣ್‌ಲಾಲ್‌ ಕಂಡುಕೊಂಡಿರುವ ಪರ್ಯಾಯ ಸಾಧನ.

ಭಾರತದ ಹಳ್ಳಿಗಳಿಂದ ಬಂದ ರಮಣ್‌ಲಾಲ್‌ ಅವರಂಥ ಇನ್ನೂ ಐವರು ಶಿಕ್ಷಕರು, ಶಿಕ್ಷಕರ ದಿನಾಚರಣೆ ಅಂಗವಾಗಿ ಹೊಸದಿಲ್ಲಿಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಬೋಧನೆ ಬಗೆಗಿನ ತಮ್ಮ ಹೊಸ ಪ್ರಯೋಗಗಳನ್ನು ಸಾದರಪಡಿಸಿದರು. ಅದಕ್ಕಾಗಿ ಸಮಾರಂಭದಲ್ಲಿ ಸನ್ಮಾನಕ್ಕೂ ಪಾತ್ರರಾದರು.

ಯುನೆಸ್ಕೋ ಹಾಗೂ ನ್ಯಾಷನಲ್‌ ಕೌನ್ಸಿಲ್‌ ಫಾರ್‌ ಟೀಚರ್‌ ಎಜುಕೇಷನ್‌ (ಎನ್‌ಸಿಟಿಇ) ಜಂಟಿಯಾಗಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ತೊಗಲು ಗೊಂಬೆ, ಆಟಿಕೆಗಳು, ಹಾಡುಗಳು, ನೃತ್ಯದ ಜೊತೆಗ ತಮ್ಮ ಅಪಾರ ಉತ್ಸಾಹವನ್ನೂ ಸೇರಿಸಿ ತಮ್ಮ ಹೊಸ ಬೋಧನಾ ವಿಧಾನವನ್ನು ಪ್ರಸ್ತುತಪಡಿಸಿದರು.

ಶಿಕ್ಷಕನಾಗಿ 40 ವರ್ಷಗಳು ಕಳೆದಿರುವ ಸೋನಿ ಅವರು 15ವರ್ಷ ಒಂದನೇ ತರಗತಿ ಮಕ್ಕಳಿಗೆ ಬೋಧಿಸಿದ್ದಾರೆ. ಹಾಗಾಗಿ ಮಕ್ಕಳ ನಾಡಿಮಿಡಿತ ಅವರಿಗೆ ಚೆನ್ನಾಗಿ ಗೊತ್ತು. ಅವರಿಗಾಗಿ ಇಂಗ್ಲಿಷ್‌ ಅಂಕಿಗಳನ್ನು ಗುಜರಾತಿಯಲ್ಲಿ ಸುಲಭವಾಗಿ ಓದಲು ಸಾಧ್ಯವಾಗುವಂತೆ ಒಂದು ಸಾಧನವನ್ನೇ ರೂಪಿಸಿದ್ದಾರೆ.

ಹತ್ತು ಲಕ್ಷ ರುಪಾಯಿ ವಿನಿಯೋಗ : ಇಂಥದೇ ಕಾಳಜಿ ಹೊಂದಿರುವ ಇನ್ನೊಬ್ಬ ಶಿಕ್ಷಕ ಅಜಿತ್‌ಸಿನ್ಹ್‌ ಸೋಳಂಕಿ, ಗುಜರಾತಿನ ಹಳ್ಳಿಯ ಶಾಲೆಗಳಿಗೆ ಶೈಕ್ಷಣಿಕ ಸವಲತ್ತುಗಳು ಮತ್ತು ಹಬ್ಬ-ಹರಿದಿನಗಳಿಗೆ ಹತ್ತು ಲಕ್ಷ ಹಣ ಚೆಲ್ಲಿದ್ದಾರೆ. ಇದರಲ್ಲಿ ಶಾಲಾ ಕಟ್ಟಡಗಳ ದುರಸ್ತಿ ಕೂಡಾ ಸೇರಿದೆ. 1974ರಲ್ಲಿ ಗುಜರಾತ್‌ನ ಲಖಾಂಕ ಹಳ್ಳಿಗೆ ವರ್ಗವಾಗಿ ಬಂದ ಸೋಳಂಕಿ, ಶಾಲೆಯ ಕಟ್ಟಡದ ಸ್ಥಿತಿ ನೋಡಿ ಭಯಗೊಂಡರಂತೆ. ವಿನಾಶದ ಹಾದಿ ಹಿಡಿದಿದ್ದ ಕಟ್ಟಡದಲ್ಲಿಯೇ ರಾತ್ರಿ ಹೊತ್ತು ಜೂಜು ನಡೆಯುತ್ತಿತ್ತು. ಹಾಗಾಗಿ ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಪೋಷಕರನ್ನು ಕೇಳುವ ಮೊದಲು ಶಾಲೆಯ ಸಮಸ್ಯೆಗಳನ್ನು ಸರಿಪಡಿಸಲು ತಾವು ಪಣ ತೊಟ್ಟಿದ್ದಾಗಿ ಸೋಳಂಕಿ ಹೇಳುತ್ತಾರೆ.

ವೈಜ್ಞಾನಿಕ ಸಮಸ್ಯೆಗಳನ್ನು ಬಿಡಿಸಲು, ಬೋಧನೆಗಾಗಿ ಆಟಿಕೆಗಳನ್ನು ಬಳಸಿ ಆರು ತಿಂಗಳು ಯಾವುದೇ ಸಂಬಳವಿಲ್ಲದೆ ಮಧ್ಯಪ್ರದೇಶದಲ್ಲಿ ಕೆಲಸ ಮಾಡಿದ ಮಂಜುಬಾಯ್‌ ಪ್ರಜಾಪತಿ ಎಂಬ ಶಿಕ್ಷಕರನ್ನು , ಆರು ತಿಂಗಳ ನಂತರ ಶಿಕ್ಷಣ ಅಧಿಕಾರಿ ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲು ಒಪ್ಪಿದರು. ಇದು ನಡೆದದ್ದು 1967ರಲ್ಲಿ .

ತೊಗಲು ಬೊಂಬೆಗಳ ಬಳಕೆ : ಇಂಥದೇ ಉದಾಹರಣೆ ಗುಜರಾತಿನಲ್ಲಿ ಇನ್ನೊಂದಿದೆ. ಜೋಹ್ರಾ ದೋಲಿಯಾ ಎಂಬ ಶಿಕ್ಷಕರು ತಾಜ್ಯ ವಸ್ತುಗಳಿಂದ ತಾವೇ ತಯಾರಿಸಿದ ಅನೇಕ ಉಪಕರಣಗಳನ್ನು ಪಾಠ ಹೇಳಲು ಬಳಸುತ್ತಿದ್ದರು. ಜ್ಞಾನೇಶ್ವರ ದುಭೆ ಎಂಬ ಇನ್ನೊಬ್ಬ ಶಿಕ್ಷಕರು ತೊಗಲು ಬೊಂಬೆಗಳನ್ನು ಬಳಸಿ ಜೋಕುಗಳನ್ನು ಹೇಳುತ್ತಾ ಮಕ್ಕಳ ಆಸಕ್ತಿಯನ್ನು ತಮ್ಮ ಪಾಠದ ಕಡೆಗೆ ಸದಾ ಇಟ್ಟುಕೊಂಡಿರುತ್ತಿದ್ದರು. ಆ ಮೂಲಕ ಬೋಧಿಸುತ್ತಿದ್ದರು.

ಈ ಎಲ್ಲಾ ಶಿಕ್ಷಣ ತಜ್ಞರ ವಿರುದ್ದ ನಡೆಯುತ್ತಿದ್ದ ಅಪಪ್ರಚಾರ ನವದೆಹಲಿಯಲ್ಲಿರುವ ಯುನೆಸ್ಕೋ ನಿರ್ದೇಶಕ ಮಯೋಗಿಡಿ ಅವರ ಕಿವಿಗೂ ಬಿತ್ತು. ವ್ಯಾಪಕ ಪ್ರಚಾರ ದೊರೆಯಿತು. ನಂತರ ಪುಟ್ಟ ಮಕ್ಕಳ ಗಮನವನ್ನು ಒಂದೆಡೆ ಇಟ್ಟುಕೊಳ್ಳುವುದು ಹೇಗೆಂಬ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳತೊಡಗಿದರು. ಆದ್ದರಿಂದ ಚಿಕ್ಕಮಕ್ಕಳ ಬಗೆಗಿನ ಶೈಕ್ಷಣಿಕ ಪ್ರಯೋಗಗಳು ಕೆಲವು ವರ್ಷಗಳ ನಂತರ ಈಗ ಮುಂದುವರಿಯುತ್ತಿವೆ. ಇವತ್ತು ಭಾರತದಲ್ಲಿನ ಶೈಕ್ಷಣಿಕ ವ್ಯವಸ್ಥೆ ತುಂಬಾ ಬದಲಾವಣೆಗಳಿಗೆ ತೆರೆದುಕೊಂಡಿದೆ.

ಪ್ರಾಥಮಿಕ ಶಿಕ್ಷಣಕ್ಕಾಗಿ ಕಡಿಮೆ ಹಣ : ಭಾರತಾದ್ಯಂತ ಇರುವ 8 ಲಕ್ಷ ಶಾಲೆಗಳ ಸುಮಾರು 40 ಲಕ್ಷ 30 ಸಾವಿರ ಶಿಕ್ಷಕರಿದ್ದಾರೆ. ದೇಶದ ಒಟ್ಟು ಉತ್ಪಾದನೆಯ ಶೇಕಡಾ 3.9ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತಿದೆ. ಅದರಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ಕೇವಲ 1.9ರಷ್ಟನ್ನು ತೆಗೆದಿಡಲಾಗುತ್ತಿದೆ.

ಪ್ರಾಥಮಿಕ ಶಾಲೆಗಳಲ್ಲಿ ಬೋಧಿಸಲು ಹೊಸ ವಿಧಾನಗಳು ಇಂದಿನ ಅಗತ್ಯವಾಗಿದ್ದು, ಅಂಥ ಸಾಧನಗಳಿಗಾಗಿ ಹಣಕಾಸು ಸೇರಿದಂತೆ ಇತರ ಸೌಲಭ್ಯಗಳಿಗಾಗಿ ಶಿಕ್ಷಕರು ನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇಷ್ಟೆಲ್ಲಾ ಕಷ್ಟಗಳ ನಡುವೆಯೇ ಪ್ರಾಥಮಿಕ ಶಿಕ್ಷದ ಬಗ್ಗೆ ಕಾಳಜಿ ತೋರುವ ಅನೇಕ ಮಾಧರಿ ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಗುಜರಾತ್‌ನ ಮೋತಿಬಾಯಿ ನಾಯಕ್‌ ಎಂಬ ಒಬ್ಬ ಶಿಕ್ಷಕರು ಜಾನಪದ ನಾಟಕ ಕ್ಷೇತ್ರಕ್ಕೆ ತಮ್ಮ ಕುಟುಂಬವನ್ನೇ ಅರ್ಪಿಸಿದ್ದ ಉದಾಹರಣೆಯೂ ಇದೆ. 1972ರಿಂದ ಗುಜರಾತಿನ ಖಾಂಬಿಸಾರ್‌ ಹಳ್ಳಿಯ ಪ್ರಾಥಮಿಕ ಶಾಲೆಗೆ ಶೇಕಡಾ 100ರಷ್ಟು ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳನ್ನು ದಾಖಲು ಮಾಡುತ್ತಾ ಬಂದಿರುವ ಕೀರ್ತಿಯೂ ಮೋತಿಬಾಯಿ ನಾಯಕ್‌ ಅವರಿಗಿದೆ. ಇಂಥವೇ ಉದಾಹರಣೆಗಳು ಗುರುದೇವೋಭವ ಎಂಬ ಮಹಾಮಂತ್ರದ ಹುಟ್ಟಿಗೆ ಕಾರಣವಾಗಿಹುದಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more