ಕಿರುಕುಳ ಪ್ರತಿಭಟಿಸಿ ನಾಡ ದೋಣಿ ಮೀನುಗಾರರ ಪ್ರತಿಭಟನೆ
ಕಾರವಾರ : ಬೃಹತ್ ಪ್ರಮಾಣದ ಮೀನುಗಾರರ ದೋಣಿಯಿಂದ, ನಾಡದೋಣಿಯವರ ಮೀನುಗಾರಿಕೆಗೆ ಆಗುತ್ತಿರುವ ಕಿರುಕುಳವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೆಪ್ಟೆಂಬರ್ 18ರಂದು ಸೋಮವಾರ ಕಾರವಾರದ ಮಾಜಾಳಿಯಲ್ಲಿ ಉತ್ತರ ಕನ್ನಡ ಕರಾವಳಿ ನಾಡದೋಣಿಗರ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ಕಾರವಾರ ಜಿಲ್ಲಾ ಗಿಲ್ನೆಟ್ (ನಾಡದೋಣಿ) ಒಕ್ಕೂಟ ಪ್ರಕಟಿಸಿದೆ.
ನಾಡದೋಣಿಯವರು ಸಮುದ್ರ ತೀರದ ಗುಂಟ ಹಾಗೂ ದಂಡೆಯ ಸಮೀಪ ಬಲೆ ಬೀಸಿ ಮೀನು ಹಿಡಿಯುವಾಗ ದೊಡ್ಡ ಬೋಟಿನವರು ಬಂದು, ಬೀಸಿದ ಬಲೆ ಹರಿದು ಮೀನು ಹಿಡಿಯಲು ಅಡ್ಡಿ ಪಡಿಸುತ್ತಿದ್ದಾರೆ. ಈ ಕುರಿತು ಪ್ರತಿಭಟಿಸಿದರೆ, ವೈರ್ ಲೆಸ್ ಮೂಲಕ ಮತ್ತಷ್ಟು ಬೋಟಿನವರನ್ನು ಕರೆಸಿ ಜೀವಕ್ಕೆ ಬೆದರಿಕೆ ಹಾಕುತ್ತಾರೆ. ಕಳೆದ ಗುರವಾರವಷ್ಟೇ ಮಾಜಾಳಿಯಲ್ಲಿ ಇಂತಹುದೇ ಘಟನೆಯಾಂದು ನಡೆದ ಪರಿಣಾಮ ಸಂಬಂಧಿತರಿಗೆ ಆರು ಲಕ್ಷ ರೂಪಾಯಿ ಹಾನಿಯಾಗಿರುವುದಾಗಿ ಒಕ್ಕೂಟ ಹೇಳಿದೆ.
ಇಂತಹ ಬೆದರಿಕೆ ಪ್ರಕರಣದ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ , ಹೋರಾಟದ ಮುಂದಿನ ಹಂತವಾಗಿ, ಮೀನು ಹಿಡಿಯುವ ದೊಡ್ಡ ಬೋಟುಗಳನ್ನು ಅಡ್ಡಗಟ್ಟುವುದು, ರಸ್ತೆ ತಡೆ, ಮೀನುಗಾರಿಕೆ ಬಂದ್ನಂತಹ ಪ್ರತಿಭಟನಾ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಒಕ್ಕೂಟ ಹೇಳಿದೆ.
(ಕಾರವಾರ ಪ್ರತಿನಿಧಿಯಿಂದ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications